Advertisement

ಸಯಾನ್‌ ನವೀಕೃತ ಶ್ರೀ ಕೃಷ್ಣ ಮಂದಿರ-ಗೋಕುಲ ಕಟ್ಟಡಕ್ಕೆ ಶಿಲಾನ್ಯಾಸ

05:07 PM Jul 04, 2017 | |

ಮುಂಬಯಿ:  ಸಂಸ್ಕಾರಯುತ ಬದುಕಲ್ಲಿ ಮನೆ-ಮನಗಳು ಹಿತವಾಗಿರುತ್ತವೆ. ಇಂದು ಊರಲ್ಲಿ ಸಂಸ್ಕಾರಗಳ ಉಳಿವು ಕಷ್ಟಕರವಾಗಿದ್ದರೂ ಸಂಸ್ಕೃತಿ ಉಳಿವಿನ ತವಕ ಇಂದು ಪರವೂರಿನ ಬಂಧುಗಳಲ್ಲಿದೆ. ಸಮಾಗಮ ಸಂಸ್ಕೃತಿಗೆ ದಕ್ಷಿಣ ಕನ್ನಡ ಜನತೆ ಸಂಸ್ಕಾರವುಳ್ಳವರು. ನಾವು ಸಂಸ್ಕಾರಗಳನ್ನು ಹೋದಲ್ಲಿ ಕೊಂಡೊಯ್ದು ಬೆಳೆಸಬಹುದು ಎನ್ನುವುದಕ್ಕೆ ಇದೇ ಯೋಜನೆ ನಿದರ್ಶನವಾಗಿದೆ. ಇಂದಿನ  ಯಾಂತ್ರಿಕ ಜೀವನದಲ್ಲೂ ಪರ ವೂರಿನಲ್ಲಿ ಧರ್ಮ-ಸಂಸ್ಕೃತಿಯನ್ನು  ಕಟ್ಟಿ ಬೆಳೆಸುವುದು ಸ್ತುತ್ಯರ್ಹ ಎಂದ‌ು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಂ ಶ್ರೀ ಸಂಪುಟ ನರಸಿಂಹಸ್ವಾಮಿ  ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

Advertisement

ಜು. 2ರಂದು  ಪೂರ್ವಾಹ್ನ ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ಗಳ “ಗೊಕುಲ’ ಪ್ರಸಿದ್ಧಿ ಶ್ರೀಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡದ ನವೀಕರಣಕ್ಕೆ ನೆರವೇರಿಸಲ್ಪಟ್ಟ ಶಿಲಾನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಆಧುನಿಕ ಮಾಧ್ಯಮಗಳ ತವಕಕ್ಕೆ ಪೂರಕ ವಾದ ಸಂಸ್ಕಾರ ಕೇಂದ್ರಗಳ ಆವಶ್ಯಕವಿದೆ. ಸರ್ವರ ಸಹಯೋಗ ಮತ್ತು ಮಹೂರ್ತದ ಫಲವಾಗಿ ಏಳು ಮಹಡಿಗಳ ಬೃಹತ್‌ ಕಟ್ಟಡ ಸುಲಲಿತವಾಗಿ ಶೀಘ್ರವೇ ನಿರ್ಮಾಣ ಆಗಲಿದೆ. ಏಳು ಎನ್ನುವುದೇ ಶುಭ ಸಂದೇಶ. ಏಳು… ಏಳು… ಎಂದಾಗ ಆಶಯಪಟ್ಟ ಕಟ್ಟಡವೂ ತನ್ನಷ್ಟಕ್ಕೇ ಸುಗಮವಾಗಿ ಏಳುತ್ತದೆ. ಇದು ನಮ್ಮ  ಪೂರ್ವಜರಿಂದ ನಾವು ರೂಢಿಸಿಕೊಂಡು ಬಂದ ಸಂಸ್ಕಾರದ ಫಲವಾಗಿದೆ. ಮುಂಬಯಿ  ಸಂಸ್ಕಾರದ ನೆಲೆಯಾಗಿದೆ. ಇಲ್ಲಿನ ಗೋಕುಲಕ್ಕೆ ಕೃಷ್ಣಾವತಾರದಲ್ಲಿ ಸುರೇಶ್‌ ರಾವ್‌ ಸಾರಥ್ಯ

ವಹಿಸಿ ಮುನ್ನಡೆಯುತ್ತಿರುವುದು ಅಭಿನಂದ ನೀಯ. ಶೀಘ್ರವೇ ಗೋಕುಲ ಸರ್ವ ಸಮಾಜದ ಭಕ್ತಿಯನೆಲೆಯಾಗಿ ಬೆಳೆಯಲಿ ಎಂದರು.

ಪರ್ಯಾಯದಲ್ಲಿನ ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅನುಗ್ರಹ‌ಗಳೊಂದಿಗೆ ಉಭಯ ಸಂಸ್ಥೆಗಳ ಮುಖಸ್ಥರು ಮೆರ

Advertisement

ವಣಿಗೆಯಲ್ಲಿ ತರಲಾದ ಹೊರೆಕಾಣಿಕೆಯನ್ನು ಸಮರ್ಪಿಸಿದರು ಅನಂತರ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಶ್ರೀ  ಕ್ಷೇತ್ರ ಕಟೀಲು ಇದರ‌ ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಉಪಸ್ಥಿತರಿದ್ದು, ಶಿಲಾನ್ಯಾಸ ನೆರವೇರಿಸಿ ನೆರೆದ ಸದ್ಭಕ್ತರಿಗೆ ಮಂತ್ರಾಕ್ಷೆಯನ್ನಿತ್ತು ಹರಸಿದರು.

ಬಿಎಸ್‌ಕೆಬಿ ಅಸೋಸಿಯೇಶನ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ನ ವಿಶ್ವಸ್ತ ಕಾರ್ಯಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅವರು ಅಧ್ಯಕ್ಷತೆ ವಹಿಸಿದ್ದರು.

ಮುಂಬಯಿ ಒಗ್ಗಟ್ಟಿನ ತವರೂರು
ಪಲಿಮಾರುಶ್ರೀಗಳು ಚಾಲನೆ ನೀಡಿ ಮಾತನಾಡಿ, ಮುಂಬಯಿ ಸರ್ವರ ಆದರ್ಶದ ನಾಡು ಮತ್ತು ಒಗ್ಗಟ್ಟಿನ ಮನೋಭಾವಿಗಳ ತವರೂರು. ಇಂತಹ ನಾಡಲ್ಲಿ ನಮ್ಮವರ ಏಳು ಉಪ್ಪರಿಗೆಯ ದೊಡ್ಡದಾದ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು ಅದೃಷ್ಟದ ಸಂಕೇತ ವಾಗಿದೆ. ಎಲ್ಲಾ ಸಮುದಾಯಗಳ ಭಕ್ತರಾಗಮಿಸಿ ಶಿಲಾನ್ಯಾಸದಲ್ಲಿ ಪಾಲ್ಗೊಂಡಿದ್ದಾರೆ ಅಂದಮೇಲೆ ಸುಲಭವಾಗಿಯೇ ಯೋಜನೆ ಕೂಡುವುದು. ಎಲ್ಲಿ ಚಪ್ಪಲಿ ಇಡಲು ಮತ್ತು ಕಾರು ನಿಲ್ಲಿಸಲು ಭಕ್ತರಲ್ಲಿ ಭಕ್ತರಲ್ಲಿ ಭಯವಿರುತ್ತದೋ ಅಲ್ಲಿ ಭಕ್ತರೇ ವಿರಳವಾಗಿರುತ್ತಾರೆ. ಆದರೆ ಇಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳುಳ್ಳ ಭವ್ಯ ಕಟ್ಟಡ ನಿರ್ಮಾಣವಾದಾಗ ಭಕ್ತರ ಬರ ಕಾಡದು. ಈ ಕಟ್ಟಡ ವರ್ಷದಲ್ಲೇ ನಿರ್ಮಿಸುವ ಶಕ್ತಿ ನಿಮಗಿದೆ. ಆದರೆ ನನ್ನ ನನ್ನ ಪರ್ಯಾಯ ಮುಗಿದ ಬಳಿಕವೇ ಸಿದ್ಧಗೊಳ್ಳುತ್ತಿರುವುದು ನನ್ನ ಪಾಲಿನ ಭಾಗ್ಯಕ್ಕೆ ಶ್ರೀಕೃಷ್ಣನ ಕೃಪೆಯಿದ್ದಂತಿದೆ. ದೇವಸ್ಥಾನ ಎಲ್ಲರ ಆಸ್ತಿಯಾಗಿದ್ದು, ಇಲ್ಲಿನ ಪೂಜೆಗಳು ಸರ್ವಸ್ವ ಎಂದರು.

ಅತಿಥಿ-ಗಣ್ಯರಾಗಿ ನಗರಸೇವಕಿ ರಾಜಶ್ರೀ  ಶಿರ್ವಾಡ್ಕರ್‌, ರಾಜಕೀಯ ಧುರೀಣ ಸಂತೋಷ್‌ ಡಿ. ಶೆಟ್ಟಿ, ಸಮಾಜ ಸೇವಕರಾದ ಪ್ರಭಾಕರ ಎಲ್‌. ಶೆಟ್ಟಿ, ಜಯ ಸಿ. ಸುವರ್ಣ, ವಿಜಯ್‌ ವಾಧ್ವಾ, ಧರ್ಮಪಾಲ್‌ ಯು. ದೇವಾಡಿಗ, ವಿರಾರ್‌ ಶಂಕರ್‌ ಶೆಟ್ಟಿ, ಬಿ. ಆರ್‌.  ಶೆಟ್ಟಿ, ಜಯರಾಮ ಎನ್‌. ಶೆಟ್ಟಿ, ದಡªಂಗಡಿ ಚೆಲ್ಲಡ್ಕ ಕುಸುಮೋದ‌ರ ಡಿ. ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್‌, ತೋನ್ಸೆ ಜಯಕೃಷ್ಣ ಎ. 

ಶೆಟ್ಟಿ, ಡಾ| ಎಂ. ಎಸ್‌. ಆಳ್ವ, ಬಿ. ನಾರಾಯಣ್‌, ಕೃಷ್ಣ ವೈ. ಶೆಟ್ಟಿ, ಪೇಜಾವರ ಮಠದ ಪ್ರಕಾಶ್‌ ಆಚಾರ್ಯ ರಾಮಕುಂಜ, ಸುಬ್ರಹ್ಮಣ್ಯ ಮಠದ ವಿಷ್ಣು ಕಾರಂತ ಚೆಂಬೂರು, ಕೈರಬೆಟ್ಟು ವಿಶ್ವನಾಥ ಭಟ್‌, ಸುಧೀರ್‌ ಆರ್‌. ಎಲ್‌. ಶೆಟ್ಟಿ, 

ಎನ್‌. ಎನ್‌. ಪಾಲ್‌, ನಿತ್ಯಾನಂದ ಡಿ. ಕೋಟ್ಯಾನ್‌, ರವಿ ಎಸ್‌. ದೇವಾಡಿಗ, 

ಐ. ಜೆ. ರಾವ್‌, ಅಮೃತ ಸೊಮೇಶ್ವರ, ಚಂದ್ರಶೇಖರ ಆರ್‌.ಬೆಳ್ಚಡ, ಡಾ| ಎಸ್‌.ಎಂ ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಜಿ.ಎಸ್‌ ನಾಯಕ್‌, ಸುಬ್ರಹ್ಮಣ್ಯ ರಾವ್‌, ಕೆ.ಎಸ್‌ 

ರಾವ್‌, ಡಾ| ಪಿ. ಜಿ. ರಾವ್‌, ಆನಂದ ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ಕಮಲಾಕ್ಷ ಸರಾಫ್ ಸೇರಿದಂತೆ ಅನೇಕ ಮಹಾನೀಯರು ಉಪಸ್ಥಿತರಿದ್ದರು.

ರಾಮಚಂದ್ರ ಕೋಟ್ಯಾನ್‌ ಬಳಗದಿಂದ ವಾದ್ಯಘೋಷ ನಡೆಯಿತು. ಗೋಕುಲ ಕಲಾವೃಂದ ಸಾಯಾನ್‌, ಹರಿಕೃಷ್ಣ ಭಜನಾ ಮಂಡಳಿ ನವಿ ಮುಂಬಯಿ, ಗೋಪಾಲಕೃಷ್ಣ ಭಜನಾ ಮಂಡಳಿ ಅಂಧೇರಿ,  ಗೋಕುಲ ಬಾಲ ಕಲಾವೃಂದ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ ಮೀರಾರೋಡ್‌ ಮತ್ತಿತರ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಜಿಪಿಟಿ ವಿಶ್ವಸ್ಥ ಸದಸ್ಯರಾದ ವಿದ್ವಾನ್‌ ಪೆರ್ಣಂಕಿಲ ಹರಿದಾಸ್‌ ಭಟ್‌, ವಿದ್ವಾನ್‌ ಎಸ್‌. ಎನ್‌. ಉಡುಪ, ವೇದಮೂರ್ತಿ ಗುರುರಾಜ ಉಡುಪ, ವೇದಮೂರ್ತಿ ಕೃಷ್ಣರಾಜ ಉಪಾಧ್ಯಾಯ ಅವರು  ತಮ್ಮ ಪೌರೋಹಿತ್ಯದಲ್ಲಿ ಭೂವರಾಹ ಯಾಗ ಹಾಗೂ ಇನ್ನಿತರ  ಪೂಜಾದಿಗಳನ್ನು ನಡೆಯಿತು. 

ಈ ಸಂದರ್ಭದಲ್ಲಿ ವಿಜಯಲಕ್ಷ್ಮೀ ಸುರೇಶ್‌ ರಾವ್‌, ಬಿಎಸ್‌ಕೆಬಿ ಉಪಾಧ್ಯಕ್ಷರಾದ ವಾಮನ ಹೊಳ್ಳ ಮತ್ತು ಶೈಲಿನಿ ಎ. ರಾವ್‌, ಗೌರವ ಪ್ರಧಾನ ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಜತೆ ಕಾರ್ಯದರ್ಶಿ ಪಿ. ಸಿ. ಎನ್‌. ರಾವ್‌, ಜತೆ ಕೋಶಾಧಿಕಾರಿ ಅವಿನಾಶ್‌ ಎಸ್‌ ಶಾಸಿŒ ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾಣಿ ಆರ್‌. ಭಟ್‌, ಗೋಕುಲವಾಣಿ ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಯು. ರವೀಂದ್ರ ರಾವ್‌, ಜಿಪಿಟಿ  ವಿಶ್ವಸ್ಥ ಕಾರ್ಯದರ್ಶಿ ಎ. ಶ್ರೀನಿವಾಸ ರಾವ್‌, ವಿಶ್ವಸ್ತರಾದ ಬಿ. ರಮಾನಂದ ರಾವ್‌, ಕೃಷ್ಣ ಆಚಾರ್ಯ ಸೇರಿದಂತೆ ಸದಸ್ಯರು  ಹಾಜರಿದ್ದರು.  ಬಿಎಸ್‌ಕೆಬಿ ಗೌರವ ಕೋಶಾಧಿಕಾರಿ ಹರಿದಾಸ್‌ ಭಟ್‌ ಸ್ವಾಗತಿಸಿದರು.   ವೇ| ಮೂ| ಪೆರ್ಣಂಕಿಲ ಹರಿದಾಸ್‌ ಭಟ್‌ ನಿರೂಪಿಸಿ ವಂದಿಸಿದರು. 

ಶ್ರೀ ಗೋಪಾಲಕೃಷ್ಣನನ್ನು ಹೃದಯಗಳಲ್ಲಿರಿಸಿ ನಾವೆಲ್ಲರೂ ಯೋಜನೆಯುದ್ದಕ್ಕೂ ಗೋಪಾಲಕರಾದರೆ ಮಾತ್ರ ಬೇಗನೇ ಗೋಕುಲ ನಿರ್ಮಾಣವಾಗುತ್ತದೆ. ಮುಂಬಯಿಯಲ್ಲಿನ ಕಳೆದ ಎಪ್ಪತ್ತು ವರ್ಷಗಳಿಂದ ಭಕ್ತರಿಗೆ ಎಲ್ಲವನ್ನೂ ಸಿದ್ಧಿಸಿದ ಈ ಗೋಕುಲ ಭವನ ಕಾಮಧೇನುವಿದ್ದಂತೆ. ಸಮಾಜಮುಖೀ ಸೇವೆಗಳು ಕೃಷ್ಣನಿಗೆ ಪ್ರೀತ್ಯಾಧಾರವಾಗಿದ್ದು ಇದನ್ನೇ ಮೈಗೂಡಿಸಿರುವ ಮುಂಬಯಿ ಬಂಧುಗಳು ತುಳುನಾಡ  ತವರೂರ ಹೃದಯವಿದ್ದಂತೆ  
– ಶ್ರೀ ಕಮಲಾದೇವಿ ಆಸ್ರಣ್ಣ, 
ಅನುವಂಶಿಕ ಅರ್ಚಕರು: ಶ್ರೀ ಕ್ಷೇತ್ರ ಕಟೀಲು

ನೂತನ ಗೋಕುಲ ಭ‌ವನವು ಧಾರ್ಮಿಕ ಮತ್ತು ಶಾಸ್ತ್ರೋಕ್ತವಾದ ಸೇವೆಗೆ ಪ್ರಧಾನ ಆದ್ಯತೆ ನೀಡಲಾಗುತ್ತಿದೆ. ವ್ಯವಹಾರಕ್ಕಿಂತ ಧಾರ್ಮಿಕ ಸೇವೆಗಳಿಗೆ ಪ್ರಧಾನ್ಯತೆಯೇ ನಮ್ಮ ಧ್ಯೇಯವಾಗಿದೆ. ಅಪಾರ ಶ್ರದ್ಧಾ, ಧ್ಯಾನತಾ,  ಶ್ರೀಮಂತ ಬುದ್ಧಿವಂತಿಕೆ ಚಿಂತನೆವುಳ್ಳ,  ಒಳ್ಳೆಯ ಮನಸ್ಸು, ಸ್ವತ್ಛ ಹೃದಯ ಹಾಗೂ ಒಳ್ಳೆಯ ಸಾಮಾಜಿಕ ಚಿಂತನೆವುಳ್ಳವರ ಸಹಯೋಗದೊಂದಿಗೆ ಈ ಭವ್ಯಯೋಜನೆ ಶೀಘ್ರದಲ್ಲೇ ರೂಪುಗೊಳ್ಳಲಿದೆ 
– ಡಾ| ಸುರೇಶ್‌ ಎಸ್‌. ರಾವ್‌ ,
 ಅಧ್ಯಕ್ಷರು : ಬಿಎಸ್‌ಕೆಬಿ ಅಸೋಸಿಯೇಶನ್‌

   ಚಿತ್ರ -ವರದಿ : ರೋನ್ಸ್‌ ಬಂಟ್ವಾಳ್‌ 

Advertisement

Udayavani is now on Telegram. Click here to join our channel and stay updated with the latest news.

Next