Advertisement

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

07:59 PM Jan 27, 2022 | Team Udayavani |

ಗೋಕಾಕ: ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ಗೆ ಬರುವುದಿಲ್ಲ, ನಾವು ಕರೆಯೋದೂ ಇಲ್ಲ. ಸುಮ್ಮನೇ ಚರ್ಚೆ ಅನವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಲಖನ್‌ ಬಿಜೆಪಿಯಲ್ಲಿದ್ದಾರೆ. ಸುಮ್ಮನೇ ಈ ವಿಚಾರ ಹೇಳಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ನನ್ನ ಗುರುಗಳು ಎನ್ನುವುದು ಲಖನ್‌ ವೈಯಕ್ತಿಕ ಹೇಳಿಕೆ. ಇಲ್ಲಿ ಗುಡುಗು-ಸಿಡಿಲು ಮಾಡುತ್ತಾರೆ, ಆದ್ರೆ ಮಳೆ ಮಾತ್ರ ಆಗಲ್ಲ ಎನ್ನುವಂತೆ ಈ ರೀತಿ ಹೇಳಿಕೆ ನೀಡುತ್ತಾರೆ. ಎರಡೂ ಕಡೆ ರಾಜಕೀಯ ಲಾಭ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಾರೆ. ರಮೇಶ್ ಜಾರಕಿಹೊಳಿ ಸಚಿವರಾಗಿ, ಶಾಸಕರಾಗಿದ್ದರೂ ಗೋಕಾಕನಲ್ಲಿ ಒಂದು ಡಿಗ್ರಿ ಕಾಲೇಜು ಇಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next