Advertisement

‘ಸಾವಿತ್ರಿ ಉತ್ಸವ’ ಘೋಷಿಸಿದ ಮಹಾರಾಷ್ಟ್ರ ಸರ್ಕಾರ !

04:23 PM Dec 13, 2020 | Adarsha |

ಮುಂಬೈ: ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಸಾವಿತ್ರಿಭಾಯಿ ಪುಲೆ  ಅವರ ಜನ್ಮದಿನವನ್ನು ಪ್ರತಿವರ್ಷ ಆಚರಿಸಲಾಗುವುದು ಮತ್ತು ಇದಕ್ಕೆಸಾವಿತ್ರಿ ಉತ್ಸವಎಂದು ನಾಮಕರಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

Advertisement

ಪ್ರತಿ ವರ್ಷದ ಜನವರಿ 3ರಂದು ಸಾವಿತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿ:ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ವೈ ಸಂತಾಪ

ಸಾವಿತ್ರಿಭಾಯಿ ಪುಲೆ ಅವರು ಸಮಾಜದ ಸುಧಾರಣೆಯ ಸಲುವಾಗಿ ನಡೆಸಿದ ಹೋರಾಟ, ಅವರು ತಮ್ಮ ಬದುಕಿನಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶ ಇದಾಗಿದ್ದು, ಸಾವಿತ್ರಿ ಉತ್ಸವದ  ಅಂಗವಾಗಿ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋವತಿ ಠಾಕೂರ್ ತಿಳಿಸಿದರು.

ಸಾವಿತ್ರಿಭಾಯಿ ಪುಲೆ ಅವರು 1831 ಜನವರಿಯಲ್ಲಿ ಜನಿಸಿದರು. ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವು ಹೋರಾಟಗಳಲ್ಲಿ ಇವರು ಭಾಗವಹಿಸಿದ್ದ ಇವರು ಪತಿ ಜ್ಯೋತಿಬಾಪುಲೆ ಅವರೊಂದಿಗೆ ಸಾಮಾಜಿಕ ಸುಧಾರಣಾ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅದರಲ್ಲೂ ಲಿಂಗ ಮತ್ತು ಜಾತಿ ಆಧಾರಿತವಾಗಿ ಸಮಾಜದಲ್ಲಿದ್ದ ತಾರತಮ್ಯವನ್ನು ಹೊಡೆದೋಡಿಸಲು ಇವರು ಮಾಡಿದ ಹೋರಾಟ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ, ಸಾವಿತ್ರಿಭಾಯಿ ಪುಲೆ ಅವರು 1897ರಲ್ಲಿ ಇಹಲೋಕ ತ್ಯೆಜಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next