Advertisement

ಕುಮಾರಣ್ಣೋರು ಇನ್ನೊಂದಪಾ ಸಿಎಂ ಆದ್ರೆ ವಿಜಯೇಂದ್ರಣ್ಣೋರು ಡಿಸಿಎಂ ಆಯ್ತಾರಂತೆ ಹೌದಾ ಹುಲಿಯಾ..

11:16 AM Dec 05, 2021 | Team Udayavani |

ಅಮಾಸೆ: ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ, ನಿನ್‌ ಹೆಂಡ್ರು ಚಂದ್ರೀನ್‌ ಕರ್ಕೊಂಡ್‌ ಎತ್‌ಲಾಗ್ಲಾ ಸವಾರಿ

ಅಮಾಸೆ: ಎಲ್‌ಗೋಗುಮಾ ಸಾ, ಅದೇನೋ ಕೊರೊನಾ ರಿಲೇಟೀವ್‌ ಒಮ್ರಿಕೊಂಡೈತಂತೆ ಡೋಸ್‌ ತಗೋಳೂಮಾ ಅಂತಾ ಒಂಟಿದ್ವಿ

ಚೇರ್ಮನ್ರು: ಮೊದ್ಲು ತಕ್ಕಂಡಿಲ್‌ ವೇನ್ಲಾ

ಚಂದ್ರಿ: ಎಲ್‌ ತಕ್ಕಂಡ್ರು ಚೇರ್ಮನ್ರೆ. ನಾನ್‌ ದಿನಾ ತಕ್ಕಳ್ಳೋ ನೈಂಟಿ ಡೋಸ್‌ ಮುಂದ್ಗಡೆ ಯಾವ್ದೂ ಬೇಕಿಲ್ಲಾಂತ ಪುಂಗ್ಧಾ. ಇವಾಗ್‌ ಜೀವುದ್‌ ಮ್ಯಾಗೆ ಪಿರೂತಿ ಬಂದ್‌ಬುಟ್ಟು ಡೋಸ್‌ ತಕ್ಕಾಳಮಾ ಬಾರಮ್ಮಿ ಅಂತಾ ಕರಕಂಡ್‌ ಹೋಯ್ತಾವ್ರೆ

Advertisement

ಚೇರ್ಮನ್ರು: ಹೌದೇನ್ಲಾ

ಅಮಾಸೆ: ಅಂಗಲ್ಲಾ ಬುಡಿ. ಕೊರೊನಾ ಡೋಸ್‌ ತಕ್ಕಂಡ್ರೆ ನೈಂಟಿ ಸಿಕ್‌ಸ್ಟಿ ಅಂತೇಳಿ ಗಡಂಗ್‌ ಕಡ್ಗೆ ಹೋಗ್‌ಬಾರ್ಧು ಅಂತಾ ನಮ್‌ ಊರ್‌ ನರ್ಸಮ್ಮ ಹೇಳಿದ್ರು ಅದ್ಕೆ ಕೊರೊನಾ ಡೋಸ್‌ ಸಾವಾಸಾ ಬ್ಯಾಡಾ ಅಂತಾ ಸುಮ್ಕಿದ್ದೆ.

ಚೇರ್ಮನ್ರು: ಇವಾಗ್‌ ಯಾಕ್ಲಾ ಹೋಯ್ತಿದಿಯಾ

ಅಮಾಸೆ: ಬೆಂಗ್ಳೂರ್‌ ನಾಗೆ ದೊಡ್‌ ಡಾಕ್ಟುರು ತಾವಾ ಸೀಕ್ರೆಟ್‌ ನಾಗೆ ಇಚಾರ್ದೆ. ಅಂಗೇನಿಲ್ಲಾ ಡೋಸ್‌ ತಕ್ಕಂಡಿದ್‌ ದಿನಾ ಬುಟ್ರೆ ಸಾಕಂದ್ರು. ಅದೂ ಇಲ್ದೇ ಇವಾಗ್‌ ಇನ್ನೊಂದ್‌ ವೈರಸ್‌ ಶಾನೆ ಡೇಂಜರ್‌ ಅಂತೆ. ಎಲ್‌ಗೋದ್ರು ಎಲ್ಡೂ ಡೋಸ್‌ ತಕ್ಕಂಡಿದ್ರೇನೆ ಎಂಟ್ರಿ ಅಂತೆ. ಅದ್ಕೆ ಇಬ್ರೂ ಹಾಕ್ಸ್‌ಕೊಳ್ಳೂಮಾ ಅಂತಾ ಒಂಟಿದ್ವಿ

ಚೇರ್ಮನ್ರು: ಆಯ್ತು ಬುಡು. ಇನ್ನೇನ್ಲಾ ಇಸ್ಯಾ, ಎಂಎಲ್ಸಿ ಎಲೆಕ್ಸನ್‌ ಕ್ಯಾನ್‌ವಾಸ್‌ ಬೋ ಜೋರಾಗೈತಂತೆ ಹೌದೇನ್ಲಾ

ಅಮಾಸೆ: ಹೌದೇಳಿ, ಪಂಚಾಯ್ತಿ ಮೆಂಬ್ರುಗ್ಳು ಫ‌ುಲ್‌ ಡಿಮ್ಯಾಂಡ್‌ನಾಗವ್ರೆ. ಒನ್‌ ಲ್ಯಾಕ್‌ ಓನ್ಲಿ ಅಂತಾ ಹೇಳ್ತಾವ್ರಂತೆ.

ಚೇರ್ಮನ್ರು: ದೊಡ್‌ಗೌಡ್ರು ಯಾಕ್ಲಾ ಮೋದಿ ಸಾಹೇಬ್ರುನಾ ಮೀಟ್‌ ಮಾಡಿದ್ರು

ಅಮಾಸೆ: ಕೈ ಪಾಲ್ಟಿಯೋರು ತೆನೆ ಹೈಕ್ಳ್ನಾ ಆಪ್ಲೇಸನ್‌ ಮಾಡ್ತಿರೋ ರೇಂಜ್‌ ನೋಡುದ್ರೆ ಎಲೆಕ್ಸನ್‌ ಟೈಂಗೆ ಫ‌ುಲ್‌ ತೆನೆ ಹೌಸ್‌ ಖಾಲಿಯಾಗೋತರಾ ಐತಂತೆ.

ಚೇರ್ಮನ್ರು: ಅಂಗೇನ್ಲಾ

ಅಮಾಸೆ: ಹೌದೇಳಿ, ಅದ್ಕೆ ಕುಮಾರಣ್ಣೋರು ಫ‌ುಲ್‌ ಟೆನ್ಸನ್‌ ತಕ್ಕಂಡು ಏನಾದ್ರೂ ಮಾಡ್ಬೇಕು ಅಂತಾ ಹೇಳಿದ್ರಂತೆ. ಅದ್ಕೆ ದೊಡ್‌ಗೌಡ್ರು ಡೋಂಟ್‌ ವರಿ ನಾನ್‌ ಒಂದ್‌ ದಪಾ ಮೋದಿ ಅವ್ರ್ ನಾ ಮೀಟ್‌ ಮಾಡ್ಕಂಡು ಶೇಕ್‌ ಹ್ಯಾಂಡ್‌ ಕೊಟ್‌ ಬತ್ತೀನಿ ಎಲ್ಲಾ ಸರೋಯ್ತದೆ ಅಂತಾ ಹೇಳಿದ್ರಂತೆ. ಡೆಲ್ಲಿನಾಗೆ ಗೌಡ್ರು ಮೋದಿ ಮೀಟ್‌ ಮಾಡ್ದೇಟ್ಗೆ ಎಲ್ರೂ ಸುಸ್ತಾಗೋಗವ್ರೆ.

ಚೇರ್ಮನ್ರು: ಅದ್ಯಾಕ್ಲಾ

ಅಮಾಸೆ: ಎಂಎಲ್ಸಿ ಎಲೆಕ್ಸನ್‌ ಇಸ್ಯಾನೂ ಮಾತಾಡೀವ್ನಿ ಅಂತೇಳಿ ಕೈ ಪಾಲ್ಟಿನೋರ್ಗೆ ಮಾಂಜಾ ಕೊಟ್ಟವ್ರೆ

ಚೇರ್ಮನ್ರು: ಸಿದ್ರಾಮಣ್ಣೋರು ಫ‌ುಲ್‌ ಜೋಶ್‌ನಾಗೆ ಅವ್ರೆ

ಅಮಾಸೆ: ನೆಕ್ಸ್ಟ್ ಕಪ್‌ ನಮ್ದೇ ಅಂತಾ ಡ್ರೀಂನಾಗವ್ರೆ. ಆದ್ರೆ, ಅತ್ಲಾಗೆ ತೆನೆ-ಕಮ್ಲ ಫ್ರೆಂಡ್‌ಸಿಪ್‌ ಮಾಡ್ಕಳ್ಳೋ ಪಿಲಾನ್‌ ಐತೆ. ಸಿವ್‌ಕುಮಾರಣ್ಣೋರು ಟೆನ್ಸನ್‌ ಆಗವ್ರೆ

ಚೇರ್ಮನ್ರು: ಅದ್ಯಾಕ್ಲಾ

ಅಮಾಸೆ: ನೆಕ್ಸ್ಟ್ ಎಲೆಕ್ಸನ್‌ನಾಗೆ ಕೈ ಪಾಲ್ಟಿಗೆ ಸಿಂಗಲ್‌ ಮೆಜಾರಿಟಿ ಬರ್ಲಿಲ್ಲಾ ಅಂದ್ರೆ ಗೌಡ್ರು ತಾವಾ ಸಪೋರ್ಟ್‌ ತಕ್ಕಂಡು ಸಿಎಮ್‌ ಆಗ್ಬೋದು ಅಂತಿದ್ರು. ಆದ್ರೆ, ಎಲ್ರೂ ಉಲ್ಟಾ ಪಲ್ಟಾ ಆಗೋ ಸೀನ್‌ ಸುರು ಆಗೈತೆ

ಚೇರ್ಮನ್ರು: ರೇವಣ್ಣೋರು ಎಲ್ಲವ್ರೆ

ಅಮಾಸೆ: ಅವ್ರು ಸೆಕೆಂಡ್‌ ಸನ್‌ ಸೂರಜ್‌ ಅಣ್ಣೋರ್‍ನಾ ಎಂಎಲ್‌ಸಿ ಮಾಡೋಗಂಟಾ ನಾನ್‌ ಹೊಳೇನರ್ಸೀಪುರ ಬಿಡಾಂಗಿಲ್ಲ ಅಂತಾ ನಿಂಬೆ ಹಣ್‌ ಇಟ್ಕಂಡು ಜಾಂಡಾ ಊರವ್ರೆ. ಒನ್‌ ಓಟ್‌ ಫಾರ್‌ ಮೈ ಸನ್‌ ಪ್ಲೀಸ್‌ ಅಂತಾ ರಿಕ್ವೆಸ್ಟ್‌ ಮಾಡ್ತಾವ್ರೆ. ಭವಾನಿ ಮೇಡಂನೋರು ಫ‌ುಲ್‌ರೌಂಡ್‌ ಹಾಕ್ತಾವ್ರೆ.

ಚೇರ್ಮನ್ರು: ಎಂಎಲ್ಸಿ ಎಲೆಕ್ಸನ್‌ನಾಗೆ ತೆನೆ-ಕಮ್ಲ ಒಂದಾದ್ರೆ ಏನಾಗ್ತದೆ

ಅಮಾಸೆ: ಕೋಲಾರ್‌, ತುಮ್ಕೂರ್‌, ಮಂಡ್ಯ, ಬ್ಯಾಂಗ್ಲೂರ್‌ ರೂರಲ್‌ನಾಗೆ ಕಮ್ಲ ಕ್ಯಾಂಡೇಟ್‌ ಸೈಲಂಟ್‌ ಮಾಡ್ಸಿಬುಡಿ. ಕಲ್ಬುರ್ಗಿ, ಬೆಳ್ಗಾವಿ, ರಾಯ್‌ಚೂರ್‌, ಸಿವ್‌ಮೊಗ್ಗಾ, ಚಿಕ್‌ ಮಗ್ಳೂರ್‌, ಬೀದರ್‌ ನಾಗೆ ತೆನೆ ಓಟ್‌ ಕಮ್ಲಗೇ ಅಂತಾ ಫೈಸಲ್‌ ಆಗೈತಂತೆ.

ಚೇರ್ಮನ್ರು: ಅಂಗಾ ಇಚಾರಾ

ಅಮಾಸೆ:ಹೌದೇಳಿ, ಇಲ್ಲಾಂದ್ರೆ ಗೌಡ್ರು ಡೆಲ್ಲಿಗಂಟಾ ಹೋಗ್‌ ಬುಟ್ಟು ಮೋದಿ ಸಾಹೇಬ್ರ್ ಗೆ ಹ್ಯಾಂಡ್‌ ಕೊಡ್ತಾರಾ. ಏನೇನಾ ಯ್ತದೋ ನೋಡೂಮಾ. ಕೊರೊನಾ ಡೋಸ್‌ ಹಾಕ್ಸ್‌ಕಂಡು ನಾಟಿ ಕೋಳಿ ತಕ್ಕಂಡು ಹಟ್ಟಿಗ್‌ ಹೋಯ್ತೀನಿ. ಬತ್ತೀನಿ ಸಾ…..

 

ಎಸ್‌.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next