Advertisement

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ದಾರರಿಗೊಂದು ಕಹಿ ಸುದ್ದಿ!

09:14 PM Nov 27, 2021 | Team Udayavani |

ನವದೆಹಲಿ: ದೇಶದ ಬಹುದೊಡ್ಡ ಬ್ಯಾಂಕ್‌ ಎಸ್‌ಬಿಐ ತನ್ನ ಕ್ರೆಡಿಟ್‌ ಕಾರ್ಡ್‌ದಾರರಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ತನ್ನ ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಸಿಕ ಕಂತಿನ (ಇಎಂಐ) ಮೇಲೆ ವಸ್ತುಗಳನ್ನು ಖರೀದಿಸುವವರು; ಇನ್ನು ಮುಂದೆ ನಿರ್ವಹಣಾ ಶುಲ್ಕವಾಗಿ ರೂ.99 ಮತ್ತು ತೆರಿಗೆ ಹಣವನ್ನು ಪ್ರತಿ ತಿಂಗಳೂ ಪಾವತಿ ಮಾಡಬೇಕಾಗುತ್ತದೆ!

Advertisement

ದೀರ್ಘಾವಧಿಯ ಕಂತುಗಳಾಗಿದ್ದಲ್ಲಿ ಈ ಹೆಚ್ಚುವರಿ ನಿರ್ವಹಣಾ ಶುಲ್ಕ ಹಾಗೂ ಅದಕ್ಕೆ ಹಾಕುವ ತೆರಿಗೆಯು, ಬಡ್ಡಿದರಕ್ಕಿಂತ ಈ ಮೊತ್ತವೇ ಅಧಿಕವಾಗಲಿದೆ!

ಕೆಲವು ಬಾರಿ ಶೂನ್ಯ ಬಡ್ಡಿದರದಲ್ಲಿ ಕೆಲವು ಕಂಪನಿಗಳು ವಸ್ತುಗಳನ್ನು ಖರೀದಿಸಲು ಅವಕಾಶ ನೀಡುತ್ತವೆ. ಅಂತಹ ಹೊತ್ತಿನಲ್ಲೂ ಎಸ್‌ಬಿಐ ಬಳಕೆದಾರರು ತೆರಿಗೆ ಮತ್ತು ಪ್ರಕ್ರಿಯೆ ಶುಲ್ಕವನ್ನು ತೆರಬೇಕಾಗುತ್ತದೆ. ಇದು ಡಿ. 1ರಿಂದ ಜಾರಿಯಾಗಲಿದೆ.

ಇದನ್ನೂ ಓದಿ : ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

Advertisement

Udayavani is now on Telegram. Click here to join our channel and stay updated with the latest news.

Next