Advertisement

Central Government ಉಳಿತಾಯ ಯೋಜನೆ ನಿಯಮ ಸರಳ

11:45 PM Nov 19, 2023 | Team Udayavani |

ಹೊಸದಿಲ್ಲಿ: ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿಗಳಲ್ಲಿ ಉಳಿತಾಯ ಯೋಜನೆಗಳಲ್ಲಿ ಖಾತೆಗಳನ್ನು ತೆರೆಯುವ ಮತ್ತು ಮುಕ್ತಾಯಗೊಳಿಸುವ ಬಗ್ಗೆ ನಿಯಮಗಳನ್ನು ಕೇಂದ್ರ ಸರಕಾರ ಸರಳಗೊಳಿಸಿದೆ.

Advertisement

ಹಿರಿಯ ನಾಗರಿಕರ ಉಳಿತಾಯ ಖಾತೆ ತೆರೆಯಲು 1 ತಿಂಗಳಿನಿಂದ 3 ತಿಂಗಳವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಿವೃತ್ತಿಗೆ ಸಂಬಂಧಿ ಸಿದ ಸೌಲಭ್ಯ ಸಿಗುವ ದಿನದಿಂದ ಇದು ಅನ್ವಯ ವಾಗುತ್ತದೆ. ಜತೆಗೆ ಅದರ ಪುರಾವೆಗಳನ್ನೂ ನೀಡ ಬೇಕಾ ಗುತ್ತದೆ. ಪಿಪಿಎಫ್ ಖಾತೆಯನ್ನು ಅವಧಿಗಿಂತ ಮೊದಲೇ ಮುಕ್ತಾಯಗೊಳಿಸಲು ಅವಕಾಶ ಕಲ್ಪಿಸಿಕೊಟ್ಟಿದೆ.

ಅಂಚೆ ಉಳಿತಾಯ ಖಾತೆಯ ಅವಧಿ ಐದು ವರ್ಷಗಳಾಗಿದ್ದು, ಅದನ್ನು ತೆರೆದ ದಿನಾಂಕದಿಂದ ನಾಲ್ಕು ವರ್ಷಗಳ ಬಳಿಕ ಮುಕ್ತಾಯಗೊಳಿಸಲು ಬಯಸಿದರೆ ಅದರಲ್ಲಿ ಇರುವ ಮೊತ್ತಕ್ಕೆ ಆ ಸಂದರ್ಭದಲ್ಲಿ ಇರುವ ಬಡ್ಡಿ ದರವನ್ನು ನೀಡಲಾಗುತ್ತದೆ. ಸದ್ಯದ ನಿಯಮಗಳ ಅನ್ವಯ ನಾಲ್ಕು ವರ್ಷಗಳ ಅವಧಿ ಯಲ್ಲಿ ಖಾತೆ ಕೊನೆಗೊಳಿಸಿದರೆ ಮೂರು ವರ್ಷಗಳಿಗೆ ಅನ್ವಯವಾಗುವ ಬಡ್ಡಿ ದರ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next