Advertisement

Matinee: ಸತೀಶ್- ರಚಿತಾ ಚಿತ್ರದ ‘ಸಂಜೆ’ ಹಾಡು ಬಂತು

01:04 PM Aug 07, 2023 | Team Udayavani |

ಈ ಹಿಂದೆ ನಟ ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ “ಅಯೋಗ್ಯ’ ಸಿನಿಮಾದ “ಏನಮ್ಮಿ ಏನಮ್ಮಿ…’ ಹಾಡು ಯು-ಟ್ಯೂಬ್‌ ನಲ್ಲಿ ಬರೋಬ್ಬರಿ 108 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಇದೀಗ ಮತ್ತೆ ಸತೀಶ್‌ ಮತ್ತು ರಚಿತಾ ಜೋಡಿಯ ಅಂಥದ್ದೇ ಒಂದು ಹಾಡಿನ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಅಂದಹಾಗೆ, ಅದು “ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು.

Advertisement

ಹೌದು, ಇತ್ತೀಚೆಗಷ್ಟೇ “ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಬಿಡುಗಡೆಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ವಿಜಯ್‌ ಪ್ರಕಾಶ್‌ ದನಿಯಾಗಿದ್ದಾರೆ.

ಇದೇ ವೇಳೆ ಈ ಹಾಡಿನ ಬಗ್ಗೆ ಮಾತನಾಡಿರುವ ನಟ ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಇಬ್ಬರೂ ಕೂಡ ತಮ್ಮಿಬ್ಬರ ಕೆಮಿಸ್ಟ್ರಿಯಲ್ಲಿ ಮೂಡಿಬಂದಿರುವ ಈ ಹಾಡು ಆಡಿಯನ್ಸ್‌ಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಇಂದಿಗೂ ನನ್ನ ಸಿನಿಮಾದ ಸೂಪರ್‌ ಹಿಟ್‌ ಹಾಡುಗಳ ಸಾಲಿನಲ್ಲಿ ಇರುವಂಥದ್ದು, “ಏನಮ್ಮಿ ಏನಮ್ಮಿ…’ ಹಾಡು. ಮೊದಲ ಬಾರಿ ಸತೀಶ್‌ ಅವರೊಂದಿಗೆ ಅಭಿನಯಿಸಿದ್ದ ಈ ಹಾಡು ಎಲ್ಲರಿಗೂ ಇಷ್ಟವಾಗಿತ್ತು. ಅದೇ ರೀತಿ ಈ ಹಾಡು ಕೂಡ ಎಲ್ಲರಿಗೂ ಇಷ್ಟವಾಗಲಿದೆ. ಕಲರ್‌ಫ‌ುಲ್‌ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡು ಮತ್ತು ಚಿತ್ರೀಕರಿಸಿದ ರೀತಿ ಎಲ್ಲವೂ ನೋಡುವವರ ಗಮನ ಸೆಳೆಯಲಿದೆ’ ಎನ್ನುವುದು ರಚಿತಾ ಮಾತು.

“ಯಾವುದೇ ಹಾಡು ಸಿನಿಮಾಕ್ಕೆ ಮೊದಲ ಆಮಂತ್ರಣವಿದ್ದಂತೆ. ಒಂದು ಹಾಡು ಹಿಟ್‌ ಆಯಿತು ಅಂದ್ರೆ ಅದರ ಮೇಲೆ ಸಹಜವಾಗಿಯೇ ಪ್ರೇಕ್ಷಕರಿಗೆ ಕುತೂಹಲ ಮೂಡುತ್ತದೆ. “ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಕೂಡ ಕೇಳುಗರನ್ನು ಕಾಡುವಂತಿದೆ’ ಎನ್ನುತ್ತಾರೆ ನಟ ನೀನಾಸಂ ಸತೀಶ್‌.

Advertisement

ರೊಮ್ಯಾಂಟಿಕ್‌ ಲವ್‌ ಸ್ಟೋರಿಯ ಜೊತೆಗೆ ಹಾರರ್‌ ಕಾಮಿಡಿ ಕಥಹಂದರವಿರುವ “ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್‌ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಲವರ್‌ ಬಾಯ್‌ ಗೆಟಪ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ.

“ಎಫ್ 3 ಪ್ರೊಡಕ್ಷನ್ಸ್‌’ ಬ್ಯಾನರ್‌ನಡಿ ಪಾರ್ವತಿ ಎಸ್‌. ಗೌಡ ನಿರ್ಮಿಸಿರುವ “ಮ್ಯಾಟ್ವಿ’ ಸಿನಿಮಾಕ್ಕೆ ಸುಧಾಕರ್‌ ಛಾಯಾಗ್ರಹಣ, ಕೆ. ಎಂ. ಪ್ರಕಾಶ್‌ ಸಂಕಲನವಿದೆ. “ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್‌ ನೀನಾಸಂಗೆ ರಚಿತಾ ರಾಮ್‌ ಜೊತೆಗೆ ಅದಿತಿ ಪ್ರಭುದೇವ ಕೂಡ ನಾಯಕಿಯಾಗಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next