Advertisement

ಕನ್ನಡ ಸಾಹಿತ್ಯ ಅರಿತು ನಡೆದರೆ ಬದುಕು ಸಾರ್ಥಕ

10:05 AM Jan 11, 2019 | Team Udayavani |

ಸವಣೂರು: ಕನ್ನಡ ಸಾಹಿತ್ಯ ಕೇವಲ ಓದಿದರಷ್ಟೇ ಸಾಲದು, ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಬದಕು ಕಟ್ಟಿಕೊಂಡಾಗ ಮಾತ್ರ ಕನ್ನಡಿಗರಾದ ನಮಗೆ ಕನ್ನಡ ನಾಡಿನಲ್ಲಿ ಹುಟ್ಟಿದ ಸಾರ್ಥಕತೆ ಸಿಗಲು ಸಾಧ್ಯ ಎಂದು ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು ತಿಳಿಸಿದರು.

Advertisement

ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ವಿ.ಕೃ.ಗೋಕಾಕ ವೇದಿಕೆಯಲ್ಲಿ ಜರುಗಿದ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಸವಣೂರು ತಾಲೂಕು ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಜಗತ್ತಿನಾದ್ಯಂತ ಹೆಸರಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಈ ಹಿರಿಮೆ ತಂದುಕೊಟ್ಟ ಕೀರ್ತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ| ವಿ.ಕೃ.ಗೋಕಾಕ ಅವರಿಗೆ ಸಲ್ಲುತ್ತದೆ. ಅನೇಕ ಖ್ಯಾತ ಸಾಹಿತಿಗಳು ಹುಟ್ಟಿದ ಈ ನೆಲದಲ್ಲಿ ಇನ್ನೂ ಹೆಚ್ಚು ಹೆಚ್ಚು ಪ್ರತಿಭಾನ್ವಿತ ಸಾಹಿತಿಗಳ ಉಗಮವಾಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಸವಣೂರು ಧ್ರುವತಾರೆಯಾಗಿ ಮೆರೆಯುವಂತಾಗಬೇಕು ಎಂದು ಆಶಿಸಿದರು. ಭಾವೈಕ್ಯದ ಇತಿಹಾಸ ಹೊಂದಿದ ಈ ನೆಲದ ಮಕ್ಕಳು ಕನ್ನಡ ನಾಡು, ನುಡಿಗಾಗಿ ಹಗಲಿರುಳು ಶ್ರಮಿಸಬೇಕು ಎಂದು ಹೇಳಿದರು.

ಕನ್ನಡ ನಾಡಿನ ಹಿರಿಮೆಯನ್ನು ಎತ್ತಿಹಿಡಿದು ಕನ್ನಡಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದ ನಾಡು ನಮ್ಮ ಹಾವೇರಿ ಜಿಲ್ಲೆ. ಇಂತಹ ನೆಲದಲ್ಲಿ ಜನಿಸಿದ ನಾವು ಪುಣ್ಯವಂತರು. ಆದ್ದರಿಂದ, ಪ್ರತಿಯೊಬ್ಬರು ಕನ್ನಡ ನಾಡಿನ ಭಾಷೆ, ಕಲೆ, ಸಾಹಿತ್ಯ, ಕೃಷಿ, ಸೇರಿದಂತೆ ನಮ್ಮ ಪೂರ್ವಜರು ಉಳಿಸಿಕೊಂಡು ಬಂದ ಸಂಸ್ಕೃತಿಯನ್ನು ಬೆಳೆಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪ್ರಗತಿಯನ್ನು ಹೊಂದುವುದರ ಜತೆಗೆ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮೂಲಕ ಹೊಸ ಹೊಸ ಪ್ರಯೋಗಗಳೊಂದಿಗೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಇನ್ನೂ ಹೆಚ್ಚು ಶ್ರೀಮಂತಗೊಳಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲ್ಲೂಕಾಧ್ಯಕ್ಷ ಪ್ರಭು ಅರಗೋಳ ವಹಿಸಿದ್ದರು. ಸಾನ್ನಿಧ್ಯವನ್ನು ದೊಡ್ಡಹುಣಸೇಕಲ್ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ| ಶ್ರೀಕಂಠಗೌಡ ಅಯ್ಯನಗೌಡ್ರ, ಸಾಹಿತಿ ಗಂಗಾಧರ ನಂದಿ, ಬಸನಗೌಡ ಕೊಪ್ಪದ, ಮಲ್ಲಾರೆಪ್ಪ ತಳ್ಳಿಹಳ್ಳಿ, ಸಂಗಪ್ಪ ಎರೇಶಿಮಿ, ಶಿವಪುತ್ರಪ್ಪ ಕಲಕೋಟಿ, ಗಂಗಾಧರ ಬಾಣದ, ಆಹಾರ ಸಮಿತಿ ಅಧ್ಯಕ್ಷ ವಿಶ್ವನಾಥ ಹಾವಣಗಿ, ಚನ್ನಬಸಯ್ಯ ಪ್ರಭಯ್ಯನವರಮಠ, ಬಸನಗೌಡ ಪಾಟೀಲ, ಶಿಕ್ಷಕ ವಿ.ಬಿ.ದೊಂಗಡೆ, ಎಸ್‌.ವಿ.ಇಚ್ಚಂಗಿಮಠ, ಎನ್‌.ಕೆ.ಪಾಟೀಲ, ಡಿ.ಎಫ್‌.ಬಿಂದಲಗಿ, ಜೀಶಾನಖಾನ್‌ ಫಠಾಣ, ಸಿ.ಎನ್‌.ಪಾಟೀಲ, ಬಿ.ಡಿ.ಬಜಂತ್ರಿ, ಎಸ್‌.ಬಿ.ದೊಡ್ಡಮನಿ, ಶಿವನಾಗಯ್ಯ ಮಠಪತಿ, ರವಿ ತಾಯಮ್ಮನವರ ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ವಿದ್ಯಾದರ ಕುತನಿ, ಸಿ.ವಿ.ಗುತ್ತಲ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next