Advertisement

ಪರಿಸರ ಉಳಿಸಿ ಬೆಳೆಸುವ ಸಂಕಲ್ಪ  ಎಲ್ಲರೂ ಮಾಡಲಿ

09:38 PM Jun 06, 2021 | Team Udayavani |

ತುಮಕೂರು: ಪ್ರಕೃತಿ ಮುಂದೆ ಮನುಷ್ಯಏನು ಇಲ್ಲ. ಇದನ್ನು ತಿಳಿದುಕೊಂಡುಪ್ರಕೃತಿ ಕಾಪಾಡಲು ಪ್ರತಿಯೊಬ್ಬರೂಸಂಕಲ್ಪ ಮಾಡ ಬೇಕು ಎಂದು ಶಾಸಕಜಿ.ಬಿ.ಜ್ಯೊತಿಗಣೇಶ್‌ ಹೇಳಿದರು.

Advertisement

ನಗರದ 32ನೇ ವಾರ್ಡ್‌ನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಮನುಷ್ಯ ದಿನದಿಂದ ದಿನಕ್ಕೆ ಪರಿಸರವನ್ನಹಾಳು ಮಾಡಿದ ಪರಿಣಾಮ ಇಂದು ವಿವಿಧರೀತಿಯಲ್ಲಿ ಸಂಕಷ್ಟವನ್ನು ಮನುಷ್ಯ ಎದುರಿಸಬೇಕಾಗಿದೆ ಎಂದರು.

ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪರಿಸರಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ಇಂದು ಪ್ರಕೃತಿಯ ಅಸಮತೋಲನ ದಿಂದ ಹಲವಾರು ತೊಂದರೆಗಳುಎದುರಾಗುತ್ತಿದೆ. ಕೋವಿಡ್‌ನಿಂದಾಗಿ ಜನರಿಗೆಪರಿಸರವನ್ನ ಕಾಪಾಡಿಕೊಳ್ಳಬೇಕೆಂಬ ಅರಿವುಉಂಟಾಗಬೇಕು. ಈ ವಾರ್ಡ್‌ನಲ್ಲಿ ಅತೀಹೆಚ್ಚು ಪಾರ್ಕ್‌ಗಳಿದ್ದು, ಪಾರ್ಕ್‌ ಉತ್ತಮವಾಗಿ ಅಭಿವೃದ್ಧಿಯಾಗಿದೆ. ಇಂದು ಪರಿಸರದಿನಾ ಚರಣೆ, ನಗರದ ರಸ್ತೆ ಬದಿಗಳಲ್ಲಿ ಆಭಾಗದ ಸಾರ್ವಜನಿಕರು ಮರಗಳನ್ನು ಬೆಳೆಸುವು ದರೊಂದಿಗೆ ಹಾಗೂ ಅವುಗಳನ್ನ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.

ಮಹಾನಗರ ಪಾಲಿಕೆಯ ಮೇಯರ್‌ ಬಿ.ಜಿ.ಕೃಷ್ಣಪ್ಪ, ಆರ್‌ಎಫ್ಒ ನಟರಾಜು, ವಲಯಅರಣ್ಯಾಧಿಕಾರಿ ವಿ.ಪವಿತ್ರಾ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಲುವರಾಜು,ಕಾರ್ಯ ದರ್ಶಿ ಜಯರಾಮಯ್ಯ, ಮಂಜುನಾಥ್‌, ಮುಖಂಡ ಆರ್‌ಟಿಒ ಪ್ರಕಾಶ್‌, ಗಿರಿಜಮ್ಮ, ಮೋಹನ್‌ ಕುಮಾರ್‌, ಮುನಿ ಬಸವರಾಜು ಹಾಗೂ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next