Advertisement

ಬೇಹುಗಾರಿಕೆ ಆರೋಪ; ಸೌದಿ ಮಹಿಳಾ ಹೋರಾಟಗಾರ್ತಿಗೆ ಜೈಲುಶಿಕ್ಷೆ ವಿಧಿಸಿದ ಕೋರ್ಟ್

01:35 PM Dec 29, 2020 | Nagendra Trasi |

ರಿಯಾದ್‌: ಸೌದಿ ಅರೇಬಿಯಾದ ಪ್ರಮುಖ ಮಹಿಳಾ ಹೋರಾಟಗಾರ್ತಿ ಲೌಜಿಯಾನ್‌ ಅಲ್‌ಹತ್‌ಲೋಲು (31) ಅವರನ್ನು ಐದು ವರ್ಷ ಎಂಟು ತಿಂಗಳು ಕಾಲ ಜೈಲಿಗೆ ಕಳುಹಿಸುವ ತೀರ್ಪನ್ನು ಸೌದಿ ಅರೇಬಿಯಾದ ಕೋರ್ಟ್‌ ನೀಡಿದೆ.

Advertisement

ಪ್ರಕರಣದ ಕುರಿತ ತೀರ್ಪು ಮತ್ತು ಶಿಕ್ಷೆಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮಾನವ ಹಕ್ಕುಗಳ ದಾಖಲೆಗಳ ಬಗ್ಗೆ ಟೀಕಿಸಿದ್ದ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಜತೆಗಿನ ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸಂಬಂಧದ ಬಗ್ಗೆಯೂ ಪ್ರಶ್ನಿಸುವುದಾಗಿ ಲೌಜಿಯಾನ್ ಕುಟುಂಬದ ಮೂಲಗಳು ತಿಳಿಸಿವೆ.

ಕೋರ್ಟ್ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದಾಗ ತಾನು ನಿರಪರಾಧಿ ಎಂದು ಅಳಲು ತೋಡಿಕೊಂಡು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆಂದು ಮಾಧ್ಯಮದ ವರದಿ ವಿವರಿಸಿದೆ.

ನನ್ನ ಅಕ್ಕ ಭಯೋತ್ಪಾದಕಿ ಅಲ್ಲ. ಆಕೆ ಹೋರಾಟಗಾರ್ತಿ. ಎಂಬಿಎಸ್ ಬದಲಾವಣೆ ಮತ್ತು ಕಾನೂನು ಬದಲಾವಣೆಗಾಗಿ ಹೋರಾಡಿದ್ದಕ್ಕೆ ಕೊನೆಗೂ ಸೌದಿ ಸರ್ಕಾರ ಶಿಕ್ಷೆ ವಿಧಿಸುವ ಮೂಲಕ ಬೂಟಾಟಿಕೆ ಪ್ರದರ್ಶಿಸಿದೆ ಎಂದು ಸಹೋದರಿ ಲೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ:ಧರ್ಮೇಗೌಡರ ಆತ್ಮಹತ್ಯೆ ಇಂದಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ: HDK

Advertisement

ರಾಜ ಕುಟುಂಬದ ವಿರುದ್ಧ ವಿದೇಶಿ ಶಕ್ತಿಗಳ ಜತೆ ಸೇರಿ ಬೇಹುಗಾರಿಕೆ ನಡೆಸಿದ ಆರೋಪ ಅವರ ಮೇಲೆ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮೂರು ವರ್ಷಗಳ ಹಿಂದೆ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಹತ್‌ ಲೋಲುಗೆ ಶಿಕ್ಷೆ ವಿಧಿಸಬಾರದು ಎಂದು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಒತ್ತಾಯಿಸಿದ್ದವು.

ಜತೆಗೆ ಅಮೆರಿಕ ಸರ್ಕಾರ ಕೂಡ ಸೌದಿ ಸರ್ಕಾರಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿತ್ತು. 2018ರಲ್ಲಿ ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದವರಲ್ಲಿ ಲೌಜಿಯಾನ್‌ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next