Advertisement

ಸಾವರ್ಕರ್‌ ತಂಡ ಸೇರಿದ ಜಾಹ್ನವಿಕಾ

02:54 PM Mar 15, 2023 | Team Udayavani |

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರ ಜೀವನಗಾಥೆ ಈಗ ಕನ್ನಡದಲ್ಲೂ ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಸುನೀಲ್‌ ರಾವ್‌ ಕಾಣಿಸಿಕೊಳ್ಳುತ್ತಿರುವ ಸಾವರ್ಕರ್‌ ಪಾತ್ರದ ಫ‌ಸ್ಟ್‌ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ.

Advertisement

ಹೌದು, ವೀರ್‌ ಸಾವರ್ಕರ್‌ ಚಿತ್ರದಲ್ಲಿ ಜಾಹ್ನವಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾರು ಈ ಜಾಹ್ನವಿಕಾ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಕೀರ್ತಿ. “ಪ್ರಾರಂಭ’, “ಓ ಮೈ ಲವ್‌’ ಚಿತ್ರಗಳಲ್ಲಿ ಕೀರ್ತಿ ಕಲ್ಕೆರಿ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ತಮ್ಮ ಹೆಸರನ್ನು ಜಾಹ್ನವಿಕಾ ಎಂದು ಬದಲಿಸಿಕೊಂಡಿದ್ದು, ಈಗ “ವೀರ್‌ ಸಾವರ್ಕರ್‌’ ತಂಡ ಸೇರಿಕೊಂಡಿದ್ದಾರೆ.

ಈಗಾಗಲೇ ಈ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಸಿನಿಮಾದಲ್ಲಿ ವೀರ ಸಾವರ್ಕರ್‌ ಪಾತ್ರವನ್ನು ಸುನೀಲ್‌ ರಾವ್‌ ನಿರ್ವಹಿಸಿದರೆ, ಮಹಾತ್ಮ ಗಾಂಧಿ ಪಾತ್ರದಲ್ಲಿ ಹಿಂದಿಯ ನಟ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ಉಳಿದಂತೆ ಸಾಯಿ ಕುಮಾರ್‌, ರಂಗಾಯಣ ರಘು, ರವಿಶಂಕರ್‌, ಅನು ಪ್ರಭಾಕರ್‌ ಹೀಗೆ ಸಿನಿಮಾದ ಇತರ ಪಾತ್ರಗಳಲ್ಲಿ ಬಹುತೇಕ ಕನ್ನಡದ ಕಲಾವಿದರೆ ಅಭಿನಯಿಸಲಿದ್ದಾರೆ.

ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಚಿತ್ರೀ ಕರಣ, ಇದೇ ಮಾರ್ಚ್‌ 25 ರಿಂದ ಆರಂಭವಾಗಲಿದೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. ಇನ್ನು ಹಿಂದಿಯಲ್ಲಿ ಈಗಾಗಲೇ ಸಾವರ್ಕರ್‌ ಬಯೋಪಿಕ್‌ ರೆಡಿ ಆಗುತ್ತಿದ್ದು, ಬಹುತೇಕ ‌ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್‌ನ‌ಲ್ಲೂ ಸಾವರ್ಕರ್‌ ಬಯೋಪಿಕ ನಿರ್ಮಾಣವಾಗುತ್ತಿದೆ. ಹಿಂದಿಯಲ್ಲಿ ಬರುತ್ತಿರುವ ಬಯೋಪಿಕ್‌ಗೂ ಈ ಸಿನಿಮಾಗೂ ನಮಗೂ ಸಂಬಂಧವಿಲ್ಲ ಎಂಬುದು ಚಿತ್ರತಂಡದ ಮಾತು

Advertisement

Udayavani is now on Telegram. Click here to join our channel and stay updated with the latest news.

Next