Advertisement

ಗೋವಾ: ‘ಮಹದಾಯಿ ಉಳಿಸಿ’ಹೋರಾಟ ತೀವ್ರಗೊಳಿಸಲು ಸಂಘಟನೆ ಸಂಕಲ್ಪ

05:18 PM Mar 19, 2023 | Team Udayavani |

ಪಣಜಿ: ಕರ್ನಾಟಕದಲ್ಲಿ ಕಳಸಾ ಭಂಡೂರಿ ಯೋಜನೆಗೆ ಪರಿಷ್ಕೃತ ಯೋಜನೆಗೆ ಜಲ ಆಯೋಗ ಅನುಮೋದನೆ ನೀಡಿದ ನಂತರ ಕರ್ನಾಟಕ ಮತ್ತು ಗೋವಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಈ ನೀರನ್ನು ಯಾವುದೇ ಸಂದರ್ಭದಲ್ಲೂ ಕರ್ನಾಟಕಕ್ಕೆ ಹರಿಸದಿರಲು ನಿರ್ಧರಿಸಿರುವ ಗೋವಾ ಮಹದಾಯಿ ಉಳಿಸಿ (ಸೇವ್ ಮಹದಾಯಿ) ಸಂಘಟನೆಯು ತನ್ನ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪ ಪ್ರಕಟಿಸಿದೆ.

Advertisement

ಇದೇ ಬೇಡಿಕೆಗಾಗಿ ಮಾರ್ಚ್ 20ರಂದು ಗೋವಾ ಬಂದ್‍ಗೆ ಕರೆ ನೀಡಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆಯ ಹಿನ್ನೆಲೆಯಲ್ಲಿ ಗೋವಾ ಬಂದ್ ಹಿಂಪಡೆದಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ಆದಾಗ್ಯೂ, ಮಾರ್ಚ್ 22 ರ ಬುಧವಾರ, ಮಾಂಡವಿ ನದಿಯ ಹೊಸ ಸೇತುವೆಯ ಮೇಲೆ ಸಂಜೆ 7 ಗಂಟೆಗೆ ಮಹಾ ಆರತಿ ಹಾಗೂ ಜನಜಾಗೃತಿ ಸಭೆಯನ್ನು ಆಯೋಜಿಸಲಾಗುವುದು, ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಗೋವಾ ಬಂದ್‍ಗೆ ಕರೆ ನೀಡಲಾಗುವುದು ಎಂದು ಸೇವ್ ಮಹದಾಯಿ ವೇದಿಕೆಯ ಪ್ರಜ್ವಲ್ ಸಾಖರದಾಂಡೆ ಹೇಳಿದರು.

ಪಣಜಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಹದಾಯಿ ಜಲ ವಿವಾದ ‘ಮಹದಾಯಿ ಉಳಿಸಿ’ ಆಂದೋಲನವನ್ನು ತೀವ್ರಗೊಳಿಸಲು ವೇದಿಕೆ ಇಂದು ಘೋಷಣೆ ಮಾಡಿದೆ. ಕರ್ನಾಟಕದೊಂದಿಗೆ ನ್ಯಾಯಾಲಯದ ಹೋರಾಟವು ಸಂಪೂರ್ಣವಾಗಿ ಪರಿಸರ ಸಮಸ್ಯೆಗಳ ಕುರಿತದ್ದೇ ಆಗಿದೆ.

ಆದ್ದರಿಂದ ಮಹದಾಯಿ ಅಭಯಾರಣ್ಯವು ಹುಲಿ ಸಂರಕ್ಷಿತ ಪ್ರದೇಶವಾದರೆ ಅದರ ಲಾಭವೂ ಗೋವಾದ ಪರಿಸರದ ಜೊತೆಗೆ ಇರುತ್ತದೆ ಮತ್ತು ಅಂತಹ ನೀರಿನ ತಿರುವಿನ ಉದ್ದೇಶಗಳಿಗೆ ಅಡ್ಡಿಯಾಗುತ್ತದೆ. ಆದ್ದರಿಂದ ಸರಕಾರ ಆದಷ್ಟು ಬೇಗ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು ಎಂದು ಈ ಸಂದರ್ಭದಲ್ಲಿ ಸೇವ್ ಮಹದಾಯಿ ಸಂಘಟನೆ ಆಘ್ರಹಿಸಿದೆ.

ಈ ಸಂದರ್ಭದಲ್ಲಿ ಸೇವ್ ಮಹದಾಯಿ ಸಂಘಟನೆಯ ಹೃದಯನಾಥ್ ಶಿರೋಡ್ಕರ್. ಪ್ರಜ್ವಲ್ ಸಾಖರದಾಂಡೆ, ಅನಾ ಗ್ರಾಸಿಯಾಸ್, ಮಹೇಶ ಮಾಂಬ್ರೆ, ರಾಜನ್ ಘಾಟೆ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: ದೆಹಲಿಯ ಮೆಟ್ರೋ ನಿರ್ಮಾಣ ಪ್ರದೇಶದ ಬಳಿ ಚೀಲದಲ್ಲಿ ಮಹಿಳೆಯ ಕೊಳೆತ ದೇಹದ ಭಾಗಗಳು ಪತ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next