ಮಣಿಪಾಲ: ಅಪಾರ ಜನಪ್ರಿಯತೆ ಗಳಿಸಿದ ಮೂರು ಮುತ್ತು ನಾಟಕದ “ಕರಾವಳಿ ಮುತ್ತು” ಖ್ಯಾತಿಯ ಸತೀಶ್ ಪೈ ಕುಂದಾಪುರ ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಬಾ ಮನೆ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಏಪ್ರಿಲ್ 5ರ ಸಂಜೆ 5.30ಕ್ಕೆ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಇಡ್ಲಿ ಅಮ್ಮ’ನಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಆನಂದ್ ಮಹೀಂದ್ರ
ಫೇಸ್ ಬುಕ್ ಲೈವ್ ಚಾಟ್ ನಲ್ಲಿ ನಾಟಕ ಪ್ರಿಯರು, ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನೂ ಕೇಳಬಹುದಾಗಿದೆ. ಕುಂದಾಪುರ ರೂಪಕಲಾ ನಾಟಕ ತಂಡದ ಸುಪ್ರಸಿದ್ಧ ನಾಟಕಗಳಲ್ಲಿ ಮೂರು ಮುತ್ತು ಸಾವಿರಾರು ಪ್ರದರ್ಶನ ಕಂಡಿದ್ದು, ಈ ಮೂರು ಮುತ್ತುಗಳಲ್ಲಿ ಸತೀಶ್ ಪೈ ಕೂಡಾ ಒಬ್ಬರು.
ತಂದೆ ಬಾಲಕೃಷ್ಣ(ಕುಳ್ಳಪ್ಪು) ಪೈ ಅವರ ಜತೆ ಬಾಲನಟನಾಗಿ, ಸಹ ನಿರ್ದೇಶಕನಾಗಿ ಸತೀಶ್ ಪೈ ಪ್ರೇಕ್ಷಕರ ಮೆಚ್ಚುಗೆ ಪಡೆದು ಜನಪ್ರಿಯರಾಗಿದ್ದಾರೆ. ಈವರೆಗೆ ಹಲವಾರು ಕನ್ನಡ ಹಾಗೂ ಕೊಂಕಣಿ ನಾಟಕಗಳನ್ನು ಬರೆದು ನಿರ್ದೇಶಿಸಿ, ನಟಿಸಿದ್ದಾರೆ.
ಪಾಪ ಪಾಂಡು, ಗೋಲ್ ಮಾಲ್, ಅವನಲ್ಲ ಇವನು, ರಾಮಕೃಷ್ಣ ಗೋವಿಂದ, ರಂಗ ಮಂಟಪ, ಮಾಸ್ಟರ್ ಪ್ಲಾನ್, ಪಾಪ ಪಾಂಡು ಸೇರಿದಂತೆ ಹಲವು ನಾಟಕಗಳನ್ನು ಸತೀಶ್ ಪೈ ನಿರ್ದೇಶಿಸಿದ್ದಾರೆ.
ಸತೀಶ್ ಪೈ ಅವರ ರಂಗಭೂಮಿ ಸೇವೆಯನ್ನು ಪರಿಗಣಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿ ಕನ್ನಡ ಸಂಘ ಕರಾವಳಿ ಮುತ್ತು ಬಿರುದು ನೀಡಿ ಗೌರವಿಸಿದೆ.