Advertisement
ಕೋವಿಡ್ ಪೂರ್ವದಲ್ಲಿ ಆರ್ಥಿಕ ತಜ್ಞರು ಪ್ರತೀ ವ್ಯಕ್ತಿ ತನ್ನ ಮೂರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವಷ್ಟು ಹಣವನ್ನು ದಪತ್ ಕಾಲದ ಧನದ ರೂಪದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರು. ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಅಥವಾ ಇನ್ಯಾವುದೋ ಕಾರಣ ದಿಂದ ಆದಾಯ ಇಲ್ಲದಂತೆ ಆದರೆ ಹೊಸ ಉದ್ಯೋಗವನ್ನು, ಆದಾಯ ಮೂಲವನ್ನು ಹುಡುಕಿ ಕೊಳ್ಳಲು ಗರಿಷ್ಠ ಮೂರು ತಿಂಗಳು ಗಳು ಸಾಕಾಗಬಹುದು ಎಂಬ ಅಂದಾಜಿನಿಂದ ಆ ಸಲಹೆ ನೀಡುತ್ತಿದರು. ಆದರೆ ಈಗ ಪ್ರತೀ ವ್ಯಕ್ತಿಯೂ ಕನಿಷ್ಠ ಆರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವ ಹಣವನ್ನು ಆಪತ್ ಕಾಲದ ಧನವಾಗಿ ತೆಗೆದಿರಿಸಬೇಕು ಎಂಬ ಸಲಹೆ ನೀಡುತ್ತಿದ್ದಾರೆ. ಏಕೆಂದರೆ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಮೂರು ತಿಂಗಳುಗಳಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತದೆ ಎನ್ನಲಾಗದು.
Related Articles
- ಆರು ತಿಂಗಳುಗಳ ಖರ್ಚು ನಿಭಾಯಿಸಲು ಬೇಕಿರುವಷ್ಟು ಹಣ ಪ್ರತ್ಯೇಕವಾಗಿ ತೆಗೆದಿರಿಸಿ.
- ಸಾಧ್ಯವಾದರೆ ಈ ಹಣವನ್ನು ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಇರಿಸಿ.
- ಕಷ್ಟಕಾಲಕ್ಕೆಂದು ಹಣ ಇರಿಸದಿದ್ದರೆ ನಿಮ್ಮ ಉಳಿತಾಯ ಕರಗಿ ನೀರಾಗುತ್ತದೆ.
- ಖರ್ಚಿಗೆ ಇನ್ನಷ್ಟು ಕಡಿವಾಣ ಹಾಕಿ ಉಳಿಕೆ ಮೊತ್ತವನ್ನು ಆಪತ್ ಕಾಲದ ನಿಧಿಯಲ್ಲಿ ಸಂಗ್ರಹಿಸಿ.
- ಹಾಗೆಂದು ನಿಮ್ಮ ಹಾಲಿ ಉಳಿತಾಯ, ವಿಮಾ ಯೋಜನೆಗಳ ಮೇಲಣ ಹೂಡಿಕೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬೇಡಿ.
- ಉಳಿತಾಯ ಬೇರೆ, ಆಪತ್ ಕಾಲದ ನಿಧಿ ಬೇರೆ ಎಂಬುದು ನಿಮ್ಮ ಗಮನದಲ್ಲಿರಲಿ.
- ಅಗತ್ಯವಾದಲ್ಲಿ ಈ ಸಂಬಂಧ ಹಣಕಾಸು ಸಲಹೆಗಾರರಿಂದ ಪಡೆದುಕೊಳ್ಳಿ.
Advertisement