Advertisement

Emergency Landing: ಸೌದಿ ವಿಮಾನ ಕೋಲ್ಕತದಲ್ಲಿ ತುರ್ತು ಭೂಸ್ಪರ್ಶ

09:21 PM Apr 15, 2023 | Team Udayavani |

ಕೋಲ್ಕತ: ಸೌದಿ ಅರೇಬಿಯದ ಜೆಡ್ಡಾದಿಂದ ಹಾಂಕಾಂಗ್‌ಗೆ ಸಂಚರಿಸುತ್ತಿದ್ದ ಸೌದಿ ಅರೇಬಿಯ ಏರ್‌ಲೈನ್ಸ್‌ನ ಕಾರ್ಗೊ ವಿಮಾನವು ಪಶ್ಚಿಮ ಬಂಗಾಳದ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಶನಿವಾರ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಇದ್ದರು. ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್‌ ತುರ್ತು ಭೂಸ್ಪರ್ಶ ಮಾಡಿಸಿದರು.

Advertisement

ಈ ಹಿನ್ನೆಲೆಯಲ್ಲಿ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ 11.37ಕ್ಕೆ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಪರಿಸ್ಥಿತಿ ತಿಳಿಯಾದ ನಂತರ ನಂತರ ಇತರೆ ವಿಮಾನಗಳ ಹಾರಾಟ ಪ್ರಕ್ರಿಯೆ ಎಂದಿನಂತೆ ಮುಂದುವರಿಯಿತು. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಫೇಡ್‌ಎಕ್ಸ್‌ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ, ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next