Advertisement

ಸೌದಿ ಅರೇಬಿಯಾ ಪ್ರಧಾನಿಯಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇಮಕ

06:29 PM Sep 28, 2022 | Team Udayavani |

ರಿಯಾದ್‌: ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಬಿನ್‌ ಅಬ್ದುಲ್‌ ಅಜೀಜ್‌ ತಮ್ಮ ಪುತ್ರ- ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರನ್ನು ಪ್ರಧಾನಮಂತ್ರಿ ಎಂದು ನೇಮಕ ಮಾಡಿದ್ದಾರೆ.

Advertisement

ಇದರಿಂದಾಗಿ ದೇಶಕ್ಕೆ ಭೇಟಿ ನೀಡುವ ವಿದೇಶಿ ನಿಯೋಗಗಳು, ವಿದೇಶ ಪ್ರವಾಸದಲ್ಲಿ ದೇಶವನ್ನು ಪ್ರತಿನಿಧಿಸುವ ಅರ್ಹತೆಯನ್ನು ಮೊಹಮ್ಮದ್‌ ಗಳಿಸಿಕೊಂಡಿದ್ದಾರೆ. ದೊರೆಯ ಮತ್ತೊಬ್ಬ ಪುತ್ರ-ರಾಜಕುಮಾರ ಅಬ್ದುಲ್‌ ಅಜೀಜ್‌ ಬಿನ್‌ ಸಲ್ಮಾನ್‌ ಇಂಧನ ಸಚಿವರಾಗಲಿದ್ದಾರೆ.

ಸೌದಿ ಅರೇಬಿಯಾದಲ್ಲಿ ದೊರೆ ಸಲ್ಮಾನ್‌ ಅವರ ಅಧಿಕಾರ ಇದ್ದರೂ, ಅಲ್ಲಿನ ಪ್ರಮುಖ ನಿರ್ಧಾರಗಳನ್ನು ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರೇ ತೆಗೆದುಕೊಳ್ಳುತ್ತಿದ್ದಾರೆ. ಅವರೇ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next