Advertisement

ಜ.1ರಿಂದ ಎಸ್‌ಬಿಐ ATMಗಳಲ್ಲಿ OTP ಆಧರಿತ ವಿತ್‌ಡ್ರಾ

10:09 AM Dec 28, 2019 | sudhir |

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ಗಳ (ಎಸ್‌ಬಿಐ)ಎಟಿಎಂಗಳಲ್ಲಿ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಜ.1ರಿಂದ ಒನ್‌ಟೈಂ ಪಾಸ್‌ವರ್ಡ್‌ (ಒಟಿಪಿ) ಆಧಾರಿತ ಸೇವೆಯನ್ನಾಗಿ ಮಾರ್ಪಡಿಸುವುದಾಗಿ ಎಸ್‌ಬಿಐ ಪ್ರಕಟಿಸಿದೆ.

Advertisement

“ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ 10,000 ರೂ.ಗಳಿಗಿಂತಲೂ ಹೆಚ್ಚು ಹಣ ವಿತ್‌ಡ್ರಾ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಎಟಿಎಂ ಕಾರ್ಡ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಟ್ವಿಟರ್‌ನಲ್ಲಿ ಬ್ಯಾಂಕ್‌ ಪ್ರಕಟಿಸಿದೆ.

ಏನಿದು ವ್ಯವಸ್ಥೆ?: ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವವರು ಎಟಿಎಂ ಯಂತ್ರದಲ್ಲಿ ತಮ್ಮ ಪಿನ್‌ ಸಂಖ್ಯೆ, 10,000 ರೂ. ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ನಮೂದಿಸಿದ ನಂತರ, ಗ್ರಾಹಕರ ಖಾತೆಯೊಂದಿಗೆ ಜೋಡಿಸಲ್ಪಟ್ಟಿರುವ ಅವರ ಮೊಬೈಲ್‌ ಸಂಖ್ಯೆಗೆ ನಾಲ್ಕು ಅಂಕಿಗಳ ಒಟಿಪಿ ರವಾನೆಯಾಗುತ್ತದೆ. ಆ ಸಂಖ್ಯೆಯನ್ನು ಎಟಿಎಂನಲ್ಲಿ ನಮೂದಿಸಿದ ನಂತರವಷ್ಟೇ ಗ್ರಾಹಕರು ತಾವು ಬಯಸಿದ ಹಣವನ್ನು ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next