Advertisement

ಕುಮಾರಣ್ಣೋರ್‌ ಡೆಲ್ಲಿ ಕಾ ಕಿಸ್ಸಾ; ಕೈ-ಕಮ್ಲ ಟೆನ್ಸನ್ ಮೇ ಟುಸ್ಸಾ

11:29 AM Sep 11, 2022 | Team Udayavani |

ಅಮಾಸೆ: ನಮ್‌ಸ್ಕಾರ ಸಾ..

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಕಮ್ಲ ಪಾಲ್ಟಿ ಡಾಕ್ಟ್ರು ಸುಧಾಕರಣ್ಣೋರ್‌ ಬಿಗ್‌ ಪ್ರೋಗ್ರಾಂ ಮಾಡಿದ್ರು ಸಾ… ಒಂಟೋಗಿದ್ನಿ

ಚೇರ್ಮನ್ರು: ಹೌದೇನ್ಲಾ ಏನ್ಲಾ ಇಸೇಸಾ ಪ್ರೋಗ್ರಾಂದು

ಅಮಾಸೆ: ಬುದ್ವಂತ ಬಸಣ್ಣೋರು ಫ‌ುಲ್‌ ಖುಸ್‌, ಸುಧಾಕರಣ್ಣೋರು ಫ‌ುಲ್‌ ಜೋಶ್‌, ಕಟೀಲಣ್ಣ ಕಿಲಕಿಲ, ರಾಜಾಹುಲಿ ಯಡ್ನೂರಪ್ನೋರ್‌ ವಿಕ್ಟರಿ ಸಿಂಬಲ್‌ ವಿತ್‌ ಸ್ಮೈಲ್‌

Advertisement

ಚೇರ್ಮನ್ರು: ಸಾಮ್ರಾಟ್‌ ಅಸೋಕಣ್ಣೋರು, ಡಾಕ್ಟ್ರು ಅಸ್ವತ್‌ ಸಾಹೇಬ್ರು, ನಮ್‌ ಸೋಮಣ್ಣೋರು ಇರ್‌ಲಿಲ್ವೇನ್ಲಾ

ಅಮಾಸೆ: ಅವ್ರು ಇದ್ರು ಕಣೇಳಿ, ಆದ್ರೂ ಮಿಚಿಂಗ್‌ ಸುಧಾಕರಣ್ಣೋರು. ಸ್ನೆಕ್‌ ಡ್ಯಾನ್ಸ್‌ ಎಂಟಿಬಿ ಜತ್ಗೆ ಕುರುಕ್ಷೇತ್ರಾ ಪ್ರೊಡ್ನೂಸರ್‌ ಮುನಿ ಅಣ್ಣೋರು

ಚೇರ್ಮನ್ರು: ಇನ್ನೊಂದಪಾ ಕಮ್ಲ ಪವರ್‌ಗೆ ಬತ್ತೈತೇನ್ಲಾ

ಅಮಾಸೆ: ಅಂಗಂತಾ ಬಸಣ್ಣೋರು, ಸುಧಾಕರಣ್ಣೋರು ಬಸ್ತಿ ಮೇ ಸವಾಲ್‌ ಹಾಕ್ತಾವ್ರೆ. ರಾಜಾಹುಲಿ ಯಡೂರಪ್ನೋರು ಓವರ್‌ ಕಾನ್ಫಿಡೆನ್ಸ್‌ ಬ್ಯಾಡಾ ಅಂತಾ ಹೇಳ್ತಾವ್ರೆ

ಚೇರ್ಮನ್ರು: ಸಿದ್ರಾಮಣ್ಣೋರು ಪ್ರೋಗ್ರಾಂಗೆ ಟಕ್ಕರ್‌ ಏನ್ಲಾ

ಅಮಾಸೆ: ಕಮ್ಲ ಹೈಕ್ಳು ಆಂಗತಾವ್ರೆ. ಕೈ ಪಾಲ್ಟಿನೋರು ನಮ್ದು ಟೆನ್‌ ಲ್ಯಾಕ್‌, ನಿಮ್ದು ಒನ್‌ ಲ್ಯಾಕ್‌ ಅಂತಾ ಕಿಂಡಲ್‌ ಮಾಡ್ತಾವ್ರೆ.

ಚೇರ್ಮನ್ರು: ಯಡ್ನೂರಪ್ನೋರು ಡೆಲ್ಲಿಗೋಗ್‌ಬಂದ್‌ ಮ್ಯಾಕೆ ಏನೇನೋ ಇಚಾರ ಡಿಸ್‌ಕಸನ್‌ ಆಗ್‌ತೈತಂತೆ ಹೌದೇನ್ಲಾ.

ಅಮಾಸೆ: ಅಂಗಂತಿದ್ರು ಆದ್ರೆ ಎಲ್ರೂ ಉಲ್ಟಾ ಪಲ್ಟಾ ಆಗೈತೆ. ಬಸಣ್ಣೋರೇ ಕಂಟಿನ್ಯೂ, ರಾಜಾಹುಲಿ ರಾಜಗುರು. ಕಟೀಲಣ್ಣೋರ್‌ದೇ ಲೀಡರ್‌ಸಿಪ್‌ ಅಂತೇ

ಚೇರ್ಮನ್ರು: ಸಿದ್ರಾಮಣ್ಣೋರು ನಾವ್‌ ಒನ್‌ ಸಿಕ್ಸ್ಟಿ ಅಂತಾವ್ರೆ ಎಂಗ್ಲಾ

ಅಮಾಸೆ: ಇಂಟಿಲಿಜೆನ್ಸ್‌ ರಿಪೋರ್ಟ್‌ ಅಂತಾ ಕೈ ಪಾಲ್ಟಿನೋರು ಹೇಳ್ತಾವ್ರೆ. ಡಿಕೆ ಸಿವ್‌ಕುಮಾರಣ್ಣೋರು, ಸಿದ್ರಾಮಣ್ಣೋರು ಜತ್ಗೆ ಹೋದ್ರೆ ಹನ್ರಡ್‌ ಪರ್ಸೆಂಟ್‌ ಕ್ಲಿಕ್‌ ಆಯ್ತದೆ. ಇಲ್ಲಾಂದ್ರೆ ವಗೆ ಪ್ರೋಗ್ರಾಂ. ಕುಮಾರಣ್ಣೋರು ಇನ್ನೊಂದಪಾ ಸಿಎಂ ಆಯ್ತಾರೆ ಅಂತಾ ರಿಪೋರ್ಟ್‌ ಐತೆ.

ಚೇರ್ಮನ್ರು: ಸಿವ್‌ಕುಮಾರಣ್ಣೋರು-ಸಿದ್ರಾಮಣ್ಣೋರು ಜತ್ಗೆ ಹೋಗ್ತಾರಾ

ಅಮಾಸೆ: ಹೋಗ್‌ಬೇಕ್‌ ಅಂತಾ ರಾಹುಲ್‌ ಅಣ್ಣೋರು ಫ‌ರ್ಮಾನ್‌ ಕೊಟ್ಟವ್ರಂತೆ, ಅದ್ಕೆ ಸಿದ್ರಾಮಣ್ಣೋರ್‌ ಬರ್ತಡೇನಾಗೆ ಹಗ್ಗಿಂಗ್‌ ಅಂಡ್‌ ಕುಚ್ಚುಕ್ಕು ಕುಚ್ಚುಕು ಫೋಸ್‌ ಕೊಟ್ಟಿಂಗ್‌.

ಚೇರ್ಮನ್ರು: ನಮ್‌ ರೇವಣ್ಣೋರ್‌ ಕಾಣಿ¤ಲ್ಲಾ ಯಾಕ್ಲಾ.

ಅಮಾಸೆ: ಅವ್ರು ಲಿಂಬೆ ಹಣ್‌ ತಕ್ಕಂಡ್‌ ಎಲ್‌ ಮಡಿಗ್ಲಿ ಅಂತಾ ಪ್ಲೇಸ್‌ ಹುಡುಕ್ತಾವ್ರೆ. ನಮ್ದೆ ಕಪ್‌ ನಾನ್‌ ಮೊದ್ಲೆ ಹೇಳಿವ್ನಿ ಇಬ್ರಾಹಿಂ ಸಾಬ್ರು ಇದ್ರೆ ನಾವೇ ಪವರ್‌ ಹಿಡ್‌ ಕೋತೀವಿ ಅಂತಾ ಹೇಳವ್ರಂತೆ.

ಚೇರ್ಮನ್ರು: ಪ್ರೀತಂಗೌಡ್ರು ನನ್‌ ಮ್ಯಾಗೆ ಬಂದ್‌ ನಿಂತ್ಕಳಿ ಅಂತೇಳವ್ರಂತೆ

ಅಮಾಸೆ: ಹೌದೇಳಿ, ಅದ್ಕೆ ನೀನೇ ಬಂದ್‌ ನನ್‌ ಮ್ಯಾಗ್‌ ನಿಂತ್ಕೋ ಅಂತಾ ಸವಾಲ್‌ ಹಾಕವ್ರಂತೆ. ಹಾಸ್ನದಾಗೆ ಕ್ಯಾಂಡೇಟ್‌ ಜಾತ್ಕ ಹಿಡ್ಕಂಡು ಯಾರ್‍ನಾ ನಿಲ್ಸೂಮಾ ಅಂತಾ ತಲಾಷ್‌ ಮಾಡ್ತಾವ್ರಂತೆ

ಚೇರ್ಮನ್ರು: ಬೆಂಗ್ಳೂರ್‌ ಮುಳ್ಗೋಗದೆ ಅಂತಾ ಐಟಿ-ಬಿಟಿನೋರು ಫ‌ುಲ್‌ ರಾಂಗ್‌ ಆಗವ್ರಂತೆ ಹೌದೇನ್ಲಾ.

ಅಮಾಸೆ: ವಿಲ್ಲಾನಾಗೆ ರೆಸ್ಟ್‌ ಮಾಡ್ತಿದ್ರೆ ನೀರ್‌ ತುಂಬ್‌ಕಂಡದೆ ನಾವ್‌ ವೀಕೆಂಡ್‌ ಪಾಲ್ಟಿ ಎಂಗ್‌ ಮಾಡೋದು ಅಂತಾ ಎಲ್ರೂ ಟೆನ್ಸನ್‌ ಆಗವ್ರೆ. ಬಸಣ್ಣೋರು ಡೋಂಟ್‌ ವರಿ ವಸಿ ಪ್ರಾಬ್ಲಿಂ ಆಗೈತೆ. ಎಲ್ರೂ ಸರೋಯ್ತದೆ, ವೀಕೆಂಡ್‌ ಟ್ರಿಪ್‌ ನಮ್‌ ಪ್ರೋಗ್ರಾಂ ಬಂದ್‌ಬುಡಿ, ಸುಧಾಕರಣ್ಣೋರು ಎಲ್ಲಾ ಅರೇಂಜ್‌ ಮಾಡವ್ರೆ ಅಂದ್ರಂತೆ.

ಚೇರ್ಮನ್ರು: ಕುಮಾರಣ್ಣೋರು ಏನೋ ಪಿಲಾನ್‌ ಮಾಡ್ತಾವ್ರಂತೆ ಸೈಲಂಟಾಗೆ ಹೌದೇನ್ಲಾ

ಅಮಾಸೆ: ಅವ್ರು ಪಿಲಾನ್‌ ಮಾಡೋದ್ರಾಗೆ ಎಕ್ಸ್‌ಪರ್ಟ್‌. ಕೈ-ಕಮ್ಲ ಪಾಲ್ಟಿಕೇ ಹಲ್ವಾ ಕೊಡೋದ್‌ ಎಂಗೆ ಅಂತಾ ಇಬ್ರಾಹಿಂ ಸಾಬ್ರು ಜತ್ಗೆ ಡೀಪ್‌ ಡಿಸ್‌ಕಸನ್‌ ಮಾಡ್ತಾವ್ರಂತೆ. ತೆಲಂಗಾಣ ಬ್ರದರ್‌ ರಾವ್‌ಗಾರು ಜತ್ಗೂ ಬಾತ್‌ ಚಿತ್‌ ಅಗೈತೆ.

ಚೇರ್ಮನ್ರು: ಯಡ್ನೂರಪ್ನೋರು, ಸಿದ್ರಾಮಣ್ಣೋರು ಅಂಡರ್‌ಸ್ಟಾಡಿಂಗ್‌ ಅಂತಾವ್ರೆ

ಅಮಾಸೆ: ಅದ್ಕೆ ನ್ಯಾಷನಲ್‌ ಲೆವೆಲ್‌ನಾಗೆ ಪೊಜಿಸನ್‌ ಕೊಟ್‌ ಬುಟ್ಟು ಬೋನ್‌ನಾಗೆ ಹಾಕ್‌ಬುಟ್ಟವ್ರೆ. ದಿನಾ ಸೆಲ್ಯುಟ್‌ ಹೊಡ್ದು ನೀವೇ ನಮ್‌ ಬಾಸ್‌ ಅಂತಾ ಹೇಳ್ತಾವ್ರೆ. ಅವ್ರ್ ಹೊರ್ಗೆ ಬರಾಂಗಿಲ್ಲ, ಗುರ್ರ ಅನ್ನಂಗಿಲ್ಲ.

ಚೇರ್ಮನ್ರು: ಆದ್ರೂ ಆವಾಗ್‌ ಅವಾಗ್‌ ರಾಂಗ್‌ ಆಯ್ತಾರಂತೆ. ಬಸಣ್ಣೋರ್ಗೆ ಅವಾಜ್‌ ಹಾಕ್ತಾರಂತೆ

ಅಮಾಸೆ: ಅಂಗೇಯ, ರಾಂಗ್‌ ಆಗಿಲ್ಲಾಂದ್ರೆ, ಅಂಡರ್‌ ಸ್ಟಾಡಿಂಗ್‌ ನಿಕ್ಕಿ ಅಂತಾಗೋಯ್ತದೆ. ಎಲ್ರೂ ವಿಜಯೇಂದ್ರ ಬಾಹುಬಲಿಗೋಸ್ಕರ ಹಲ್‌ಕಚ್‌ಕಂಡ್‌ ಅವ್ರೆ ನೋಡುಮಾ ಏನೇನ್‌ ಆಯ್ತದೋ. ನನ್‌ಹೆಂಡ್ರು ಮಟನ್‌ ಕೈಮಾ ತತ್ತಾ ಅಂದವ್ರೆ ಬತ್ತೀನಿ ಸಾ…

 ಎಸ್‌.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next