Advertisement

ಭೂಮಿಯನ್ನು ವಿನಾಶದಂಚಿನಿಂದ ಕಾಪಾಡಿ: ಪ್ರಭಾಕರ್‌ ಕುಲಾಲ್‌

02:45 AM Jul 18, 2017 | Team Udayavani |

ಮರವಂತೆ (ಉಪ್ಪುಂದ): ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಬೈಂದೂರು ತಾಲೂಕು, ಕಿರಿಮಂಜೇಶ್ವರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉಳ್ಳೂರು-11, ಅರಣ್ಯ ಇಲಾಖೆ ಬೈಂದೂರು ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಮೆಕೋಡು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮೆಕೋಡಿನಲ್ಲಿ ಕೆರೆ ಸುತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

Advertisement

ಬೈಂದೂರು ಅರಣ್ಯ ಅಧಿಕಾರಿ ಪ್ರಭಾಕರ್‌ ಕುಲಾಲ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಜನರ ಮತ್ತು ಸರ್ಕಾರಗಳ ಮುಂದಾಲೋಚನೆಯ ಕೊರತೆ ಹಾಗೂ ಅಭಿವೃದ್ಧಿಯೆಡೆಗಿನ ನಿಷ್ಕಾಳಜಿಯ ಕಾರಣದಿಂದ ವಿಶ್ವದಲ್ಲಿ ಮಾನವನ ವಾಸಸ್ಥಾನವಾಗಿರು ಭೂಮಿ ವಿನಾಶದತ್ತ ಸಾಗುತ್ತಿದೆ. ಇದನ್ನು ತಡೆಯಲು ಪ್ರತಿ ವ್ಯಕ್ತಿಯೂ ಜಾಗೃತನಾಗಿ ತನ್ನ ನೆಲೆಯಲ್ಲಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷೆ ಸುಮಾ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ, ಪ್ರವೀಣಚಂದ್ರ ಶೆಟ್ಟಿ ಮೆಕೋಡು, ಸತೀಶ್‌ ಶೆಟ್ಟಿ ಉಪ್ರಳ್ಳಿ, ಅಪ್ಪಣ್ಣ ಶೆಟ್ಟಿ, ಶ್ರೀನಿವಾಸ ಪೂಜಾರಿ, ಉದಯ್‌ ಪೂಜಾರಿ, ಸೇವಾಪ್ರತಿನಿಧಿ ಉಮೇಶ್‌ ಉಪಸ್ಥಿತರಿದ್ದರು. ಉಳ್ಳೂರು-11 ಒಕ್ಕೂಟದ ಸರ್ವಸದಸ್ಯರು ಭಾಗವಹಿಸಿದರು.
ವಲಯ ಮೇಲ್ವಿಚಾರಕ ಪ್ರವೀಣ ಸ್ವಾಗತಿಸಿ, ದಿನೇಶ ಆಚಾರ್ಯ ನಿರೂಪಿಸಿ, ಸೇವಾಪ್ರತಿನಿಧಿ ಸೀತಾರಾಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next