Advertisement

ಸೇವ್‌ ತೆರಿಗೆ

02:50 AM Jul 17, 2017 | Harsha Rao |

ನೌಕರರಿಗೆ ಸಂಬಳ ಬಿಟ್ಟು ತೆರಿಗೆ ಹಿಂಪಡೆತಗಳಲ್ಲಿ ಅನೇಕ ಅವಕಾಶಗಳಿವೆ. ಆದರೆ ಅನೇಕರಿಗೆ ಅದು ಗೊತ್ತಿಲ್ಲ. ಇದು ತೆರಿಗೆ ರಿಟರ್ನ್ ಸಲ್ಲಿಸುವ ಕಾಲವಾದ್ದರಿಂದ ಕೆಲವೊಂದು ಸಂಗತಿಗಳ ಕುರಿತು ವಿಸ್ತೃತವಾಗಿ ಚರ್ಚಿಸುವುದು ಸೂಕ್ತವೆನಿಸುತ್ತದೆ. ಸಂಬಳ ಪಡೆವ ನೌಕರವರ್ಗದ ಮಂದಿಗೆ ತಮ್ಮ ಉದ್ಯೋಗದಾತರಿಂದ ಅನೇಕ ವಿಶಿಷ್ಟ ಸವಲತ್ತುಗಳು ಸಿಗುತ್ತಲೇ ಇರುತ್ತವೆ. ಅವನ್ನೆಲ್ಲ ಪಡೆದುಕೊಳ್ಳುವ ನೌಕರರಿಗೆ ವರ್ಷದ ಕೊನೆಗೆ ಉದ್ಯೋಗದಾತ ಸಂಸ್ಥೆಯಿಂದ ಸಿಗುವ ನಮೂನೆ-16ರಲ್ಲಿ, ನೌಕರನಿಗೆ ಸಲ್ಲುವ ಎಲ್ಲ ಮೊತ್ತಗಳನ್ನೂ ಒಟ್ಟುಸೇರಿಸಿ ತೆರಿಗೆ ಲೆಕ್ಕ ಹಾಕಲಾಗಿರುತ್ತದೆ.  ಆದರೆ ಆ ಬಾಬ್ತುಗಳಲ್ಲಿ ಕೆಲವಕ್ಕೆ ವಿಶೇಷವಾದ ತೆರಿಗೆ ವಿನಾಯಿತಿಯೂ ಇದೆ. ಅವುಗಳನ್ನು ತೆರಿಗೆಬದ್ಧ ಮೊತ್ತದಿಂದ ವ್ಯವಕಲನ ಮಾಡುವುದಕ್ಕೆ ಅವಕಾಶವಿದೆ.  ಒಂದೊಮ್ಮೆ ತೆರಿಗೆ ರಿಟರ್ನ್ ಸಲ್ಲಿಸಿಯಾಗಿದ್ದರೆ, ಮರು-ರಿಟರ್ನ್ ಸಲ್ಲಿಸುವ ಅವಕಾಶವೂ ಇದೆ. 

Advertisement

1. ಹೌಸ್‌ ರೆಂಟ್‌ 
ನೀವು ಸಂಬಳದ ಒಂದು ಭಾಗವಾಗಿ ಎಚ್‌.ಆರ್‌.ಎ.ಪಡೆಯುತ್ತಿರುವ ನೌಕರರಾದರೆ ಮತ್ತು ನೀವು ವಾಸ ಮಾಡುವುದು ಬಾಡಿಗೆಮನೆಯಾಗಿದ್ದು, ಅದಕ್ಕೆ ಬಾಡಿಗೆಯನ್ನು ತೆರುತ್ತಿದ್ದರೆ, ನೀವು ಎಚ್‌.ಆರ್‌.ಎ. ಕ್ಲೈಮು ಮಾಡುವುದಕ್ಕೆ ಅರ್ಹರಿರುತ್ತೀರಿ.  ಆದರೆ ಇಲ್ಲಿ ಕೆಲವು ನಿಬಂಧನೆಗಳಿವೆ.  ಈ ಕೆಳಗಡೆ ಕಾಣಿಸಿರುವುದರಲ್ಲಿ ಯಾವುದು ಕನಿಷ್ಠ ಮೊತ್ತವೋ ಅದು ಎಚ್‌.ಆರ್‌.ಎ. ಬಾಬಿ¤ನಲ್ಲಿ ವ್ಯವಕಲನ ಮಾಡುವುದಕ್ಕೆ ಅರ್ಹತೆಯನ್ನು ಪಡೆಯುತ್ತದೆ.
(ಎ) ಉದ್ಯೋಗದಾತ ಸಂಸ್ಥೆಯಿಂದ ಪಡೆದ ನೈಜ ಎಚ್‌.ಆರ್‌.ಎ. ಮೊತ್ತ
(ಬಿ) ನೀವು ಮೆಟ್ರೋಸಿಟಿಗಳಲ್ಲಿ ವಾಸ ಮಾಡುವವರಾದರೆ ವಾರ್ಷಿಕ ಸಂಬಳದ ಶೇ:50, ಬೇರೆ ಕಡೆ ವಾಸ     ಮಾಡುವವರಾದರೆ ಶೇ:40
(ಸಿ)ವಾರ್ಷಿಕ ಸಂಬಳಕ್ಕಿಂತ ಶೇ:10 ಹೆಚ್ಚುವರಿಯಾಗಿ, ವಾರ್ಷಿಕ ಮನೆಬಾಡಿಗೆ ಪಾವತಿ ಮಾಡಿದ್ದಲ್ಲಿ ಅಂತಹ ಮೊತ್ತ.
ಒಂದುವೇಳೆ ನೀವು ಸ್ವಂತಮನೆಯಲ್ಲಿದ್ದು ಬಾಡಿಗೆ ಪಾವತಿ ಮಾಡುವವರು ಅಲ್ಲವಾದರೆ, ನಿಮಗೆ ಸಿಗುವ ಪೂರ್ಣ ಎಚ್‌.ಆರ್‌.ಎ. ಮೊತ್ತ ತೆರಿಗೆಗೆ ಬದ್ಧವಾಗುತ್ತದೆ. 

2. ತುಟ್ಟಿಭತ್ಯೆ 
 ಬಹುತೇಕ ಇದು ಸರಕಾರಿ ನೌಕರರಿಗೆ ಅನ್ವಯವಾಗುವಂತಹ ಭತ್ಯೆ.  ಸರಕಾರಿ ಅಥವಾ ಸರಕಾರೇತರ ಸಂಸ್ಥೆಗಳಲ್ಲಿರುವ ಯಾವುದೇ ಉದ್ಯೋಗಿಗೆ ಕೊಡಲಾಗುವ ಈ ಭತ್ಯೆಯು ಸಂಪೂರ್ಣವಾಗಿ ತೆರಿಗೆಗೆ ಬದ್ಧವಾದ ಮೊತ್ತವಾಗಿರುತ್ತದೆ. 

3. ಸಾರಿಗೆ ಭತ್ಯೆ
ಬಹುತೇಕ ಕಂಪೆನಿಗಳು ತಮ್ಮ ನೌಕರರಿಗೆ ಕ್ಯಾಬ್‌ ಸೌಲಭ್ಯವನ್ನು ಒದಗಿಸುತ್ತಿದ್ದು ಅದಕ್ಕಾಗಿ ಮಾಹೆಯಾನ ನಿಗದಿತ ಮೊತ್ತವನ್ನು ಟ್ರಾನ್ಸ್‌ಪೊàರ್ಟ್‌ ಅಲೋಯನ್ಸ್‌ ಎಂದು ಪ್ರತ್ಯೇಕವಾಗಿ ದಾಖಲಿಸಿ ಸಂಬಳದ ಮೊತ್ತವನ್ನು ಪೇ ಸ್ಲಿಪ್‌ನಲ್ಲಿ ತೋರಿಸುತ್ತವೆ.  ವರ್ಷಾಂತ್ಯದಲ್ಲಿ ತೆರಿಗೆ ಲೆಕ್ಕದ ರಿಟರ್ನ್ ಸಲ್ಲಿಸುವಾಗ ಬಹುತೇಕ ಮಂದಿ ಇದನ್ನು ಕೂಡ ಸಂಬಳದ ಭಾಗವೆಂದು ಪರಿಗಣಿಸಿ ಒಟ್ಟುಮೊತ್ತದಲ್ಲಿ ಅದಕ್ಕೆ ಆಗತಕ್ಕ ತೆರಿಗೆಯನ್ನು ಪಾವತಿಯೂ ಮಾಡುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಸಾಗಾಣಿಕೆ ಭತ್ಯೆ ನಿಮಗೆ ಪಾವತಿಯಾಗಿದ್ದಲ್ಲಿ, ತಿಂಗಳಿಗೆ ಗರಿಷ್ಠ ರೂ:1600/- ಅಂದರೆ ವಾರ್ಷಿಕವಾಗಿ ರೂ:19,200/- ಗಳನ್ನು ಒಟ್ಟಾರೆ ಸಂಬಳದ ಮೊತ್ತದಿಂದ ಕಟಾವಣೆ ಮಾಡುವುದಕ್ಕೆ ಅವಕಾಶವಿದೆ. ವರಮಾನ ತೆರಿಗೆ ಕಾಯಿದೆಯ ವಿಧಿ 10(14)() ಮತ್ತು ವರಮಾನ ತೆರಿಗೆ ರೂಲ್ಸ್‌ 2ಬಿಬಿಯಲ್ಲಿ ಇದರ ಸ್ಪಷ್ಟ ಉಲ್ಲೇಖವಿದೆ. ಉದ್ಯೋಗದಾತರು ಉಚಿತ ಸಾಗಾಣಿಕೆಯ ಸೌಲಭ್ಯವನ್ನು ನೌಕರರಿಗೆ ಒದಗಿಸುತ್ತಿದ್ದಲ್ಲಿ ಈ ಕಟಾವಣೆಗೆ ಅವಕಾಶ ಬರುವುದಿಲ್ಲ.

4. ಪ್ರವಾಸ ಭತ್ಯೆ
ನೌಕರನು ತನ್ನ ಉದ್ಯೋಗದಾತ ಕಂಪೆನಿಯಿಂದ ಈ ಬಾಬಿ¤ಗೆ ಪಡೆದ ಮೊತ್ತವನ್ನು ವರಮಾನ ತೆರಿಗೆ ರಿಟರ್ನ್ ಸಲ್ಲಿಸುವಾಗ ಕಟಾವಣೆ ಮಾಡಬಹುದು. ಆದರೆ ಅದಕ್ಕೆ ಕೆಳಕಾಣಿಸಿರುವ ನಿಬಂಧನೆಗಳ ಪಾಲನೆ ಅಗತ್ಯವಿದೆ.
(ಎ) ನಾಲ್ಕುವರುಷಗಳ ಅವಧಿಯಲ್ಲಿ ನೌಕರನಿಗೆ ಎರಡು ಪ್ರಯಾಣಗಳಿಗೆ ಮಾತ್ರ ವಿನಾಯಿತಿ ಪಡೆಯುವ ಅವಕಾಶವಿದೆ.
(ಬಿ) ಉದ್ಯೋಗದಾತರಿಂದ ಪಡೆದ ಎಲ್‌.ಟಿ.ಎ. ಮೊತ್ತ ಅಥವಾ ಕಡಿಮೆ ದೂರದ ದಾರಿಯಲ್ಲಿ ಉದ್ದೇಶಿತ ತಾಣ ತಲುಪಲು ಆಗುವ ನಿಖರವಾದ ಖರ್ಚು , ಇವುಗಳಲ್ಲಿ ಯಾವುದು ಕಡಿಮೆಯೋ ಅದು 
ವಿನಾಯಿತಿಗೆ ಅರ್ಹವಾಗುತ್ತದೆ.
(ಸಿ) ವಿನಾಯಿತಿಗೆ ಅರ್ಹವಾಗುವ ಮೊತ್ತ ಪರಿಗಣಿಸುವಾಗ ಅದು ರೈಲಿನ ಎ.ಸಿ.(ಫ‌ಸ್ಟ್‌ ಕ್ಲಾಸ್‌) ಅಥವಾ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯ ಎಕಾನಮಿ ತರಗತಿಯ ಶುಲ್ಕವೂ ಆಗಿರಬಹುದು.
(ಡಿ ) ನಿಜವಾಗಿಯೂ ನೌಕರನು ಪಡೆದ ಎಲ್‌.ಟಿ.ಎ. ಸೌಲಭ್ಯವನ್ನು ಪ್ರಯಾಣಕ್ಕೆ ನಿಯೋಜನೆ ಮಾಡಿದಲ್ಲಿ ಮಾತ್ರ ಈ ಸವಲತ್ತನ್ನು ಪಡೆಯುವುದಕ್ಕೆ ಅವಕಾಶವಿದೆ. 
ವರಮಾನ ತೆರಿಗೆ ಕಾಯಿದೆಯ ಧಿ 10(5) ಮತ್ತು ರೂಲ್‌ 2ಬಿಯಲ್ಲಿ ಇದರ ಸ್ಪಷ್ಟ ಉಲ್ಲೇಖವಿದೆ. 

Advertisement

5. ವೈದ್ಯಕೀಯ ವೆಚ್ಚದ ಹಿಂಪಡೆತ
ನೌಕರನು, ತನಗಾಗಿ ಅಥವಾ ತನ್ನ ಕುಟುಂಬದ ಸದಸ್ಯರಿಗಾಗಿ ಮಾಡಿದ ವೈದ್ಯಕೀಯ ವೆಚ್ಚದ ಬಾಬಿ¤ಗೆ ಕಂಪೆನಿಯು ವೆಚ್ಚದ ಹಿಂಪಡೆತವಾಗಿ ಮೊತ್ತವನ್ನು ನೌಕರನಿಗೆ ಕೊಟ್ಟಿದ್ದಲ್ಲಿ, ಆ ಬಾಬಿ¤ನಲ್ಲಿ ರೂ.15,000ವರೆಗಿನ ಮೊತ್ತವನ್ನು ವಿನಾಯಿತಿಗೆ ಅರ್ಹ ಎಂದು ಪರಿಗಣಿಸಿ ಒಟ್ಟು ಮೊತ್ತದಿಂದ ಕಟಾವಣೆ ಮಾಡಬಹುದು. ಆದರೆ ಇದಕ್ಕೆ ಅನ್ವಯವಾಗುವ ಬಿಲ್‌ ಗಳನ್ನು ಒದಗಿಸಬೇಕಾದ್ದು ಅವಶ್ಯಕ.  ನೌಕರನು ಒಂದುವೇಳೆ  ಮೆಡಿಕಲ್‌ ಅಲೋಯನ್ಸ್‌ ಎಂಬ ಹೆಡ್ಡಿಂಗ್‌ ಅಡಿಯಲ್ಲಿ ಸವಲತ್ತು ಪಡೆಯುತ್ತಿದ್ದರೆ ಆ ಮೊತ್ತ ಸಂಪೂರ್ಣವಾಗಿ ತೆರಿಗೆಗೆ ಬದ್ಧವಾಗುತ್ತದೆ. 

6. ಇನ್ನು ಸಿಟಿ ಕಾಂಪನ್ಸೇಟರಿ ಅಲೋಯನ್ಸ್‌, ಸ್ಪೆಷಲ್‌ ಅಲೋಯನ್ಸ್‌, ಓವರ್‌ ಟೈಮ್‌ ಅಲೋಯನ್ಸ್‌ ಗಳನ್ನು ನೌಕರನು ಪಡೆಯುತ್ತಿದ್ದಲ್ಲಿ ಅವೆಲ್ಲವೂ ತೆರಿಗೆಗೆ ಬದ್ಧವಾಗುತ್ತವೆ. ಅವುಗಳಲ್ಲಿ ಯಾವುದೇ ವಿನಾಯಿತಿ ಸಿಗುವುದಿಲ್ಲ.

7. ಮಕ್ಕಳ ವಿದ್ಯಾಭ್ಯಾಸದ ಅಲೋಯನ್ಸ್‌
ಒಂದು ವೇಳೆ ಉದ್ಯೋಗದಾತ ಸಂಸ್ಥೆ ತನ್ನ ನೌಕರರ ಮಕ್ಕಳಿಗೆ ಇಂತಹದೊಂದು ಅಲೋಯನ್ಸ್‌ ಕೊಡುತ್ತಿದ್ದಲ್ಲಿ ಅದರ ಬಾಬಿ¤ನಲ್ಲಿ ತಿಂಗಳಿಗೆ ಒಂದುನೂರು ರೂಪಾಯಿಯಂತೆ ವಾರ್ಷಿಕ 1200 ರೂ. ಲೆಕ್ಕದಲ್ಲಿ ಎರಡು ಮಕ್ಕಳಿಗೆ ಒಟ್ಟು ಮೊತ್ತದಲ್ಲಿ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಅವಕಾಶವಿರುತ್ತದೆ. ಇದಕ್ಕೆ ಹೊರತಾಗಿ ಸೆಕ್ಷನ್‌ 80ಸಿ ಅಡಿಯಲ್ಲಿ ಮಕ್ಕಳ ಟ್ಯೂಷನ್‌ ಫೀ ಬಾಬ್ತು ತೆತ್ತಿರುವ ಮೊತ್ತಕ್ಕೆ ಸಿಗುವ ಪಠ್ಯೇತರ ವಿನಾಯಿತಿ ಕೂಡ ಇರಲಿದ್ದು, ಅದಕ್ಕೆ ಯಾವುದೇ ಬಾಧಕವಾಗುವುದಿಲ್ಲ.

8. ಮಕ್ಕಳ ಹಾಸ್ಟೆಲ್‌ ಖರ್ಚು 
ಒಂದು ವೇಳೆ ಮಕ್ಕಳ ಹಾಸ್ಟೆಲ್‌ ಖರ್ಚಿನ ಬಾಬಿ¤ಗೆಂದು ನೌಕರನಿಗೆ ಉದ್ಯೋಗದಾತ ಕಂಪೆನಿಯು ಅಲೋಯನ್ಸ್‌ ಕೊಡುತ್ತಿದ್ದಲ್ಲಿ ತಿಂಗಳಿಗೆ 300ರೂ.ನಂತೆ ವಾರ್ಷಿಕ 3,600 ಲೆಕ್ಕದಲ್ಲಿ ಒಟ್ಟಾರೆಯಾಗಿ ಎರಡು ಮಕ್ಕಳಿಗೆ ವಿನಾಯಿತಿ ಪಡೆಯುವುದಕ್ಕೆ ಅವಕಾಶವಿದೆ. 

– ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next