ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಹೊಸ ವಿಡಿಯೋ ಬುಧವಾರ ಹೊರಬಿದ್ದಿದೆ. ಇದರಲ್ಲಿ ಅವರು ಹಸಿ ತರಕಾರಿ ಮತ್ತು ತಾಜಾ ಹಣ್ಣುಗಳು ಸೇವಿಸುತ್ತಿರುವುದು ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಮೀನಾಕ್ಷಿಲೇಖಿ, “ರೆಸಾರ್ಟ್‌ನಂತೆ ಆಪ್ ನಾಯಕ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ರಜೆಯ ಮೋಜು ಅನುಭವಿಸುತ್ತಿದ್ದಾರೆ,’ ಎಂದು ಟೀಕಿಸಿದ್ದಾರೆ. ತನ್ನ ಧಾರ್ಮಿಕ ನಂಬಿಕೆಗಳಿಗೆ ತಕ್ಕಂತೆ ತಮಗೆ ಜೈಲಿನಲ್ಲಿ ಬೇಯಿಸದ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿ ದೆಹಲಿ ಸಿಟಿ ಕೋರ್ಟ್‌ಗೆ ಸತ್ಯೇಂದ್ರ ಜೈನ್ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ವಿಡಿಯೋ ಹೊರಬಿದ್ದಿದೆ.
ಈ ವಿಡಿಯೋಗಳು ಸೆ.13 ಮತ್ತು ಅ.1ರದ್ದು ಎನ್ನಲಾಗಿದೆ. ಇದೇ ವೇಳೆ, ನಾನಿರುವ ಜೈಲು ಕೊಠಡಿಯ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ತರುವಂತೆ ಕೋರಿ ಬುಧವಾರ ಜೈನ್ ಕೋರ್ಟ್ ಮೊರೆ ಹೋಗಿದ್ದಾರೆ.