Advertisement

ರೈಲ್ವೇ-ಎಸ್‌ಬಿಐಯಿಂದ ರುಪೇ ಸಂಪರ್ಕ ರಹಿತ ಕ್ರೆಡಿಟ್‌ ಕಾರ್ಡ್‌

09:39 AM Jul 29, 2020 | mahesh |

ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆ ಹಾಗೂ ಎಸ್‌ಬಿಐ ಕಾರ್ಡ್‌ ಜಂಟಿಯಾಗಿ ಸಂಪರ್ಕರಹಿತ ಕ್ರೆಡಿಟ್‌ ಕಾರ್ಡೊಂದನ್ನು ಬಿಡುಗಡೆ ಮಾಡಿವೆ. ಇದು ದೇಶೀಯ ರುಪೇ ಆಧಾರಿತ ಕಾರ್ಡ್‌. ಕೇಂದ್ರ ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ಈ ಕಾರ್ಡನ್ನು ಬಿಡುಗಡೆ­ಗೊಳಿಸಿ, ಎಲ್ಲ ವಲಯ­ಗಳಲ್ಲೂ ದೇಶ ಆತ್ಮನಿರ್ಭರ­ಗೊಳ್ಳಲು ಈ ಹೆಜ್ಜೆ­ಇಡ­ಲಾಗಿದೆ ಎಂದಿ­ದ್ದಾರೆ. ಈ ಕಾರ್ಡ್‌ ಬಳಸು­ವಾಗ ಅದನ್ನು ಪಿಒಎಸ್‌ (ಪಾಯಿಂಟ್‌ ಆಫ್ ಸೇಲ್‌) ಮೆಷಿನ್‌ನಲ್ಲಿ ಉಜ್ಜ ಬೇಕೆಂದಿಲ್ಲ. ಬದಲಿಗೆ ಪಿಒಎಸ್‌ ಸನಿಹ ಹಿಡಿದರೆ ಸಾಕು, ತತ್‌ಕ್ಷಣ ಸಂಪರ್ಕಗೊಳ್ಳುತ್ತದೆ.

Advertisement

ಎನ್‌ಎಫ್ಸಿ ತಂತ್ರಜ್ಞಾನ: ಈ ಕ್ರೆಡಿಟ್‌ ಕಾರ್ಡನ್ನು ಎನ್‌ಎಫ್ಸಿ ಅಥವಾ ನಿಯರ್‌ ಫೀಲ್ಡ್‌ ಕಮ್ಯುನಿ­ಕೇಶನ್‌ ಎಂಬ ತಂತ್ರಜ್ಞಾನ ಬಳಸಿ ತಯಾರಿಸ­ಲಾಗಿದೆ. ಎನ್‌ಎಫ್ಸಿ ಒಂದು ಚಿಪ್‌ ಆಧಾರಿತ ವ್ಯವಸ್ಥೆ. ಇದು ಸನಿಹದ ಇದೇ ರೀತಿಯ ವ್ಯವಸ್ಥೆ ಇರುವ ಸಾಧನಗಳೊಂದಿಗೆ ಸಂಪರ್ಕಗೊಳ್ಳುವ ಶಕ್ತಿ ಹೊಂದಿರುತ್ತದೆ. ಬ್ಲೂಟೂತ್‌ ಆಧಾರಿತ ಸೇವೆ ಗಳು ಹೀಗೆಯೇ ಕಾರ್ಯಾಚರಣೆ ನಡಸುತ್ತವೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ರೈಲ್ವೇ ಪ್ರಯಾಣಿಕರಿಗೆ ಗರಿಷ್ಠ ಲಾಭ
ಸತತವಾಗಿ ರೈಲಿನಲ್ಲಿ ಓಡಾಡುವ ಭಾರತೀಯ ಪ್ರಯಾ­ಣಿಕ­ರನ್ನು ಗಮನದಲ್ಲಿಟ್ಟುಕೊಂಡೇ ಈ ಕ್ರೆಡಿಟ್‌ ಕಾರ್ಡ್‌ ಜಾರಿ ಮಾಡಲಾ­ಗಿದೆ. ಇದರಿಂದ ಗ್ರಾಹಕರಿಗಿರುವ ಲಾಭಗಳು ಹೀಗಿವೆ.

ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಪ್ರಥಮ, ದ್ವಿತೀಯ, ತೃತೀಯ ದರ್ಜೆಯ ಹವಾನಿಯಂತ್ರಕ ಆಸನ­ಗಳು, ಎಕ್ಸಿ­ಕ್ಯೂ­ಟಿವ್‌ ಚೇರ್‌ ಕಾರ್‌, ಹವಾ­ನಿಯಂತ್ರಕ ಚೇರ್‌ ಕಾರ್‌ನಲ್ಲಿ ಟಿಕೆಟ್‌ ಕಾಯ್ದಿರಿಸಿದರೆ ಶೇ.10ರಷ್ಟು ಹಣ ವಾಪಸ್‌ ಸಿಗುತ್ತದೆ.

ವರ್ಷದಲ್ಲಿ 4 ಬಾರಿ ಉಚಿತವಾಗಿ ರೈಲ್ವೇ ವಿಶ್ರಾಂತಿ­ನಿವಾಸವನ್ನು (ಲಾಂಜ್‌) ಬಳಸಿಕೊಳ್ಳಬಹುದು.
2021ರ ಮಾರ್ಚ್‌ವರೆಗೆ ಕಾರ್ಡ್‌ ಪಡೆಯಲು 500 ರೂ. ಶುಲ್ಕ ಪಾವತಿಸಬೇಕಿಲ್ಲ!

Advertisement
Advertisement

Udayavani is now on Telegram. Click here to join our channel and stay updated with the latest news.

Next