Advertisement

ಗಿಡ ಸಂರಕ್ಷಿಸಿ ಪರಿಸರ ಉಳಿಸಿ: ಬೊಮ್ಮಾಯಿ

02:25 PM Jul 15, 2017 | Team Udayavani |

ಜಾಲಹಳ್ಳಿ: ಗಿಡಗಳನ್ನು ಸಂರಕ್ಷಿಸಿ ಪರಿಸರ ಉಳಿಸಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಇಲ್ಲಿಯ ಜೆ.ಜೆ. ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾರತೀಯ ಜನತಾ ಪಕ್ಷ ಜಾಲಹಳ್ಳಿ ಮಂಡಲ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಸಂಘದ ಸಂಸ್ಥಾಪಕ ಪಂಡಿತ ದಿನದಯಾಳ ಉಪಾಧ್ಯಾಯರ 100ನೇ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಸಸಿ
ನೆಡುವ ಕಾರ್ಯಕ್ರಮ ಸಹ ಒಂದಾಗಿದೆ. ಸಸಿ ನೆಡುವುದರಿಂದ ಮನುಷ್ಯ ಜೀವಿ ಸೇರಿದಂತೆ ಸಕಲ ಜೀವಿಗಳಿಗೂ ಅನುಕೂಲವಾಗುತ್ತದೆ. ಉತ್ತಮ ಗಾಳಿಯಿಂದ ಉತ್ತಮ ಆರೋಗ್ಯ ಸಿಗುತ್ತದೆ. ಇತ್ತೀಚೆಗೆ ಮರಗಳನ್ನು ಕಡಿದು
ಪರಿಸರ ಹಾಳು ಮಾಡಲಾಗುತ್ತಿದೆ. ನಾವೆಲ್ಲರೂ ಪರಿಸರ ಸಂರಕ್ಷಿಸುವುದರ ಜತೆಗೆ ಇನ್ನು ಹೆಚ್ಚಿಗೆ ಬೆಳಸಬೇಕು ಎಂದು ಹೇಳಿದರು. 

ಶಾಸಕ ಶಿವನಗೌಡ ನಾಯಕ, ದೇವದುರ್ಗ ಉಸ್ತುವಾರಿ ವಿಸ್ತಾರಕರಾದ ವಿರುಪಾಕ್ಷಗೌಡ ಬಳ್ಳಾರಿ, ಭಾಜಪ ಜಿಲ್ಲಾ ಕಾರ್ಯದರ್ಶಿ ನಾಗರಾಜ ಅಕ್ಕರಕಿ, ಜಾಲಹಳ್ಳಿ ಮಂಡಲದ ಅಧ್ಯಕ್ಷ ಚಂದಪ್ಪ ಬುದ್ದಿನ್ನಿ, ಪ್ರಧಾನ ಕಾರ್ಯದರ್ಶಿ ಸಿ. ಎಸ್‌. ನಾಡಗೌಡ, ಹನುಮಗೌಡ ಮದರಕಲ್‌, ಗ್ರಾಪಂ ಅಧ್ಯಕ್ಷ ರಂಗನಾಥ ಮಕಾಸಿ, ಮುಖಂಡರಾದ ಬಸವರಾಜ ಪಾಟೀಲ ಗಾಣದಾಳ, ವೀರಣ್ಣ ಬಳೆ, ಭೀಮಣ್ಣ
ನಾಡಗೌಡ, ಪೂರ್ಣಪ್ರಜ್ಞೆ ದೇಸಾಯಿ, ಈಶಣ್ಣ ಕಾಟಳ್ಳಿ, ಶಿವರಾಜ ಪಾಣಿ, ರಮೇಶ ಅನ್ವರಿ, ಸೋಲಬಣ್ಣ ಸೌದ್ರಿ, ಚಂದಪ್ಪ ಭಾವಿಮನಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next