ನವದೆಹಲಿ: ಇತ್ತೀಚೆಗೆ ಟ್ವಿಟರ್ ಎಂಜಿನಿಯರ್ ಫೊವಾದ್ ದಾಬಿರಿ, ನಾನು ನಿದ್ರಿಸುತ್ತಿದ್ದಾಗಲೂ ವಾಟ್ಸ್‌ಆ್ಯಪ್ ತನ್ನ ಮೈಕ್ರೋಫೋನ್ ಮೂಲಕ ನನ್ನ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದರು. ಆಗ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸೇರಿ ಎಲ್ಲರೂ ಒಮ್ಮೆಲೇ ವಾಟ್ಸ್‌ಆ್ಯಪ್ ಮೇಲೆ ಮುಗಿಬಿದ್ದಿದ್ದರು. ಈಗ ವಿವಾದ ಗೂಗಲ್ ತಲೆಗೆ ಬಂದಿದೆ. ಅದೀಗ ಸ್ಪಷ್ಟನೆ ನೀಡಿ, ವಾಟ್ಸ್‌ಆ್ಯಪ್‌ನ ಸಮಸ್ಯೆಯಿಲ್ಲ, ತನ್ನ ಆ್ಯಂಡ್ರಾಯ್ಡನಲ್ಲಿ ಇರುವ ಒಂದು ವೈರಸ್‌ನಿಂದ ಹೀಗಾಗಿದೆ ಎಂದಿದೆ.
ಸಮಸ್ಯೆಯೇನು?: ಫೊವಾದ್ ದಾಬಿರಿ ಒಂದು ಟ್ವೀಟ್ ಮಾಡಿ, ತಾನು ನಿದ್ರಿಸುತ್ತಿದ್ದಾಗ ವಾಟ್ಸ್‌ಆ್ಯಪ್‌ನಲ್ಲಿ ಏನೇನಾಗಿದೆ ಎಂದು ತೆರೆದಿಟ್ಟಿದ್ದರು. ಅದರ ವಿರುದ್ಧ ಆಕ್ರೋಶವೆದ್ದಾಗ ಈ ವಾಟ್ಸ್‌ಆ್ಯಪ್ ಅನ್ನು ಗೂಗಲ್ ಪಿಕ್ಸೆಲ್ ಮೊಬೈಲ್‌ನಲ್ಲಿ ಬಳಸಲಾಗುತ್ತಿದೆ ಎಂದು ಗೊತ್ತಾಗಿತ್ತು. ಹಾಗಾಗಿ ವಾಟ್ಸ್‌ಆ್ಯಪ್ ಗೂಗಲ್‌ನತ್ತ ಬೆಟ್ಟು ಮಾಡಿತ್ತು. ಇದೀಗ ಗೂಗಲ್ ಹೇಳಿಕೆ ನೀಡಿ, ತನ್ನ ಆ್ಯಂಡ್ರಾಯ್ಡನಲ್ಲಿ ಬಗ್ ಇದೆ. ಅದೇ ವಾಟ್ಸ್‌ಆ್ಯಪ್‌ನಲ್ಲಿ ತಪ್ಪು ಮಾಹಿತಿ ಬರಲು ಕಾರಣ, ಅದನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿಕೆ ನೀಡಿದೆ. ಹೀಗಾಗಿ ಸಮಸ್ಯೆ ವಾಟ್ಸ್‌ಆ್ಯಪ್‌ನಿಂದ ಗೂಗಲ್ ಹೆಗಲೇರಿದೆ.