Advertisement

ಸಿದ್ಧರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿ, ಕಪ್ಪು ಬಾವುಟದ ಸ್ವಾಗತ

11:38 AM Aug 18, 2022 | Team Udayavani |

ಮಡಿಕೇರಿ: ಒಂದು ದಿನದ ಕೊಡಗು ಜಿಲ್ಲಾ ಪ್ರವಾಸಕ್ಕಾಗಿ ಕೊಡಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ  ಕೊಡಗಿನ ಗಡಿ ಭಾಗದ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಾವರ್ಕರ್  ಭಾವಚಿತ್ರವನ್ನು ಕಾರಿನಲ್ಲಿ ಕುಳಿತಿದ್ದ ಸಿದ್ಧರಾಮಯ್ಯ ಮಡಿಲಲ್ಲಿಟ್ಟರಲ್ಲದೇ  ಕಪ್ಫುಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ಧರಾಮಯ್ಯ  ಘೋಷಣೆ ಕೂಗಿದ ಘಟನೆ ಗುರುವಾರ ನಡೆದಿದೆ.

Advertisement

ರಾಜ್ಯದಲ್ಲಿ ಮತಾಂಧ ಟಿಪ್ಪುವಿನ  ಜಯಂತಿ ಆಚರಣೆ  ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದ್ದು, ಜೊತೆಗೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ  ಹಿಂದು ವಿರೋಧಿ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡಲು ಅನರ್ಹರಾಗಿದ್ದಾರೆಂದು ಬಿ.ಜೆ.ಪಿ. ಯುವ ಮೋರ್ಚಾ ಜಿಲ್ಲಾಧ್ಯಕ್ಷ  ದರ್ಶನ್ ಜೋಯಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಬಾ ನಲ್ಲೆ ಮಧುಚಂದ್ರಕ್ಕೆ ಸಿನಿಮಾ ಮಾದರಿ ಪತ್ನಿ ಕೊಂದ!

ಈ ಸಂದರ್ಭ ಪೋಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ,  ಬಿಗಿ ಬಂದೋಬಸ್ತ್  ವ್ಯವಸ್ಥೆ ಮಾಡಿ, ಸಿದ್ಧರಾಮಯ್ಯರ  ವಾಹನ ಮುಂದೆ ಚಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next