Advertisement

ಸೌದಿ ಮಹಿಳೆಯರಿಗೆ ಮೊದಲ ಬಾರಿ ಫ‌ುಟ್‌ಬಾಲ್‌ ವೀಕ್ಷಣೆಯ ಅವಕಾಶ

06:40 AM Jan 14, 2018 | Team Udayavani |

ಜೆಡ್ಡಾ: ಲಿಂಗ ತಾರತಮ್ಯ ವಿಚಾರದಲ್ಲಿ ಅನೇಕ ದಶಕಗಳಿಂದಲೂ ಕಠಿನ ನಿಲುವು ತಾಳಿಕೊಂಡಿದ್ದ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ತನ್ನ ನಿಲುವು ಬದಲಿಸಿದೆ. ಇದರಿಂದ ಸೌದಿ ಅರೇಬಿಯಾದ ಮಹಿಳೆಯರು ಇದೇ ಮೊದಲ ಬಾರಿಗೆ ಫ‌ುಟ್‌ಬಾಲ್‌ ಕ್ರೀಡಾಂಗಣ ಪ್ರವೇಶಿಸಿದ್ದಾರೆ.

Advertisement

ಚಾಲನೆ, ಸಿನಿಮಾ, ಕ್ರೀಡೆಗೆ ಸಂಬಂಧಿಸಿ ಮಹಿಳೆಯದ ಮೇಲಿನ ನಿರ್ಬಂಧವನ್ನು ಹಿಂತೆಗೆದ ಹಿನ್ನಲೆಯಲ್ಲಿ ಜೆಡ್ಡಾ ಫ‌ುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೌದಿ ಮಹಿಳಾ ಕ್ರೀಡಾಭಿಮಾನಿಗಳು ಕಾಣಿಸಿಕೊಂಡರು. ಬುರ್ಖಾ, ಸನ್‌ಗಾÉಸ್‌ ಧರಿಸಿದ್ದ ಮಹಿಳೆಯರು ಕಿಂಗ್‌ ಅಬ್ದುಲ್ಲಾ ಸ್ಟೇಡಿಯಂನಲ್ಲಿ ಪುರುಷ ಫ‌ುಟ್‌ಬಾಲ್‌ ಆಟಗಾರರನ್ನು ಹುರಿದುಂಬಿಸಿದರು.

ಕಳೆದ ವರ್ಷದಿಂದ ಸೌದಿ ದೊರೆ ಮಹಮ್ಮದ್‌ ಬಿನ್‌ ಸಲ್ಮಾನ್‌ ಹಲವು ಸುಧಾರಣೆಗಳನ್ನು ಘೋಷಿಸಿದ್ದು, ಕ್ರೀಡೆಯಲ್ಲಿ ಮಹಿಳೆಯರನ್ನೂ ಪ್ರೋತ್ಸಾಹಿಸಲಾಗುತ್ತಿದೆ. ಹೀಗಾಗಿ ಫ‌ುಟ್‌ಬಾಲ್‌ನಲ್ಲಿ ಮಹಿಳೆಯರಿಗೂ ಅವಕಾಶ ನೀಡಲಾಗಿದೆ.  ಸೌದಿ ಪ್ರೀಮಿಯರ್‌ ಲೀಗ್‌ ಕ್ಲಬ್‌ನ ಅಲ್‌ ಅಹಿಲ್‌ ಮತ್ತು ಅಲ್‌ ಬಾಟಿನ್‌ ತಂಡಗಳ ನಡುವೆ ಫ‌ುಟ್ಬಾಲ್‌ ಹಣಾಹಣಿಯನ್ನು ವೀಕ್ಷಿಸಲು ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next