ಲೋಕಾಪುರ: ಜಿಲ್ಲೆಯ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಸೂಕ್ತವಾದ ವೇದಿಕೆ ಕಲ್ಪಿಸಲು ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಪಟ್ಟಣದ ವಿದ್ಯಾಚೇತನ ಶಾಲೆ ಆವರಣದಲ್ಲಿ ಕರ್ನಾಟಕ ಬಯಲಾಟ ಆಕಾಡೆಮಿ ಹಾಗೂ ಅನಸಾರ ಸಾಂಸ್ಕೃತಿಕ ಹಾಗೂ ಕಲಾ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಶ್ರೀಕೃಷ್ಣ ಪಾರಿಜಾತ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಯುವಕರು ಗ್ರಾಮೀಣ ಭಾಗದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು. ಬಯಲಾಟ ಕಲೆಗಳಿಂದ ಹಲವಾರು ಕಲಾ ಪ್ರಕಾರಗಳನ್ನು ಕ್ರೋಢೀಕರಿಸಿ ಕಲಾವಿದರಿಗೆ ಪ್ರೋತಾಹಿಸುವ ಕೆಲಸವಾಗಬೇಕಿದೆ ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಕರ್ನಾಟಕ ಬಯಲಾಟ ಆಕಾಡೆಮಿ ರಜಿಸ್ಟಾರ್ ಕರ್ಣಕುಮಾರ ಜೈನಾಪುರ ಮಾತನಾಡಿ, ಪ್ರತಿಯೊಬ್ಬರು ಗ್ರಾಮೀಣ ಭಾಗದ ಸೊಗಡು ಬಯಲಾಟದಂತಹ ಕಲೆಗಳನ್ನು ಬೆಳೆಸಿಕೊಂಡು ಹೋಗಬೇಕಾಗಿದೆ. ಕರ್ನಾಟಕ ಬಯಲಾಟ ಅಕಾಡೆಮಿಯು ಕ್ರಿಯಾಶೀಲ ಸಂಘಗಳಿಗೆ ಯೋಜನೆಗಳು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
Related Articles
ಹಿರಿಯ ಪಾರಿಜಾತ ಕಲಾವಿದರು, ಗಣ್ಯರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದ ನಾರಾಯಣ ಪತ್ತಾರ, ತಬಲಾ ಮಾಸ್ತರ್ ಗೋವಿಂದಪ್ಪ ಪತ್ತಾರ ಕಲಾ ತಂಡದಿಂದ ಶ್ರೀಕೃಷ್ಣ ಪಾರಿಜಾತ ತರಬೇತಿ ಪ್ರದರ್ಶನಗೊಂಡಿತು. ಕರ್ನಾಟಕ ಬಯಲಾಟ ಆಕಾಡೆಮಿ ಸದಸ್ಯೆ ಗಂಗವ್ವ ಮುಧೋಳ, ಕಸಾಪ ವಲಯ ಘಟಕ ಅಧ್ಯಕ್ಷ ಎಸ್.ಎಂ. ರಾಮದುರ್ಗ, ಕರ್ನಾಟಕ ಜಾನಪದ ಪರಿಷತ್ತು ವಲಯ ಘಟಕ ಅಧ್ಯಕ್ಷ ಪ್ರವೀಣ ಗಂಗಣ್ಣವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಮುದಕವಿ, ಸುರೇಶ ಬನೋಜಿ, ಹಣಮಂತ ಗಲಗಲಿ, ಸಂಘದ ಅಧ್ಯಕ್ಷ ಸಲೀಮ ಕೊಪ್ಪದ, ಗೀತಾ ಅರೆಬೆಂಚಿ, ರಾಜೇಶ ಪರಸನ್ನವರ, ಜ್ಯೋತಿ ಮುಧೋಳ, ಅಜಯ ಮುಧೋಳ, ಕಲಾವಿದರು, ಇದ್ದರು. ವಿವೇಕ ಮರಾಠಿ ಸ್ವಾಗತಿಸಿದರು. ಎನ್. ಆರ್. ಬಾವಾಖಾನ ನಿರೂಪಿಸಿದರು. ಚಿದಾನಂದ ಮುಂಡಾಸದ ವಂದಿಸಿದರು.