ಹೊಸದಿಲ್ಲಿ: ಹೊಸದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಹಿರಿಯ ವಕೀಲ ಸೌರಭ್ ಕಿರ್ಪಲ್ ಅವರನ್ನು ನೇಮಿಸುವ ಕುರಿತು ಸುಪ್ರೀಂಕೋರ್ಟ್ ಕೊಲಿ ಜಿಯಂ 2021ರ ನ.11ರಂದು ಮಾಡಿದ್ದ ಶಿಫಾರಸನ್ನೇ ಗುರುವಾರ ಪುನರುಚ್ಛರಿಸಿದೆ.
Advertisement
ಮುಕ್ತವಾಗಿ ತಾವೊಬ್ಬ ಸಲಿಂಗಕಾಮಿ ಎಂದು ಘೋಷಿಸಿಕೊಂಡಿರುವ ಸೌರಭ್‌ರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರಕಾರ ಭಾರತದಲ್ಲಿ ಇನ್ನೂ ಸಲಿಂಗವಿವಾಹ ಮಾನ್ಯತೆ ಪಡೆಯದ ಕಾರಣ ನೀಡಿ, ಶಿಫಾರಸನ್ನು ನಿರಾಕರಿಸಿತ್ತು. ಕೇಂದ್ರದ ನಿರ್ಣಯವನ್ನು ಸುಪ್ರೀಂ ಕೊಲಿಜಿಯಂ ನಿರಾಕರಿಸಿದ್ದು, ಸೌರಭ್ ಅವರ ಹೆಸರನ್ನು ಮರು ಶಿಫಾರಸು ಮಾಡಿದೆ.