Advertisement

ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

02:53 PM Dec 03, 2021 | Team Udayavani |

ಬೆಳಗಾವಿ: ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿಯೇ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.

Advertisement

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಇರುವಂತಹ ಮತಗಳಲ್ಲಿ ಎರಡು ಸ್ಥಾನ ಗೆಲ್ಲಲಿಕ್ಕೆ ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಗೊಂದಲವಿದೆ. ರಮೇಶ್ ಜಾರಕಿಹೊಳಿ ಒಂದು ಲಖನ್ ಜಾರಕಿಹೊಳಿ ಅಥವಾ ಮಹಾಂತೇಶ ಕವಟಗಿಮಠ ಇಬ್ಬರಲ್ಲಿ ಒಬ್ಬರನ್ನು ಗೆಲ್ಲಿಸಬೇಕು. ಇಬ್ಬರನ್ನೂ ಗೆಲ್ಲಿಸುವ ಶಕ್ತಿ ಅವರಲ್ಲಿ ಇಲ್ಲ ಎಂದರು.

ಲಖನ್ ಬಗ್ಗೆ ಬಹಳಷ್ಟು ಟೀಕೆ ಮಾಡಿದ್ದೇವೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ನಮ್ಮ ಪಕ್ಷ ಗೆಲ್ಲಬೇಕು. ಅದರಿಂದಲೇ ನಮಗೆ ಗೌರವ ಬರಲಿದೆ. ಲಖನ್ ಮತ್ತು ಬಿಜೆಪಿ ನಮ್ಮ ಪಕ್ಷದ ಎದುರಾಳಿಗಳೇ ಅವರ ವಿರುದ್ಧವೇ ಚುನಾವಣೆ ಮಾಡುತ್ತಿದ್ದೇವೆ. ಸದ್ಯಕ್ಕೆ ಅವರು ಈ ಚುನಾವಣೆ ಮಾಡುವುದರಿಂದ ಸಂಬಂಧ ಜೋಡಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ:ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಬಿಜೆಪಿಯಲ್ಲಿಯೇ ಗೊಂದಲವಿದೆ. ಬಿಜೆಪಿ ಪಕ್ಷದ ಬ್ಯಾನರ್ ದಲ್ಲಿ ರಮೇಶ್ ಜಾರಕಿಹೊಳಿ ಕಾರ್ಯಕ್ರಮ ಮಾಡುತ್ತಾರೆ. ಅದೇ ವೇದಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ವೋಟ್ ಹಾಕಿ ಎನ್ನುತ್ತಾರೆ. ಮೊದಲು ಅದನ್ನು ಸರಿ ಮಾಡಿಕೊಳ್ಳಲು ಹೇಳಿ ಎನ್ನುವ ಮೂಲಕ ಎದುರಾಳಿಗಳಿಗೆ ತಿವಿದರು.

Advertisement

ಸಾಮಾನ್ಯವಾಗಿ ಗ್ರಾಮ ಪಂಚಾಯತಿ ಸದಸ್ಯರು ಶಾಸಕರ ಕಂಟ್ರೋಲ್ ದಲ್ಲಿ ಇರಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಶಾಸಕರಿರುವುದರಿಂದ ನಿಮ್ಮ ಅಭ್ಯರ್ಥಿಯೇ ಗೆಲುವು ಪಡೆಯಲಿದ್ದಾರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ಹೆಚ್ಚಿಗೆ ಇದ್ದರೂ ಸಹ, ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚಿದ್ದಾರೆ ಇದರಿಂದ ನಮಗೆ ಅನುಕೂಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರನ್ನು ಒಂದಲ್ಲಾ ಒಂದು ರೀತಿ ಸುಲಿಗೆ ಮಾಡುತ್ತಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಿ ಇಂಟರ್ನೆಟ್ ಬೆಲೆ ಜಾಸ್ತಿ ಮಾಡಿದೆ  ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಪಕ್ಷ ವಿವೇಕರಾವ್ ಪಾಟೀಲ ಬಿಟ್ಟು, ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷೇತರವಾಗಿ ಲಖನ್ ಸ್ಪರ್ಧೆ ಮಾಡಿಸಿದ್ದೇನೆ ಎಂಬ ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿವೇಕರಾವ್ ಪಾಟೀಲ್ ಅವರ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಲಖನ್ ಜಾಗದಲ್ಲಿ ವಿವೇಕರಾವ್ ಪಾಟೀಲ ನಿಲ್ಲಿಸಬೇಕಿತ್ತು. ಯಾಕೆ ಹಾಗೇ ಮಾಡಲಿಲ್ಲ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next