Advertisement

ಸವದತ್ತಿ ಕೊಳ್ಳದಲ್ಲಿ ಜನಸಾಗರ

11:02 AM Feb 06, 2023 | Team Udayavani |

ಸವದತ್ತಿ: ಯಲ್ಲಮ್ಮನಗುಡ್ಡಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುವ ಭಕ್ತರಿಗೆ ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು ಸೇರಿ ಮೂಲ ಸೌಲಭ್ಯಗಳ ಕೊರತೆ ಪ್ರತಿ ವರ್ಷ ಇದ್ದದ್ದೇ. ದೇವಸ್ಥಾನ ಆಡಳಿತ ಮಂಡಳಿಯವರು ಪ್ರತಿ ವರ್ಷ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸುತ್ತಾರಾದರೂ ಅಸಂಖ್ಯಾತ ಭಕ್ತರ ಮಧ್ಯೆ ಈ ವ್ಯವಸ್ಥೆಗಳು ಸಾಲದಾಗಿ ಭಕ್ತರ ಪರದಾಟ ಪ್ರತಿವರ್ಷ ತಪ್ಪಿದ್ದಲ್ಲ.

Advertisement

ನೀರಿನ ಗೋಳು: 20ಲಕ್ಷಕ್ಕೂ ಅ ಧಿಕ ಜನತೆ ಸೇರುವ ಜಾತ್ರೆಯಲ್ಲಿ ನೀರಿಗಾಗಿ ಪರದಾಟ ಸಾಮಾನ್ಯವಾಗಿದೆ. ಸರಕಾರದಿಂದ ಸಾಕಷ್ಟು ಅನುದಾನ ಹರಿದು ಬಂದರೂ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಗುಡ್ಡದಲ್ಲಿ 130ಕ್ಕೂ ಅಧಿ ಕ ನೀರಿನ ತೊಟ್ಟಿಗಳು, ನಲ್ಲಿಗಳನ್ನು ಅಳವಡಿಸಲಾಗಿದೆ. ಇವುಗಳ ಉಪಯೋಗ ಕೆಲ ಜನಕ್ಕೆ ಮಾತ್ರ ಆಗುತ್ತದೆ.

ಚಕ್ಕಡಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಭರತ ಹುಣ್ಣಿಮೆ ಜಾತ್ರೆಗೆ ಅತ್ಯಧಿಕ ಪ್ರಮಾಣದಲ್ಲಿ ಚಕ್ಕಡಿಗಳು ಬರುತ್ತವೆ. ಎತ್ತುಗಳಿಗೂ ನೀರಿನ ಕೊರತೆಯಾಗಿ ಪಕ್ಕದ ಉಗರಗೋಳದ ಕೆರೆ, ಮಲಪ್ರಭಾ ನದಿಗೆ ಸುಮಾರು3-4 ಕಿ.ಮೀನಷ್ಟು ಸಾಗಿ ನೀರಿನ ಬವಣೆ ತಣಿಸುವಂತಾಗಿದೆ. ಭರತ ಹುಣ್ಣಿಮೆ ಜಾತ್ರೆಯಲ್ಲಿ ಬಿರು ಬಿಸಿಲು ಲೆಕ್ಕಿಸದೇ ಭಕ್ತರು ಸರದಿ ಸಾಲಲ್ಲಿ ನಿಂತು ದೇವಿ ದರ್ಶನ ಪಡೆದರು. ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ರಸ್ತೆ ಮೇಲೂ ಜನ ಸಾಲುಗಟ್ಟಿ ನಿಲ್ಲುವಂತಾಯಿತು.

ವೃದ್ಧರು, ಮಹಿಳೆಯರು, ಕಿರಿಯರೆನ್ನದೇ ಬಿಸಿಲಿನಲ್ಲಿ ನಿಲ್ಲುವಂತಾಯಿತು. ನೀರು, ನೆರಳಿನ ವ್ಯವಸ್ಥೆ ಇಲ್ಲದೇ ಬಿಸಿಲಿನ ತಾಪಕ್ಕೆ ವೃದ್ಧ ಮಹಿಳೆ ತಲೆ ಸುತ್ತಿ ಬಿದ್ದ ಘಟನೆಯೂ ನಡೆಯಿತು.

ಟ್ರಾಫಿಕ್‌ ಸಮಸ್ಯೆ:

Advertisement

ಪ್ರತಿ ವರ್ಷ ರಸ್ತೆ ಬದಿ ವಾಹನ ನಿಲುಗಡೆ ಮಾಡುತ್ತಿದ್ದುದರಿಂದ ಜಾತ್ರೆ ದಿನ ಸವದತ್ತಿ, ಉಗರಗೋಳ, ನೂಲಿನ ಗಿರಣಿಗಳ ಮಾರ್ಗದಲ್ಲಿ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿತ್ತು. ವಾಹನಗಳು ಸಾಲುಗಟ್ಟಿ ನಿಂತು ಸಂಕಷ್ಟ ಅನುಭವಿಸುತ್ತಿದ್ದರು. ಈ ಬಾರಿ ಪೊಲೀಸ್‌ ಹಾಗೂ ಗೃಹ ರಕ್ಷಕದಳದ ಕ್ರಮಬದ್ಧ ನಿರ್ವಹಣೆಯಿಂದ ಸಂಚಾರದಲ್ಲಿವ್ಯತ್ಯಯ ಉಂಟಾಗಲಿಲ್ಲ.

ಕಟ್ಟು ನಿಟ್ಟಿನ ಕ್ರಮ ವಹಿಸಿದ್ದರಿಂದ ಉಗರಗೋಳ ಮಾರ್ಗದ ಬನ್ನಿ ಮರಕ್ಕಷ್ಟೇ ಸಂಚಾರ ದಟ್ಟಣೆ ಸೀಮಿತವಾಗಿತ್ತು. ಉಗರಗೋಳ ಮಾರ್ಗದ ಇಕ್ಕಟ್ಟಾದ ರಸ್ತೆಯಿಂದ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಅಗಲಿಕರಣಗೊಳಸಬೇಕಂಬ ಕೂಗು ಕೇಳಿ ಬಂತು.

ಜೋಗುಳಭಾವಿ ಮತ್ತುಎಪಿಎಂಸಿ ಕ್ರಾಸ್‌ನಲ್ಲಿ ವಾಹನಗಳ ಓಡಾಟ ಸರಾಗವಾಗಿ ನಡೆಯಿತು. ಪೊಲೀಸ್‌ ಇಲಾಖೆ ಕಾರ್ಯ ವೈಖರಿಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

30 ವರ್ಷಗಳಿಂದ ಅಮ್ಮನ ಜಾತ್ರೆಗೆ ಬರುವ ನಾವು ಪ್ರತಿ ವರ್ಷ ಟ್ರಾಫಿಕ್‌ ಸಮಸ್ಯೆ ಅನುಭವಿಸುತ್ತಿದ್ದೆವು. ಇದೀಗ ಪೊಲೀಸರ ಸಹಕಾರದಿಂದ ಸಂಚಾರ ಸಮಸ್ಯೆ ಕೊಂಚ ತಪ್ಪಿದಂತಾಗಿದೆ. ಜಾನುವಾರುಗಳ ಕುಡಿವ ನೀರಿಗಾಗಿ ಪಕ್ಕದ ಉಗರಗೋಳ ಕೆರೆ ಆಸರೆಯಾಗಿದೆ. ಆಡಳಿತ ವರ್ಗದಿಂದ ಸಮರ್ಪಕ ನೀರು ಪೂರೈಸಬೇಕಿದೆ. -ಸಂಗಪ್ಪ ಅಂಕಲಿ, ಹದಲಿ ಗ್ರಾಮದ ದೇವಿ ಭಕ್ತ

ರಸ್ತೆ ಸೇತುವೆಗೆ ಒತ್ತಾಯ:

ಕಳೆದ 5 ವರ್ಷಗಳ ಹಿಂದೆ ಆರಂಭಗೊಂಡಿದ್ದ ಯಲ್ಲಮ್ಮನ ಗುಡ್ಡದ ಬೈಪಾಸ್‌ ರಸ್ತೆ ಸೇತುವೆ ಕಾಮಗಾರಿ ಅಪೂರ್ಣಗೊಂಡಿದೆ.  ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಈಗ ಕೆಲ ವಾಹನ ಸವಾರರು ಇದೇ
ಸೇತುವೆ ಮೇಲೆ ಸಂಚರಿಸುತ್ತಿದ್ದು, ಅವಘಡ ಸಂಭವಿಸುವ ಮೊದಲೇಕಾಮಗಾರಿ ಮುಕ್ತಾಯಗೊಳಿಸಲು ವಾಹನ ಸವಾರರು ಒತ್ತಾಯಿಸಿದ್ದಾರೆ.

-ಡಿ.ಎಸ್‌.ಕೊಪ್ಪದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next