Advertisement

ಬಂಜಾರಾ ಸಂಸ್ಕೃತಿ ಉಳಿಸಿ-ಬೆಳೆಸಿ

10:28 AM Feb 18, 2019 | |

ಮರಿಯಮ್ಮನಹಳ್ಳಿ: ಬಂಜಾರಾ ಸಮುದಾಯದವರು ಸಂಸ್ಕೃತಿ ಜತೆಗೆ ಗೋರ್‌ ಬೋಲಿ ಭಾಷೆಯನ್ನೂ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಎನ್‌. ಶಾಂತಾನಾಯ್ಕ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಹೋಬಳಿ ವ್ಯಾಪ್ತಿಯ ಬಂಜಾರಾ ಸಮುದಾಯದವರು ಆಯೋಜಿಸಿದ್ದ ಸಂತ ಸೇವಾಲಾಲ್‌ ಅವರ 280ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಈ ದೇಶದ ಬಂಜಾರರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿಕೊಂಡಿದ್ದಾರೆ. ಬಂಜಾರರದೇ ಪ್ರತ್ಯೇಕ ಸಂಸ್ಕೃತಿ, ಧರ್ಮವಿದೆ. ಸುಮಾರು 20 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಗೋರ್‌ ಬೋಲಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇದುವರೆಗೂ ಸೇರ್ಪಡೆಯಾಗಿಲ್ಲ. ಈ ಬಗ್ಗೆ ರಾಜಕಾರಣಿಳು ಪ್ರಯತ್ನಿಸಬೇಕಾಗಿದೆ ಎಂದರು.

ಬಂಜಾರರು ತಮ್ಮ ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುವುದನ್ನು ಕೈಬಿಡಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಸರ್ಕಾರಿ ನೌಕರಿ ದೊರಕುವಂತೆ ಉತ್ತಮ ಸಂಸ್ಕಾರ ನೀಡಿ ಎಂದರು. 

ಬಾಗಲಕೋಟೆ ಜಿಲ್ಲೆ ಶಿರೂರು ತಾಂಡಾದ ಕುಮಾರ  ಹಾರಾಜ ಮಾತನಾಡಿ, ಬಂಜಾರಾ ಸಮುದಾಯದ ಯುವಕರು ಗುಟ್ಕಾ, ಬೀಡಿ ಸಿಗರೇಟು ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಸಂತ ಸೇವಾಲಾಲ್‌ ಹೆಸರಿನಲ್ಲಿ ಮಾದಕ ವ್ಯಸನಗಳನ್ನು ಕೈಬಿಡುತ್ತೇವೆಂದು ಇಂದು ಪ್ರಮಾಣ ಮಾಡಬೇಕಾಗಿದೆ ಎಂದರು. ಲಂಬಾಣಿ ಸಮುದಾಯದವರು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರಗಳು ಶಾಶ್ವತ ಯೋಜನೆ ರೂಪಿಸಬೇಕಾಗಿದೆ ಎಂದರು.

ಶಾಸಕ ಎಸ್‌.ಭೀಮಾನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಜಾರರ ವಲಸೆ ಸಮಸ್ಯೆ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಬಂಜಾರರು ಇನ್ನು ಬಡತನದಲ್ಲೇ ಇದ್ದಾರೆ. ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸಲಿಕ್ಕೂ ಆಗದಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿಯಲ್ಲಿ 25 ಲಕ್ಷ ರೂ. ಅನುದಾನದಲ್ಲಿ ಬಂಜಾರಾ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ನುಡಿದರು.

Advertisement

ಈ ಸಂದರ್ಭದಲ್ಲಿ ಧೂಪದಳ್ಳಿ ತಾಂಡಾದ ಶಿವಪ್ರಕಾಶ ಮಹಾರಾಜ ಮಾತನಾಡಿ, ಬಂಜಾರರು ಬೇರೆ ಧರ್ಮ ಮತಗಳಿಗೆ ಮತಾಂತರವಾಗುತ್ತಿದ್ದಾರೆ. ಇದು ಒಳ್ಳೆಯ ಸಂಗತಿಯಲ್ಲ ಎಂದರು.

ಚಂದು ಮಹಾರಾಜ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪಪಂ ಅಧ್ಯಕ್ಷ ಬಿ.ವಿಷ್ಣುನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎನ್‌.ಸತ್ಯನಾರಾಯಣ, ತಾಪಂ ಸದಸ್ಯ ಮಾಜಿ ಸೋಮಣ್ಣ ಉಪ್ಪಾರ ನಂದಿಬಂಡಿ, ಠಾಕ್ರಾ ನಾಯ್ಕ, ಗುಂಡಾ ತಾಂಡಾ ಹೇಮ್ಲಾನಾಯ್ಕ, ರೇಖ್ಯಾನಾಯ್ಕ, ತಾ.ಬ.ತಾಂಡಾ ಸೇವಾನಾಯ್ಕ, ಪೂಜಾರಿ ರೂಪ್ಲಾ ನಾಯ್ಕ, ಗೌಡ್ರು ಚಂದೂನಾಯ್ಕ, ವೆಂಕಟೇಶ್‌ ನಾಯ್ಕ, ಪೂಜಾರಿ ಚಂದ್ರಾ ನಾಯ್ಕ ಸೇರಿದಂತೆ ಸುತ್ತಮುತ್ತಲ ತಾಂಡಾಗಳ ನಾಯ್ಕ, ಕಾರಬಾರಿ, ಢಾವ್‌ ಮುಖಂಡರು ಪಾಲ್ಗೊಂಡಿದ್ದರು. ಶಿಕ್ಷಕ ಭೀಮಾನಾಯ್ಕ ನಿರೂಪಿಸಿದರು. ಪಾಂಡುನಾಯ್ಕ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next