Advertisement
ಮಕ್ಕಳ ಭವಿಷ್ಯದ ಗುರಿಯನ್ನು ಸಾಧಿಸಲು ದೀರ್ಘಾವಧಿ ಹೂಡಿಕೆ ಅತ್ಯವಶ್ಯ. ಹಾಗಿದ್ದರೂ, ಶೇ.35ರಷ್ಟು ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ದೀರ್ಘಾವಧಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊಂದಲ ಅಥವಾ ತಿಳಿವಳಿಕೆಯ ಕೊರತೆ ಇರುತ್ತದೆ.
Related Articles
Advertisement
ತಿಂಗಳ ನಿರ್ದಿಷ್ಟ ಕಂತಿನ ಸಿಪ್ ಮೂಲಕ ಹಣ ಹೂಡುವ ಸೌಕರ್ಯ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಇರುತ್ತದೆ. ಆದರೆ ನಮ್ಮ ಗುರಿ ಕಿರು ಅವಧಿಯದ್ದೇ, ಮಧ್ಯಮಾವಧಿಯದ್ದೇ ಅಥವಾ ದೀರ್ಘಾವಧಿಯದ್ದೇ ಎಂಬುದನ್ನು ಮೊದಲು ತೀರ್ಮಾನಿಸಬೇಕಿರುತ್ತದೆ.
ಎಂಟರಿಂದ ಹತ್ತು ವರ್ಷಗಳ ದೀರ್ಘಾವಧಿಯ ಗುರಿ ಸಾಧನೆಯ ಉದ್ದೇಶವಿದ್ದರೆ ಈಕ್ವಿಟಿ ಫಂಡ್ ಅಥವಾ ಡೈವರ್ಸಿಫೈಡ್ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಆಕರ್ಷಕವಾಗಿರುತ್ತದೆ. ಏಕೆಂದರೆ ಇದರಲ್ಲಿ ಶೇ.12ರ ಗರಿಷ್ಠ ಇಳುವರಿ, ಹೂಡಿಕೆ ರಿಸ್ಕ್ ಎಂಬುದು ನಗಣ್ಯವಾಗಿರುತ್ತದೆ. ಹಾಗಿದ್ದರೂ, ಹೂಡಿಕೆಯ ವಿಷಯದಲ್ಲಿ ಲಾರ್ಜ್ ಮತ್ತು ಮಿಡ್ ಕ್ಯಾಪ್ ಫಂಡ್‌ಗಳ ಮಿಶ್ರಣವನ್ನು ಆಯ್ಕೆ ಮಾಡುವುದೇ ಲೇಸು.
ಇ.ಎಲ್.ಎಸ್.ಎಸ್. ಮೂಲಕದ ಹೂಡಿಕೆಯಲ್ಲಿ , ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ಮೂಲಕದ ಹೂಡಿಕೆಯಲ್ಲಿ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ ಮತ್ತು ಹೂಡಿಕೆಯ ಲಾಕ್ ಇನ್ ಪೀರಿಯಡ್ ಕೇವಲ ಮೂರು ವರ್ಷಗಳ ಅವಧಿಗಿರುತ್ತದೆ. ಮ್ಯೂಚುವಲ್ ಫಂಡ್ ಹೂಡಿಕೆಯ ಇಳುವರಿಯು ಮಾರುಕಟ್ಟೆಗೆ ಅನುಗುಣವಾಗಿ ಅತ್ಯುತ್ತಮ ಇಳುವರಿಯನ್ನು ಕೊಡುವುದರಿಂದ ಇವು ಆಕರ್ಷಕ ಹೂಡಿಕೆಯ ಮಾಧ್ಯಮಗಳಾಗಿರುತ್ತವೆ.
ಸಾಮಾನ್ಯವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಮಕ್ಕಳ ಭವಿಷ್ಯದ ಗುರಿಯನ್ನು ನಿರ್ಧರಿಸಿ ಈ ಕೆಳಗಿನ ರೀತಿಯಲ್ಲಿ ಹೂಡಿಕೆಗೆ ತೊಡಗುವುದು ಸಮಂಜಸವಾಗಿರುತ್ತದೆ: ಲಾಂಗ್ ಟರ್ಮ್: ಎಂಟಕ್ಕಿಂತ ಹೆಚ್ಚು ವರ್ಷದ ಅವಧಿ : ಈಕ್ವಿಟಿ ಅಥವಾ ಈಕ್ವಿಟಿ ಓರಿಯೆಂಟೆಡ್ ಫಂಡ್, ಇಎಲ್.ಎಸ್.ಎಸ್. – ಈಕ್ವಿಟಿ : ಶೇ.80-85, ಡೆಟ್ : ಶೇ.15-20. ಮಧ್ಯಮಾವಧಿ: 5ರಿಂದ 7 ವರ್ಷ : ಬ್ಯಾಲೆನ್ಸ್ ಅಥವಾ ಹೈಬ್ರಿಡ್ ಫಂಡ್ ಹೂಡಿಕೆ ಹಂಚಿಕೆ : ಈಕ್ವಿಟಿ ಶೇ.60-65; ಡೆಟ್ : ಶೇ.35-40 ಕಿರು ಅವಧಿ : 2 ರಿಂದ 3 ವರ್ಷ ಅವಧಿ : ಹೂಡಿಕೆ ಹಂಚಿಕೆ : ಈಕ್ವಿಟಿ : ಶೇ.25 ರಿಂದ ಶೇ.30; ಡೆಟ್ : ಶೇ.70-75.
— ಸತೀಶ್ ಮಲ್ಯ