Advertisement

2,000 ವರ್ಷಗಳ ಹಿಂದೆ ಬದುಕಿದ್ದ ನಬಾಟಿಯನ್ ಮಹಿಳೆಯ ಮುಖ ಅನಾವರಣಗೊಳಿಸಿದ ಸೌದಿ ಅರೇಬಿಯಾ

04:32 PM Feb 07, 2023 | Team Udayavani |

ರಿಯಾಧ್: ಸೌದಿ ಅರೇಬಿಯಾವು 2,000 ವರ್ಷಗಳ ಹಿಂದೆ ಬದುಕಿದ್ದ ನಬಾಟಿಯನ್ ಮಹಿಳೆಯ ಪುನರ್ನಿರ್ಮಾಣದ ಮುಖವನ್ನು ಅನಾವರಣಗೊಳಿಸಿದೆ ಎಂದು ದಿ ನ್ಯಾಷನಲ್‌ ನಲ್ಲಿ ವರದಿಯಾಗಿದೆ.

Advertisement

ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರ ಹಲವಾರು ವರ್ಷಗಳ ಕೆಲಸದ ನಂತರ ಮುಖವನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಗಿದೆ ಎಂದು ವರದಿ ತಿಳಿಸಿದೆ.

ನಬಾಟಿಯನ್ನರು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುತ್ತಿದ್ದ ಪ್ರಾಚೀನ ನಾಗರಿಕತೆಯ ಭಾಗವಾಗಿದ್ದರು. ವರದಿಯ ಪ್ರಕಾರ ಪ್ರಾಚೀನ ಜೋರ್ಡಾನ್ ನಗರ ಪೆಟ್ರಾ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಇದನ್ನೂ ಓದಿ:ಬೆಚ್ಚಿ ಬೀಳಿಸುವ ಘಟನೆ; ಡಿಕ್ಕಿ ಹೊಡೆದು ವ್ಯಕ್ತಿಯನ್ನು 10 ಕಿ.ಮೀ. ದೂರ ಎಳೆದೊಯ್ದ ಕಾರು

ಈ ಮುಖವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೆಗ್ರಾದಲ್ಲಿನ ಸಮಾಧಿಯಲ್ಲಿ ಪತ್ತೆಯಾದ ಹಿನಾತ್ ಅವರ ಅವಶೇಷಗಳನ್ನು ಆಧರಿಸಿ ಈ ಮುಖವನ್ನು ನಿರ್ಮಾಣ ಮಾಡಲಾಗಿದೆ. ಹಿನಾತ್ ಜೊತೆಗೆ 69 ಇತರರ ಅವಶೇಷಗಳು ಸಮಾಧಿಯಲ್ಲಿ ಕಂಡುಬಂದಿವೆ ಎಂದು ನ್ಯಾಷನಲ್ ಹೇಳಿದೆ.

Advertisement

ತಜ್ಞರ ತಂಡವು ಪ್ರಾಚೀನ ಡೇಟಾವನ್ನು ಬಳಸಿಕೊಂಡು ಆಕೆಯ ಚಿತ್ರವನ್ನು ರಚಿಸಲು ಸಮಾಧಿಯಲ್ಲಿ ಕಂಡುಬಂದ ಮೂಳೆ ತುಣುಕುಗಳನ್ನು ಪುನ ರ್ನಿರ್ಮಿಸಲಾಯಿತು. ನಂತರ ಮಹಿಳೆಯ ಮುಖವನ್ನು ಕೆತ್ತಲು 3D ಪ್ರಿಂಟರ್ ಅನ್ನು ಬಳಸಲಾಯಿತು ಎಂದು ಸಿಎನ್ಎನ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next