Advertisement

Cardless Cash: ಎಸ್‌ ಬಿಐನ ಪರಿಷ್ಕೃತ “YONO App” ನಲ್ಲಿ ಏನೇನು ಬದಲಾವಣೆಯಾಗಿದೆ…

05:01 PM Jul 03, 2023 | Team Udayavani |

ನವದೆಹಲಿ: ದೇಶದ ಅತೀ ದೊಡ್ಡ ಪಬ್ಲಿಕ್‌ ಸೆಕ್ಟರ್‌ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ( SBI) ತನ್ನ ಡಿಜಿಟಲ್‌ ಬ್ಯಾಂಕಿಂಗ್‌ ಆಪ್ಲಿಕೇಶನ್‌ “YONO” ಅನ್ನು ಪರಿಷ್ಕರಿಸಿದ್ದು, ಇದರಿಂದಾಗಿ ಪ್ರತಿಯೊಬ್ಬ ಗ್ರಾಹಕರು ಕಾರ್ಡ್‌ ಲೆಸ್‌ ಕ್ಯಾಶ್‌ ಅನ್ನು ಪಡೆಯಲು ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.

Advertisement

ಇದನ್ನೂ ಓದಿ:ಕೊಲ್ಲೂರಿನಲ್ಲಿ ಚಿನ್ನಾಭರಣ ಕಳವು; ಆರೋಪಿ ಶಿವಮೊಗ್ಗದಲ್ಲಿ ಬಂಧನ

ಇದೊಂದು ಕಾರ್ಡ್‌ ಲೆಸ್‌ ವ್ಯವಹಾರವಾಗಿದ್ದು, ಈ ಮೊದಲು ಎಸ್‌ ಬಿಐನ 16,500 ಎಟಿಎಂಗಳಲ್ಲಿ ಬಳಸಬಹುದಾಗಿತ್ತು. ಈ ರೀತಿಯ ಎಟಿಎಂಗಳನ್ನು ಯೋನೊ ಕ್ಯಾಶ್‌ ಪಾಯಿಂಟ್‌ ಎಂದು ಕರೆಯಲಾಗುತ್ತದೆ.

ಪರಿಷ್ಕೃತ YONO App ಕುರಿತು ಮಾಹಿತಿ ನೀಡಿರುವ ಎಸ್‌ ಬಿಐ ಅಧ್ಯಕ್ಷ ದಿನೇಶ್‌ ಖರಾ ಅವರು, ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಎಸ್‌ ಬಿಐ ಅಗ್ರಸ್ಥಾನದಲ್ಲಿದ್ದು, ಗ್ರಾಹಕರಿಗೆ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸುಲಲಿತವಾಗಿ ವ್ಯವಹರಿಸುವ ನಿಟ್ಟಿನಲ್ಲಿ YONO App ಅನ್ನು ಅಪ್‌ ಡೇಟ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪರಿಷ್ಕೃತ YONO Appನಿಂದ ಗ್ರಾಹಕರಿಗೆ ಲಾಭವೇನು?

Advertisement

Interoperable cardless Money withdrawal (ICCW) ಸೌಲಭ್ಯದ ಮೂಲಕ ಎಸ್‌ ಬಿಐ ಹಾಗೂ ವಿವಿಧ ಬ್ಯಾಂಕ್‌ ಗಳ ಗ್ರಾಹಕರು “ಕಾರ್ಡ್‌ ಲೆಸ್”‌ ನಗದನ್ನು ಯಾವುದೇ ಬ್ಯಾಂಕ್‌ ಗಳ ಎಟಿಎಂನಿಂದ ಪಡೆಯಬಹುದಾಗಿದೆ.

ಪರಿಷ್ಕೃತ App ಸೌಲಭ್ಯದಲ್ಲಿ PIN ಅಥವಾ ಡೆಬಿಟ್‌ ಕಾರ್ಡ್‌ ಅಗತ್ಯವಿಲ್ಲ. ಅಷ್ಟೇ ಅಲ್ಲ ICCW ಸೌಲಭ್ಯದಲ್ಲಿ ಎಟಿಎಂನಲ್ಲಿ ನಡೆಯುವ Spying ಮತ್ತು ಕಾರ್ಡ್‌ ಮಾಹಿತಿಯನ್ನು ಸಂಗ್ರಹಿಸುವ ಅಪಾಯವನ್ನು ತಡೆಗಟ್ಟಲು ಸಹಾಯಕವಾಗಿದೆ. ಯಾವುದೇ ತಾಂತ್ರಿಕ ಅಡೆತಡೆ ಇಲ್ಲದೇ ಡೆಬಿಟ್‌ ಕಾರ್ಡ್‌ ಇಲ್ಲದೆಯೇ ನಗದು ಪಡೆಯಬಹುದಾಗಿದೆ.

ಗ್ರಾಹಕರು ಈ ಸೌಲಭ್ಯ ಪಡೆಯಲು YONO App ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಎಟಿಎಂ ಸ್ಕ್ರೀನ್‌ ನಲ್ಲಿ QR ಕೋಡ್‌ ಡಿಸ್‌ ಪ್ಲೇ ಆಗಲಿದ್ದು, ಈ ಮೂಲಕ ಗ್ರಾಹಕರು ತಮ್ಮ ಯುಪಿಐ ಆಪ್ಲಿಕೇಶನ್‌ ನಿಂದ ಸ್ಕ್ಯಾನ್‌ ಮಾಡಿ ನಗದನ್ನು ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next