Advertisement

ಸುತ್ತೂರು ಮಠ ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿಗೆ ಪ್ರಸಿದ್ಧ: ರಾಜ್ಯಪಾಲ ಗೆಹ್ಲೋಟ್

03:27 PM Aug 18, 2022 | Team Udayavani |

ಮೈಸೂರು: ಸದಾಚಾರ ಮತ್ತು ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಶ್ರೀ ಸುತ್ತೂರು ಮಠವು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದ್ದು, ಮಠವು ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ ಎಂದು  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

Advertisement

ಗುರುವಾರ ಮೈಸೂರಿನಲ್ಲಿ ಶ್ರೀ ಸುತ್ತೂರು ಮಠದ  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ  107ನೇ ಜಯಂತ್ಯೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಧುಗಳು, ಸಂತರು ಮತ್ತು ಗುರುಗಳ ಜನ್ಮ ದಿನಾಚರಣೆಯನ್ನು ಆಚರಿಸುವುದು ಈ ಮಹಾನ್ ರಾಷ್ಟ್ರದ ಸಂಸ್ಕೃತಿ ಮತ್ತು ನೀತಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಧರ್ಮದ ಏಕತೆ ಮತ್ತು ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಧುಗಳು ಮತ್ತು ಸಂತರು ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು

ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರು ಚಿಂತನಶೀಲ ಮತ್ತು ಸಂವೇದನಾಶೀಲರು ಮತ್ತು ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪೋಷಕರಾಗಿದ್ದರು. ಸಮಾಜದಲ್ಲಿನ ಅಸಮಾನತೆ, ಬಡತನ ಮತ್ತು ಅನಕ್ಷರತೆಯ ಸಮಸ್ಯೆಗಳನ್ನು ಹೋಗಲಾಡಿಸಲು, ಅನೇಕ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದರು. ಜೆ ಎಸ್ ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಅವರು ಅಕ್ಷರ ದಾಸೋಹಕ್ಕಾಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಪ್ರಾರಂಭಿಸಿದರು. ಅನ್ನ ದಾಸೋಹಕ್ಕಾಗಿ ವಸತಿ, ಆರೋಗ್ಯ ದಾಸೋಹಕ್ಕಾಗಿ ಆಸ್ಪತ್ರೆಗಳನ್ನು ಪ್ರಾರಂಭಿಸಿದರು ಎಂದರು.

ಇದನ್ನೂ ಓದಿ: ರೇಪ್ ಕೇಸ್; ಬಿಜೆಪಿ ನಾಯಕ ಶಹನವಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ

Advertisement

ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ , ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಸಚಿವ ಎಸ್ ಟಿ ಸೋಮಶೇಖರ್, ಮೇಯರ್  ಸುನಂದಾ ಫಾಲನೇತ್ರ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next