ಉಳ್ಳಾಲ: ಸೌದಿ ಅರೇಬಿಯಾದ ಪಾಸ್ಪೋರ್ಟ್ ಕೇಂದ್ರದಲ್ಲಿ ಸುಮಾರು ಒಂದು ವರ್ಷ ಅಧಿಕಾರಿಗಳ ವಶದಲ್ಲಿದ್ದ ಉಳ್ಳಾಲ ನಿವಾಸಿ ಇಮ್ರಾನ್ ಹಂಝ ಅವರು ತವರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.
ಸೌದಿಯ ಪಾಸ್ಪೋರ್ಟ್ ಅಧಿಕಾರಿಗಳು ಹಳೆಯ “ಪರಾರಿ’ ಸಿವಿಲ್ ಪ್ರಕರಣದಲ್ಲಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು.
ಇಮ್ರಾನ್ ಸುಮಾರು ಒಂದು ವರ್ಷದ ಹಿಂದೆ ದಮ್ಮಾಮ್ನಿಂದ ಬಹ್ರೈನ್ ಮೂಲಕ ವಾರ್ಷಿಕ ರಜೆಯ ನಿಮಿತ್ತ ಭಾರತಕ್ಕೆ ಪ್ರಯಾಣಿಸುತ್ತಿದ್ದರು. ಅಲ್ಲಿ ಅವರ ವಿರುದ್ಧ “ಹುರೂಬ್’ ಪ್ರಕರಣ ದಾಖಲಿಸಿದ್ದು ಕಂಡುಬಂದಿತ್ತು.
ಈ ಪ್ರಕರಣ ವಕೀಲ ಪಿ.ಎ. ಹಮೀದ್ ಪಡುಬಿದ್ರಿ ಗಮನಕ್ಕೆ ಬಂದಿದ್ದು, ಅವರು ಬುರೈದ್ ಪ್ರಾಂತ್ಯದ ಸಮಾಜ ಸೇವಕ ಅಬ್ದುಲ್ ಲತೀಫ್ ಪಾಣೆಮಂಗಳೂರು ಮತ್ತು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಅಜೀಜ್ ಕಲ್ಲಡ್ಕ ಅವರನ್ನು ಈ ಬಗ್ಗೆ ಸಕ್ರಿಯಗೊಳಿಸಿದ್ದರು.
Related Articles
ಎಲ್ಲರ ಪ್ರಯತ್ನಗಳ ಬಳಿಕ ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ಇಮ್ರಾನ್ ಅವರನ್ನು ಜವಾಝತ್ ಕೇಂದ್ರದಿಂದ ಬಿಡುಗಡೆ ಮಾಡಲಾಯಿತು.