Advertisement

ಸಹೋದರನ ಸವಾಲ್‌?

06:00 AM Sep 07, 2018 | Team Udayavani |

ರಿಯಾದ್‌: ಸೌದಿ ರಾಜ ಸಲ್ಮಾನ್‌ ಅವರ ಸಹೋದರ ಪ್ರಿನ್ಸ್‌ ಅಹ್ಮದ್‌ ಬಿನ್‌ ಅಬ್ದುಲಾಜಿಜ್‌ ಅಲ್‌-ಸೌದ್‌, ಅವರು ರಾಜ ಸಲ್ಮಾನ್‌ ಬಗ್ಗೆ ತಾವು ಹೊಂದಿರುವ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿರುವುದು ರಾಜಮನೆತನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳಿಗೆ ಪುಷ್ಟಿ ನೀಡಿದೆ.    ಸೌದಿ ಅರೇಬಿಯಾ ಸರಕಾರವು ಯೆಮೆನ್‌ ವಿರುದ್ಧ ಸಾರಿರುವ ರಾಜಕೀಯ ಸಮರದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಇತ್ತೀಚೆಗೆ ಕೆಲ ಸಂಘಟನೆಗಳಿಂದ ಸೌದಿ ಅರೇಬಿಯಾ ಸರಕಾರದ ವಿರುದ್ಧ ಪ್ರತಿಭಟನೆ ನಡೆದಿದ್ದು, ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಸೌದಿ ರಾಜಮನೆತನದ ವಿರುದ್ಧ ಘೋಷಣೆಗಳನ್ನು ಕೂಗಿರುವುದು ಪ್ರಿನ್ಸ್‌ ಅಹ್ಮದ್‌ ಅವರಿಗೆ ಅಸಮಾಧಾನ ತಂದಿದೆ. 

Advertisement

ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರಿಗೆ ಕರೆ ನೀಡಿರುವ ಅವರು, “”ಯೆಮೆನ್‌ನಲ್ಲಿ ಉಂಟಾಗಿರುವ ಅತಂತ್ರ ಪರಿಸ್ಥಿತಿಗೆ ಸೌದಿ ಮನೆತನವನ್ನೇಕೆ ಬಯ್ಯುತ್ತೀರಿ? ಈ ಎಲ್ಲಾ ಘಟನೆಗಳಿಗೆ ರಾಜ ಮನೆತನದವರೆಲ್ಲರೂ ಕಾರಣರಲ್ಲ. ಮನೆತನದ ಕೆಲವು ವ್ಯಕ್ತಿಗಳಷ್ಟೇ ಕಾರಣ. ಅದರಲ್ಲೂ ಸದ್ಯಕ್ಕೆ ಸೌದಿಯನ್ನು ಆಳುತ್ತಿರುವ ಸಲ್ಮಾನ್‌ ಅವರೇ ಇದಕ್ಕೆಲ್ಲಾ ಮೂಲ ಕಾರಣ” ಎಂದು ಬಹಿರಂಗವಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next