Advertisement

ಗಾಯಕ್ವಾಡ್ ಪಡೆಗೆ ಸೋಲು: ವಿಜಯ್ ಹಜಾರೆ ಟ್ರೋಫಿ ಗೆದ್ದ ಸೌರಾಷ್ಟ್ರ

05:31 PM Dec 02, 2022 | Team Udayavani |

ಅಹಮದಾಬಾದ್: ಟ್ರೋಫಿ ಗೆಲ್ಲುವ ಫೇವರೇಟ್ ಮಹಾರಾಷ್ಟ್ರ ವಿರುದ್ಧ ಗೆದ್ದ ಜಯದೇವ್ ಉನಾದ್ಕತ್ ಅವರ ನಾಯಕತ್ವದ ಸೌರಾಷ್ಟ್ರ ತಂಡವು 2022ರ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿದೆ.

Advertisement

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮಹಾರಾಷ್ಟ್ರ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದರೆ, ಸೌರಾಷ್ಟ್ರ ತಂಡವು 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯ ಸಾಧಿಸಿತು.

ಮೊದಲು ಬ್ಯಾಟಂಗ್ ಮಾಡಿದ ಮಹಾರಾಷ್ಟ್ರ ತಂಡಕ್ಕೆ ಮತ್ತೆ ನಾಯಕ ಋತುರಾಜ್ ಗಾಯಕ್ವಾಡ್ ನೆರವಾದರು. ತನ್ನ ಶತಕಗಳ ಸರಣಿಯನ್ನು ಮುಂದುವರಿಸಿದ ಅವರು 108 ರನ್ ಗಳಿಸಿದರು. ಉಳಿದಂತೆ ಅಜಿಂ ಕಾಜಿ 37 ರನ್, ನೌಶಾದ್ ಶೇಖ್ 31 ರನ್ ಗಳಿಸಿದರು. ಸೌರಾಷ್ಟ್ರ ಪರ ಚಿರಾಗ್ ಸುನಿ ಮೂರು ವಿಕೆಟ್, ಉನಾದ್ಕತ್, ಪ್ರೇರಕ್ ಮತ್ತು ಪಾರ್ಥ್ ತಲಾ ಒಂದು ವಿಕೆಟ್ ಕಿತ್ತರು.

ಗುರಿ ಬೆನತ್ತಿದ್ದ ಸೌರಾಷ್ಟ್ರ ತಂಡಕ್ಕೆ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಆಡಿದರು. ಹಾರ್ವಿಕ್ ದೇಸಾಯಿ ಅರ್ಧ ಶತಕ ಗಳಿಸಿದರೆ, ಶೆಲ್ಡನ್ ಜ್ಯಾಕ್ಸನ್ ಅದ್ಭುತ ಶತಕ ಬಾರಿಸಿದರು. 136 ಎಸೆತ ಎದುರಿಸಿದ ಜ್ಯಾಕ್ಸನ್ ಅಜೇಯ 133 ರನ್ ಮಾಡಿದರು. ಚಿರಾಹ್ ಸುನಿ 30 ರನ್ ಮಾಡಿದರು.

46.3 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ತುಲುಪಿ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next