Advertisement

ಮದೀನಾದಲ್ಲಿ ಚಿನ್ನದ ಅದಿರು ಪತ್ತೆ! ಸೌದಿ ಅರೇಬಿಯಾಗೆ ಜಾಕ್‌ಪಾಟ್‌

10:42 AM Sep 24, 2022 | Shreeram Nayak |

ಕತಾರ್‌: ತೈಲ ಸಂಪತ್ತನ್ನು ಹೊಂದಿರುವ ಮರಳುಗಾಡು ದೇಶವಾದ ಸೌದಿ ಅರೇಬಿಯಾಗೆ ಮತ್ತೂಂದು ಜಾಕ್‌ಪಾಟ್‌ ಹೊಡೆದಿದೆ. ಇಲ್ಲಿನ ಪವಿತ್ರ ನಗರ ಮದೀನಾದಲ್ಲಿ ಭಾರೀ ಪ್ರಮಾಣದ ಚಿನ್ನ ಮತ್ತು ತಾಮ್ರದ ಅದಿರುಗಳಿರುವ ಪ್ರದೇಶಗಳು ಪತ್ತೆಯಾಗಿವೆ.

Advertisement

ಸೌದಿ ಪುರಾತತ್ವ ಇಲಾಖೆಯು ತನ್ನ ಟ್ವಿಟರ್‌ ಖಾತೆ ಮೂಲಕ ಈ ವಿಚಾರವನ್ನು ಜಗಜ್ಜಾಹೀರು ಮಾಡಿದೆ. ಮದೀನಾದ ಅಬಾ ಅಲ್‌-ರಹಾದ ಗಡಿಯೊಳಗೆ ಚಿನ್ನದ ಅದಿರುಗಳು ಪತ್ತೆಯಾಗಿದ್ದರೆ, ಅಲ್‌-ಮದೀಖ್‌ ಪ್ರದೇಶದ 4 ಕಡೆ ತಾಮ್ರದ ಅದಿರುಗಳು ಸಿಕ್ಕಿವೆ. ಈ ಆವಿಷ್ಕಾರವು ಹೆಚ್ಚಿನ ಪ್ರಮಾಣದ ಹೂಡಿಕೆಯ ಅವಕಾಶಗಳನ್ನು ಮುಕ್ತವಾಗಿಸಿದಂತಾಗಿದೆ ಎಂದೂ ಪುರಾತತ್ವ ಇಲಾಖೆ ಬರೆದುಕೊಂಡಿದೆ.

ನಿರೀಕ್ಷೆಗಳೇನು?
ಚಿನ್ನ-ತಾಮ್ರದ ಅದಿರುಗಳ ಆವಿಷ್ಕಾರದಿಂದಾಗಿ ಮದೀನಾಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಗಳು ಹರಿದುಬರಲಿದ್ದು, ರಾಷ್ಟ್ರೀಯ ಆರ್ಥಿಕತೆಗೂ ಶಕ್ತಿ ತುಂಬಲಿದೆ. ಅದಿರು ಇರುವ ಪ್ರದೇಶಗಳಲ್ಲಿ 533 ದಶಲಕ್ಷ ಡಾಲರ್‌ ಹೂಡಿಕೆ ಬರುವ ನಿರೀಕ್ಷೆಯಿದ್ದು, 4 ಸಾವಿರದಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ. ಸೌದಿ ಅರೇಬಿಯಾವು ಸುಮಾರು 5,300ರಷ್ಟು ಖನಿಜ ಪ್ರದೇಶಗಳ ತವರಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next