Advertisement

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಸೌದಿ ಅರೇಬಿಯಾ ಹೂಡಿಕೆ

01:36 PM Aug 27, 2022 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ 1 ಬಿಲಿಯನ್‌ ಡಾಲರ್‌ (7,980 ಸಾವಿರ ಕೋಟಿ ರೂ.) ಹೂಡಿಕೆ ಮಾಡುವುದಕ್ಕೆ ಸೌದಿ ಅರೇಬಿಯಾ ಸಿದ್ಧವಾಗಿದೆ.

Advertisement

ಸೌದಿ ಅರೇಬಿಯಾ ವಿದೇಶಾಂಗ ಸಚಿವ ಪ್ರಿನ್ಸ್‌ ಫೌಸಲ್‌ ಬಿನ್‌ ಫ‌ರ್ಹಾನ್‌ ಬಿನ್‌ ಅಬ್ದುಲ್ಲಾ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಾಲ್‌ ಭುಟ್ಟೋ ಜರ್ದಾರಿ ನಡುವಿನ ಫೋನ್‌ ಸಂಭಾಷಣೆಯಲ್ಲಿ ಈ ಬಗ್ಗೆ ಸಹಮತಕ್ಕೆ ಬರಲಾಗಿದೆ.

ಹೂಡಿಕೆ ಮಾಡುವ ಬಗ್ಗೆ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಭಾಜ್‌ ಷರೀಫ್ ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿನ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದರು. ಇದು ವರೆಗೆ ಚೀನಾ ಸರ್ಕಾರ ವಿವಿಧ ರೀತಿಯಲ್ಲಿ ವಿತ್ತೀಯ ನೆರವನ್ನು ನೀಡುತ್ತಾ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next