Advertisement

ವನಿತಾ ಹಾಕಿ ತಂಡಕ್ಕೆ ಸವಿತಾ ಸಾರಥ್ಯ

12:05 AM May 09, 2023 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯ ಪ್ರವಾಸದ ವೇಳೆ ಆಡಲಾಗುವ 3 ಪಂದ್ಯಗಳ ವನಿತಾ ಹಾಕಿ ಟೆಸ್ಟ್‌ ಸರಣಿಗೆ 20 ಸದಸ್ಯರ ಭಾರತ ತಂಡ ಪ್ರಕಟಗೊಂಡಿದೆ. ಗೋಲ್‌ಕೀಪರ್‌ ಸವಿತಾ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಟೆಸ್ಟ್‌ ಸರಣಿಯ ಮೂರೂ ಪಂದ್ಯ ಗಳನ್ನು ಅಡಿಲೇಡ್‌ನ‌ಲ್ಲಿ ಆಡಲಾಗು ವುದು. ಪಂದ್ಯಗಳು ಮೇ 18, 20 ಮತ್ತು 21ರಂದು ನಡೆಯಲಿವೆ. ಇದರೊಂದಿಗೆ ಆಸ್ಟ್ರೇಲಿಯ “ಎ” ತಂಡದ ವಿರುದ್ಧ 2 ಅಭ್ಯಾಸ ಪಂದ್ಯವನ್ನೂ ಭಾರತ ಆಡಲಿದೆ.

ಸವಿತಾ ಇತ್ತೀಚೆಗಷ್ಟೇ 2022ನೇ ಸಾಲಿನ “ವರ್ಷದ ಆಟಗಾರ್ತಿ” ಗೌರವಕ್ಕೆ ಭಾಜನರಾಗಿದ್ದರು. ಬಿಛೂ ದೇವಿ ಖಾರೀಬಮ್‌ ದ್ವಿತೀಯ ಗೋಲ್‌ ಕೀಪರ್‌ ಆಗಿದ್ದಾರೆ. ಈ ಸರಣಿ ಮುಂಬ ರುವ ಏಷ್ಯನ್‌ ಗೇಮ್ಸ್‌ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದಿದೆ.

ಭಾರತ ತಂಡ
ಗೋಲ್‌ ಕೀಪರ್: ಸವಿತಾ (ನಾಯಕಿ), ಬಿಛೂ ದೇವಿ ಖಾರೀಬಮ್‌.

ಡಿಫೆಂಡರ್: ದೀಪ್‌ ಗ್ರೇಸ್‌ ಎಕ್ಕಾ (ಉಪನಾಯಕಿ), ನಿಕ್ಕಿ ಪ್ರಧಾನ್‌, ಇಶಿಕಾ ಚೌಧರಿ, ಉದಿತಾ, ಗುರ್ಜಿತ್‌ ಕೌರ್‌.

Advertisement

ಮಿಡ್‌ ಫೀಲ್ಡರ್: ನಿಶಾ, ನವಜೋತ್‌ ಕೌರ್‌, ಮೋನಿಕಾ, ಸಲೀಮಾ ಟೇಟೆ, ನೇಹಾ, ನವನೀತ್‌ ಕೌರ್‌, ಸೋನಿಕಾ, ಜ್ಯೋತಿ, ಬಲಜೀತ್‌ ಕೌರ್‌.

ಫಾರ್ವರ್ಡ್ಸ್‌: ವಂದನಾ ಕಟಾರಿಯಾ, ಲಾಲ್ರೆಮಿÕಯಾಮಿ, ಸಂಗೀತಾ ಕುಮಾರಿ, ಶರ್ಮಿಳಾದೇವಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next