Advertisement
ಅಂಬಲಪಾಡಿಯಲ್ಲಿ ನಡೆದ ಅಂಬಲಪಾಡಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಸ್ಥಾನೀಯ ಸಮಿತಿಗಳ ಜಂಟಿ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 1ರಂದು ಚುನಾವಣಾ ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಲಿದ್ದು ಇದು ನನ್ನ ಪಾಲಿನ ಸುಯೋಗ. ಈ ಹಿಂದೆ ನಾನು ಸ್ಪರ್ಧಿಸಿದ್ದ ಎರಡು ಚುನಾವಣೆಯ ಸಂದರ್ಭದಲ್ಲಿಯೂ ಮೋದಿ ಅವರು ಉಡುಪಿಗೆ ಆಗಮಿಸಿದ್ದು ಈ ಬಾರಿಯೂ ಅವರ ಆಗಮನ ಜಯದ ಸಂಕೇತವಾಗಿದೆ. ಎಂದರು. ಗೆಲುವಿಗೆ ವರದಾನ
ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಅಂದಿನ ಬಿಜೆಪಿ ರಾಜ್ಯ ಸರಕಾರದ ಸಾಧನೆಗಳು, ಕೇಂದ್ರ ಸರಕಾರದ ನೂತನ ಅಭಿವೃದ್ಧಿ ಯೋಜನೆಗಳು, ಪ್ರಸಕ್ತ ರಾಜ್ಯ ಸರಕಾರದ ಆಡಳಿತ ವೈಫಲ್ಯಗಳು ಬಿಜೆಪಿ ಗೆಲುವಿಗೆ ವರದಾನವಾಗಲಿದೆ. ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತ ಮಿತ್ರರು ಈ ವಿಚಾರಗಳನ್ನು ಮನೆ-ಮನೆಗೆ ತಲುಪಿಸಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಅಂತರದಿಂದ ಗೆಲುವನ್ನು ಸಾಧಿಸಲು ಶ್ರಮ ವಹಿಸಬೇಕು ಎಂದು ಅವರು ಕರೆ ನೀಡಿದರು.
ಅಂಬಲಪಾಡಿ ನಗರಾಧ್ಯಕ್ಷ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಸಾಲ್ಯಾನ್, ಉಪಾಧ್ಯಕ್ಷೆ ಉಷಾ ಕಿದಿಯೂರು, ಬಿಜೆಪಿ ಅಂಬಲಪಾಡಿ ಗ್ರಾಮಾಂತರ ಅಧ್ಯಕ್ಷ ರಾಮರಾಜ್ ಕಿದಿಯೂರು, ಪ್ರ.ಕಾರ್ಯದರ್ಶಿ ಗಿರೀಶ್ ಅಮೀನ್ ಕಿದಿಯೂರು, ಅಂಬಲಪಾಡಿ ನಗರ ಪ್ರ.ಕಾರ್ಯದರ್ಶಿ ರಮೇಶ್ ಉಪಾಧ್ಯಾಯ, ನಗರ ಯುವಮೋರ್ಚಾ ಅಧ್ಯಕ್ಷ ಮಿಥುನ್, ಉಡುಪಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ನವೀನ್ ಸುವರ್ಣ, ನಗರ ಮೀನುಗಾರ ಪ್ರಕೋಷ್ಠ ಸಹ ಸಂಚಾಲಕ ಭುವನೇಂದ್ರ, ಅಂಬಲಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಯೋಗೀಶ್ ಶೆಟ್ಟಿ, ಶಕುಂತಳಾ ಶೆಟ್ಟಿ, ಭಾರತಿ ಭಾಸ್ಕರ್, ಮಾಜಿ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ಗ್ರಾ.ಪಂ. ಸದಸ್ಯರು, ಸ್ಥಾನೀಯ ಸಮಿತಿ, ವಾರ್ಡ್, ಬೂತ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.