Advertisement

ರಾಜಾಹುಲಿ ಮ್ಯಾನ್‌ ಆಫ್ ದ ಮ್ಯಾಚ್‌…ಸಿದ್ರಾಮಣ್ಣೋರು ಪಂಚೆ ಟೈಟ್‌…

08:56 AM Sep 26, 2021 | Team Udayavani |

ಅಮಾಸೆ: ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಅಸೆಂಬ್ಲಿನಾಗೆ ಸೆಸನ್‌ ಇತ್ತೂಂತಾ ಒಂಟೋಗಿದ್ದೆ ಸಾ….

ಚೇರ್ಮನ್ರು: ಏನ್ಲಾ ಸೆಸನ ಇಸೇಸಾ

ಅಮಾಸೆ: ರಾಜಾಹುಲಿ ಮ್ಯಾನ್‌ ಆಫ್ ದ ಮ್ಯಾಚ್‌. ಬಸ್ವರಾಜ್‌ ಬೊಮ್ಮಾಯಣ್ಣೋರು ಎಕ್ಸಾಂನಾಗೆ ಪಾಸ್‌. ಸಿದ್ರಾಮಣ್ಣೋರು ಪಂಚೆ ಟೈಟ್‌ ಮಾಡ್ಕಂಡ್‌ ಟಾಂಗಾನಾಗೆ ರೈಯ ರೈಯ ಅಂತೇಳಿ ಸೈಕಲ್‌ಮ್ಯಾಗೆ ಡಿಕೆಶಿ ಜತ್ಗೆ ಏ ದೋಸಿತಿ ಅಂತಾ ರವಂಡ್‌ ಹಾಕಿದ್ರು. ಅಷ್ಟ್ರಾಗೆ ಟೆನ್‌ ಡೇಸ್‌ ಅಸೆಂಬ್ಲಿ ಪಿನಿಶ್‌ ಆಗೋಯ್ತು

Advertisement

ಚೇರ್ಮನ್ರು: ರೇವಣ್ಣೋರು ಯಾಕ್ಲಾ ರಾಂಗ್‌ ಆಗಿದ್ರು

ಅಮಾಸೆ: ಅವ್ರುದು ರೂಲ್‌ ಸಿಕ್ಟಿ ನೈನ್‌ ಪ್ರಾಬ್ಲಿಮ್ಮು. ಎಲ್‌ ಹೋದ್ರು ಅಲ್ಗೇ ಬತ್ತಿದ್ರು. ಸ್ಪೀಕರ್‌ ಸಾಹೇಬ್ರು ಗರಂ ಆಗ್‌ ಬುಟ್ಟು ಜಾಡ್ಸ್‌ಬುಟ್ರಾ

ಚೇರ್ಮನ್ರು: ಎಂತಧ್ದೋ ಫ‌ಂಡ್‌ ರಿಲೀಸ್‌ ಮಾಡಿಲ್ಲ, ಎಲ್ರುಕೂ ಕಷ್ಟಾ ಆಗೋ ಬುಟ್ಟದೆ ಅಂತಾ ರೇವಣ್ಣೋರು ಹೇಳಿದ್ರಲ್ಲ ಪಾಪ

ಅಮಾಸೆ: ಅವ್ರು ಹೊಳೇನರಸೀಪುರ್‌ ಪ್ರಾಬ್ಲಿಂ ಸ್ಟಾರ್ಟ್‌ ಮಾಡ್ಕಂಡು ಬೀದರ್‌ ಗಂಟಾ ಒಂಟೋಗಿದ್ರು. ಅದ್ಕೆ ಮಾಧುಸ್ವಾಮಣ್ಣೋರು, ನೀವ್‌ ಎಲ್ಲಂದ್ರಲ್ಲಿ ಮಕ್ಳು ಹುಟ್ಸೆದ್ರೆ ಎಂಗೆ ಅಂತಾ ದಬಾಯ್ಸಿದ್ರು. ಅದ್ಕೆ ರೇವಣ್ಣೋರು, ನಯಾ ಪೈಸೆ ಎಲ್ಲಾದ್ರೂ ತಿಂದಿದ್ರೆ ಒನ್‌ ಸೆಕೆಂಡ್‌ ನಾನ್‌ ಇರಾಕಿಲ್ಲ, ಬನ್ರಿ ಸಿವ್‌ಲಿಂಗೇಗೌಡ್ರೆ ಅಂದ್ರು. ಅದ್ಕೆ ಸಿವ್‌ಲಿಂಗೇಗೌಡ್ರು ನಿಮ್ದೇನಾರಾ ಆಗ್ಲಿ ನಂದ್‌ ಫೈಸ್ಲು ಆಗ್ಬೇಕು. ನೀ ನಡ್ಯಾಣ ನಾ ಬತ್ತೀನಿ ಅಂತಾ ಕೈ ಕೊಟ್‌ ಬುಟ್ರಾ

ಚೇರ್ಮನ್ರು: ತೆನೆ ಪಾಲ್ಟಿನಾಗೆ ಎಲ್ರೂ ಖಾಲಿ ಆಯ್ತಾವ್ರಂತೆ ಹೌದೇನ್ಲಾ

ಅಮಾಸೆ: ಹೌದೇಳಿ, ಮೈಸೂರ್‌ ಜಿಟಿ ದ್ಯಾವೇಗೌಡ್ರು ಕೈಗೆ ಜೈ ಅಂದ್‌ಮ್ಯಾಕೆ, ಕೋಲಾರ್‌ ಸೀನ್‌ವಾಸ್‌ಗೌಡ್ರು ನಂದೂ ಒಂದು ಗೋವಿಂದಾ ಅಂದವ್ರೆ. ಎಲೆಕ್ಸನ್‌ ಬತ್ತಿದ್ದಂಗೆ ಫೈವ್‌ ವಿಕೆಟ್ಸ್‌ ಗಾನ್‌ ಅಂತೆ.

ಚೇರ್ಮನ್ರು: ಬೊಮ್ಮಾಯಣ್ಣೋರು ಸಂದಾಗಿ ನಡೆಸಿದ್ರಾ ಅಸೆಂಬ್ಲಿನಾ

ಅಮಾಸೆ: ಅದ್ರಾಗೆ ನೋ ಡೌಟ್‌. ಫ‌ುಲ್‌ ಮಾಕ್ಸ್‌ನಾಗೆ ಪಾಸ್‌ ಆಗೋದ್ರು. ಒರಿಜಿನಲ್‌ ಕಮ್ಲ ಪಾಲ್ಟಿ ಅವ್ರೂ ಗಾಬ್ರಿ ಆಗೋದ್ರು. ಆ ರೇಂಜ್‌ಗೆ ಕೈ ಪಾಲ್ಟಿನಾ ಅಟ್‌ಕಾಯ್ಸ ಕಂಡ್ರು. ಸ್ಪೀಕರ್‌ ಸಾಹೇಬ್ರು ರಾಜಾಹುಲಿಗೆ ಬೆಸ್ಟ್‌ ಎಂಎಲ್‌ಎ ಅಂತಾ ಪೈಜ್‌ ಕೊಟ್‌ಬುಟ್ರಾ. ಒಂತರಾ ಅವ್ರೇ ಮ್ಯಾನ್‌ ಆಫ್ ದ ಮ್ಯಾಚ್‌.

ಚೇರ್ಮನ್ರು: ಸಿದ್ರಾಮಣ್ಣೋರು ಪಂಚೆ ಯಾಕ್ಲಾ ಬಿಧ್ದೋಯ್ತು

ಅಮಾಸೆ: ಅದು ಅಂಗೇಯಾ, ಅವಾಗ್‌ ಅವಾಗ್‌ ಬಿಧ್ದೋಯ್ತಾ ಇರ್ತದೆ ಬುಡಿ. ಇದೇನ್‌ ಮೊದ್ಲಲ್ಲ. ಪಂಚೆ ಬೀಳ್ಳೋವರ್ಗು ಅವ್ರಗೂ ಗ್ಯಾನಾ ಇರ್ಲಿಲ್ಲಾ, ಡಿಕೆ ಸಿವ್‌ಕುಮಾರ್‌ ಸಾಹೇಬ್ರು ಕಿವಿಯಾಗೆ ಪಂಚೆ ಹುಸಾರ್‌ ಅಂತಾ ಪಸರ್‌ ಕೊಟ್ರಾ, ಇವ್ರ್ ಮೈಕ್‌ಸೆಟ್‌ನಾಗೆ ಅನೌನ್ಸ್‌ ಮಾಡ್‌ಬುಟ್ರಾ

ಚೇರ್ಮನ್ರು: ಕುಮಾರಣ್ಣೋರು ಏನೋ ಪಿಲಾನ್‌ ಮಾಡ್ತಾವ್ರಂತೆ

ಅಮಾಸೆ: ಹೌದೇಳಿ, ಸನ್‌ ಜಾಗ್ವಾರ್‌ ನಿಖೀಲ್‌ ಅಣ್ಣೋರು ಡ್ಯಾಡಿ ಆದ್ಮೇಕೆ, ಇವ್ರು ಗ್ರ್ಯಾಂಡ್‌ ಫಾದರ್‌ ಆಗವ್ರೆ. ಇನ್ನೊಂದಪಾ ಸಿಎಂ ಆಯ್ತೀರಿ ಅಂತಾ ಜೋಯಿಸ್ರು ಹೇಳವ್ರಂತೆ. ಅದ್ಕೆ ಒನ್‌ ತರ್ಟಿ ಟೂ ಕ್ಯಾಂಡೇಟ್‌ ಫೈನಲ್‌ ಮಾಡ್‌ ಬುಟ್ಟು ತೋಟ್‌ದಾಗೆ ಟ್ರೈನಿಂಗ್‌ ಕೊಡ್ತಾರಂತೆ, ಜತ್ಗೆ ಪಾಲ್ಟಿ ಸ್ಟ್ರಾಂಗ್‌ ಮಾಡೋ ಟಾಸ್ಕ್ ಕೊಟ್‌ಬುಟ್ಟು ಪಾಸ್‌ ಆದ್ರೆ ಟಿಕೆಟ್‌ ಇಲ್ಲಾಂದ್ರೆ ಗೇಟ್‌ಪಾಸ್‌ ಅಂತಾ ವಾರ್ನಿಂಗ್‌ ಕೊಡ್ತಾರಂತೆ.

ಚೇರ್ಮನ್ರು: ಅದೆಲ್ಲಾ ನಡೀತದಾ

ಅಮಾಸೆ: ತೆನೆ ಪಾಲ್ಟಿನಾಗೆ ಸಬ್‌ ಕುಚ್‌ ಹೋತಾ ಹೈ. ಕುಮಾರಣ್ಣೋರು ಈ ದಪಾ ನೋ ಮಿಸ್ಸಿಂಗ್‌ ಅಂತೆ. ಪಕ್ಕಾ ಪಿಲಾನ್‌, ಆಪರೇಷನ್‌ ಸಕ್ಸಸ್‌ ನೋಡ್ತಾ ಇರಿ ಬ್ರದರ್‌ ಕಮ್‌ ಬ್ಯಾಕ್‌ ಟು ಯು ಅಂತಾ ಕಣ್‌ ಮಿಟಿಕ್‌ಸ್ತಾವ್ರೆ ನೋಡುಮಾ

ಏನಾಯ್ತದೋ. ನನ್‌ ಹೆಂಡ್ರು ಮಟನ್‌ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ..

ಎಸ್.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next