Advertisement

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಶೆಟ್ಟಿ

01:09 AM Apr 30, 2023 | Team Udayavani |

ದುಬಾೖ: ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆ ಹಾಕುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಕೂಟದ ಪ್ರಶಸ್ತಿ ಸುತ್ತು ಪ್ರವೇಶಿಸಿದ ಭಾರತದ ಮೊದಲ ಜೋಡಿ ಎಂಬುದು ಇವರ ಹೆಗ್ಗಳಿಕೆ.

Advertisement

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಚೈನೀಸ್‌ ತೈಪೆಯ ಲೀ ಯಾಂಗ್‌-ವಾಂಗ್‌ ಚಿ ಲಿನ್‌ ಎರಡನೇ ಗೇಮ್‌ ವೇಳೆ ನಿವೃತ್ತರಾದ ಕಾರಣ ಭಾರತದ ಜೋಡಿಗೆ ಮುನ್ನ ಡೆಯ ಅವಕಾಶ ಒದಗಿ ಬಂತು. ಮೊದಲ ಗೇಮ್‌ ಜಯಿಸಿದ್ದ ಸಾತ್ವಿಕ್‌-ಚಿರಾಗ್‌ ದ್ವಿತೀಯ ಗೇಮ್‌ ವೇಳೆ 13-14ರ ಹಿನ್ನಡೆಯಲ್ಲಿದ್ದರು. ರವಿವಾರದ ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಮಲೇಷ್ಯಾದ ಓಂಗ್‌ ವ್ಯೂ ಸಿನ್‌-ಟೆ ಇ ಯಿ ವಿರುದ್ಧ ಸೆಣಸಲಿ ದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಮಲೇಷ್ಯನ್‌ ಜೋಡಿ ಜಪಾನ್‌ನ ಟಕುರೊ ಹೊಕಿ-ಯುಗೊ ಕೊಬಯಾಶಿ ವಿರುದ್ಧ 21-6, 26-24 ಜಯ ಸಾಧಿಸಿತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next