Advertisement

ಪಡಿತರ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿ : ಕೇಂದ್ರ ಸರಕಾರಕ್ಕೆ ಪತ್ರ!

02:50 PM Sep 26, 2022 | Team Udayavani |

ನವದೆಹಲಿ : ಪಡಿತರ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವಂತೆ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಈ ಪತ್ರವನ್ನು ಆಹಾರ ಮತ್ತು ಸರಬರಾಜು ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರಿಗೆ ಸೆಪ್ಟೆಂಬರ್ 20 ರಂದು ಕಳುಹಿಸಲಾಗಿದೆ.

Advertisement

ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಶನ್ ಈ ಪತ್ರವನ್ನು ನೀಡಿದ್ದು, ಅವರ ಬೇಡಿಕೆಗಳನ್ನು ತರ್ಕಬದ್ಧವಾಗಿ ಪರಿಗಣಿಸುವ ಸಲುವಾಗಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಸ್ವಂಭರ್ ಬಸು ಅವರು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಕೇಂದ್ರ ಹಣಕಾಸು ಕಾರ್ಯದರ್ಶಿ, ಕೇಂದ್ರ ಕಂದಾಯ ಕಾರ್ಯದರ್ಶಿ, ಕೇಂದ್ರ ಗ್ರಾಹಕ ರಕ್ಷಣೆ ಮತ್ತು ಆಹಾರ ಸಚಿವಾಲಯದ ರಾಜ್ಯ ಸಚಿವರಿಗೆ ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ : ಭಾರತದ ಬಗ್ಗೆ ಅಪಪ್ರಚಾರ: ಅಮೆರಿಕದ ಮಾಧ್ಯಮಗಳ ವಿರುದ್ಧ ಸಚಿವ ಜೈಶಂಕರ್ ಆಕ್ರೋಶ

ಎಲ್ಲಾ ರಾಜ್ಯಗಳ ಆಹಾರ ಆಯುಕ್ತರು ಮತ್ತು ಆಹಾರ ಕಾರ್ಯದರ್ಶಿಗಳು. ದೇಶದ ಪಡಿತರ ಅಂಗಡಿಗಳನ್ನು ಉಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಪಡಿತರ ವಿತರಕರು ಪ್ರತಿಪಾದಿಸಿದ್ದಾರೆ. ರಾಜ್ಯ ಸರಕಾರಗಳೂ ಮುಂದೆ ಬರಬೇಕು. ಹೀಗಾಗಿ ಪಡಿತರ ಅಂಗಡಿಗಳಿಂದ ಪರವಾನಗಿ ಪಡೆದ ಮದ್ಯ ಮಾರಾಟ ಮಾಡುವಂತೆ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಫೆಡರೇಶನ್ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಸರಕಾರದಿಂದ ಅನುಮೋದಿತವಾಗಿರುವ ಪಡಿತರ ಅಂಗಡಿಗಳ ಸಂಖ್ಯೆ 5ಲಕ್ಷ 37 ಸಾವಿರದ 868. ಸುಮಾರು ಎರಡೂವರೆ ಕೋಟಿ ಜನರು ಈ ಅಂಗಡಿಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ. ಮತ್ತು ಪರೋಕ್ಷವಾಗಿ, ಐದೂವರೆ ಕೋಟಿಗೂ ಹೆಚ್ಚು ಜನರು ಅವಲಂಬಿತರಾಗಿದ್ದಾರೆ. ಪ್ರಸ್ತುತ ಮೂಲಸೌಕರ್ಯದಲ್ಲಿ ಪಡಿತರ ವ್ಯವಸ್ಥೆಯು ನಡೆಯುತ್ತಿರುವ ರೀತಿಯಲ್ಲಿ ಪಡಿತರ ವಿತರಕರು ಲಾಭವನ್ನು ಕಾಣುತ್ತಿಲ್ಲ ಎಂದು ವಿತರಕರು ಹೇಳಿದ್ದಾರೆ.

Advertisement

ಪಡಿತರ ಅಂಗಡಿಗಳನ್ನು ಜೀವಂತವಾಗಿಡಲು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ. ಹಾಗಾಗಿ ಮದ್ಯ ಮಾರಾಟದ ಬಗ್ಗೆ ಪ್ರಸ್ತಾವನೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಕಾಲದಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಪಡಿತರ ವಿತರಕರು ಆಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next