Advertisement

ಮಡಿವಂತಿಕೆಯಿಂದ ಹೊರಬಂದ ಸೌದಿ ಅರೇಬಿಯಾ, ಏನಿದು ನೂತನ ಟೂರಿಸ್ಟ್ ವೀಸಾ?

10:00 AM Oct 06, 2019 | Nagendra Trasi |

ರಿಯಾದ್: ಮಡಿವಂತ ಸೌದಿ ಅರೇಬಿಯಾ ದೇಶ ಇದೇ ಮೊದಲ ಬಾರಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ನೂತನ ಟೂರಿಸ್ಟ್ (ಪ್ರವಾಸಿ) ವೀಸಾವನ್ನು ನೀಡಲು ಮುಂದಾಗಿದ್ದ ಬೆನ್ನಲ್ಲೇ ವಿದೇಶಿ ಪುರುಷ ಮತ್ತು ಮಹಿಳೆಗೆ ಹೋಟೆಲ್ ರೂಂನಲ್ಲಿ ಉಳಿಯಲು ಅವಕಾಶ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಯಾವುದೇ ಸಂಬಂಧವನ್ನು ದೃಢೀಕರಿಸುವ ದಾಖಲೆ ಇಲ್ಲದೆಯೇ ಹೋಟೆಲ್ ರೂಂನಲ್ಲಿ ವಾಸ್ತವ್ಯ ಹೂಡಲು ಅವಕಾಶ ಕೊಟ್ಟಿರುವುದಾಗಿ ವರದಿ ವಿವರಿಸಿದೆ. ಸೌದಿ ಪ್ರಜೆ ಸೇರಿದಂತೆ ಮಹಿಳೆಯರು ಕೂಡಾ ಹೋಟೆಲ್(ಬಾಡಿಗೆ) ನಲ್ಲಿ ವಾಸಿಸಲು ಅವಕಾಶ ನೀಡಿದೆ. ಮಡಿವಂತ ಹಾಗೂ ಕಠಿಣ ಕಾಯ್ದೆ ಹೊಂದಿರುವ ಸೌದಿ ಅರೇಬಿಯಾ ಇತ್ತೀಚೆಗೆ ಹಿಂದಿನ ಕಾನೂನನ್ನು ರದ್ದುಗೊಳಿಸುತ್ತಿದೆ.

ಸೌದಿ ಅರೇಬಿಯಾದಲ್ಲಿ ಸಂಬಂಧ ಇಲ್ಲದ ಗಂಡು, ಹೆಣ್ಣು, ವಿದೇಶಿಯರು ಜತೆಗಿರುವುದು, ಹೋಟೆಲ್ ನಲ್ಲಿ ವಾಸಿಸುವುದು ಪತ್ತೆಯಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತಿತ್ತು. ಇದೀಗ ಹೊಸ ಟೂರಿಸ್ಟ್ ವೀಸಾ ನೀತಿಯಿಂದಾಗಿ ಅವಿವಾಹಿತ ವಿದೇಶಿ ಪ್ರವಾಸಿಗರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ಒಟ್ಟಿಗೆ ವಾಸಿಸಬಹುದಾಗಿದೆ ಎಂದು ವರದಿ ವಿವರಿಸಿದೆ.

“ಸೌದಿ ಹೋಟೆಲ್ ನಲ್ಲಿ ರೂಂ ಪಡೆಯಲು ಯಾವುದಾದರು ಗುರುತು ಪತ್ರ ಅಥವಾ ನಮ್ಮ ಸಂಬಂಧ ಸಾಬೀತುಪಡಿಸುವ ದಾಖಲೆ ತೋರಿಸಬೇಕೇ ಎಂಬ ಸೌದಿ ಪ್ರಜೆಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸೌದಿಯ ಟೂರಿಸಂ ಮತ್ತು ನ್ಯಾಶನಲ್ ಹೆರಿಟೇಜ್, ವಿದೇಶಿ ಪ್ರಜೆಗಳಿಗೆ ಯಾವುದೇ ದಾಖಲೆಯ ಅವಶ್ಯಕತೆ ಇಲ್ಲ. ಮಹಿಳೆಯರು ಸೇರಿದಂತೆ ಸೌದಿ ಜನರು ಕೂಡಾ ಹೋಟೆಲ್ ರೂಂ ಬುಕ್ ಮಾಡಬಹುದಾಗಿದೆ. ಹೋಟೆಲ್ ಕೋಣೆ ಪಡೆಯುವಾಗ ದಾಖಲೆ ನೀಡಿದರೆ ಸಾಕು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next