Advertisement

ಶಿರಾ: ಗಂಗನಹಳ್ಳಿಯ ಪುರಾತನ ಕೋಟೆ ರಕ್ಷಿಸಿ; ಶಾಸಕರಿಗೆ ಗ್ರಾಮಸ್ಥರ ಮನವಿ

02:06 PM Nov 20, 2021 | Team Udayavani |

ಶಿರಾ : ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿರುವ ಪುರಾತನ ಕೋಟೆ (ಬುರ್ಜು) ಶಿಥಿಲಗೊಂಡಿದೆ. ಈ ಕೋಟೆಯ ಪಕ್ಕದಲ್ಲಿಯೇ ‘ಮುದ್ದೆ ಮಾರಮ್ಮ’ ದೇವಿಯ ದೇವಾಲಯ ಇದ್ದು, ಕೋಟೆಯ ಕಲ್ಲುಗಳು ದೇವಾಸ್ಥಾನದ ಮೇಲೆ ಬಿದ್ದಿರುವುದರಿಂದ, ದೇವಾಲಯ ಕೂಡ ನೆಲಕ್ಕುರುಳಿದೆ.

Advertisement

ಸುಮಾರು 350-400 ವರ್ಷಗಳ ಪುರಾತನ ಕೋಟೆಯನ್ನು ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಶಾಸಕರಾದ ಸಿ.ಎಂ ರಾಜೇಶ್ ಗೌಡ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕೋಟೆ ಅಥವಾ ಬುರ್ಜಿನ ವಿಶೇಷತೆ :

ಅಪರೂಪದ ಕಟ್ಟಡಗಳ ಮಧ್ಯೆ ಈ ಬುರ್ಜು ಕೂಡ ವಿಶೇಷ. ಇದು ಸುಮಾರು 350-400 ವರ್ಷಗಳ ಹಳೆಯದು ಎಂಬುದು ಸ್ಥಳೀಯರ ನಂಬಿಕೆ. ಕೆಲವರು ಸುಮಾರು 500 ವರ್ಷಗಳ ಹಳೆಯದು ಅಂತಾರೆ.

ಈ ಹಿಂದೆ ದಾಳಿಕೋರರು ಊರುಗಳಿಗೆ ಲಗ್ಗೆ ಇಟ್ಟಾಗ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ,  ಹಾಗೂ ತಮ್ಮ ಆಹಾರ ಧಾನ್ಯಗಳನ್ನು ದರೋಡೆಕೋರರು ಮತ್ತು ಕಳ್ಳರಿಂದ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಈ ಕೋಟೆಯುನ್ನು (ಬುರ್ಜ) ನಿರ್ಮಾಣ ಮಾಡಿದ್ದರಂತೆ.

Advertisement

ಕಳ್ಳರು ಈ ಕೋಟೆ ಹತ್ತಲು ಪ್ರಯತ್ನಿಸಿದರೆ ಬಿಸಿ ರಾಗಿಯ ಅಂಬಲಿಯನ್ನು ದರೋಡೆಕೋರರ ತಲೆಯ ಮೇಲೆ ಸುರಿದು ತಮ್ಮನ್ನು ತಮ್ಮ ಆಹಾರ ಧಾನ್ಯಗಳನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದರು ಎಂದು ಊರಿನ ಹಿರಿಯರ ಹೇಳುತ್ತಾರೆ.

ಮತ್ತೊಂದು ವಿಷಯ ಅಂದ್ರೆ ಈ ಬುರ್ಜಿನ ಪಕ್ಕದಲ್ಲಿಯೇ ‘ಮುದ್ದೆ ಮಾರಮ್ಮ’ನ ದೇವಾಲಯವಿದೆ. ಕೋಟೆಯ ಕಲ್ಲುಗಳು ದೇವಸ್ಥಾನದ ಮೇಲೆ ಬಿದ್ದಿರುವುದರಿಂದ ಆ ದೇವಾಲಯ ಕೂಡ ನೆಲಕ್ಕುರುಳಿದೆ.

ಪ್ರತಿ ಊರಿನಲ್ಲಿ ಏನಾದರೂ ಇಂತಹ ಕುತೂಹಲಭರಿತ ಕಟ್ಟಡಗಳು, ಪುರಾತನ ದೇವಾಲಗಳು, ಸ್ತಂಭಗಳು ಇವೆ. ಇಂತಹವುಗಳನ್ನು ಸರ್ಕಾರ, ಪುರಾತತ್ವ ಇಲಾಖೆ ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಕೂಡ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ ಎಂಬುದು ಗಂಗನಹಳ್ಳಿ ಗ್ರಾಮಸ್ಥರ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next