Advertisement

ಕೋವಿಡ್ ನಿರ್ವಹಣೆಯ ಲೆಕ್ಕ ವಿಷಯದಲ್ಲಿ ಸರಕಾರ ಸತ್ಯ ಮರೆ ಮಾಚುತ್ತಿದೆ: ಸತೀಶ ಜಾರಕಿಹೊಳಿ

06:12 PM Jul 31, 2020 | sudhir |

ಬೆಳಗಾವಿ: ಕೋವಿಡ್ ನಿರ್ವಹಣೆಯ ವಿಚಾರವಾಗಿ ಲೆಕ್ಕ ಕೊಡುವ ವಿಷಯದಲ್ಲಿ ಸರಕಾರವು ಸತ್ಯ ಮರೆ ಮಾಚುತ್ತಿದೆ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅರೋಪಿಸಿದರು.

Advertisement

ಬೆಳಗಾವಿಯಲ್ಲಿ  ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೋವಿಡ್ ನಿಯಂತ್ರಣ ವೆಚ್ಚದಲ್ಲಿ ಸರಕಾರ ಗೊಂದಲ ಹೇಳಿಕೆಗಳಿವೆ. ಇದರ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದರು.

ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ದಿಂದ ಯಾವುದೆ ಸಹಕಾರ ಸಿಕ್ಕಿಲ್ಲ ಎಂದ ಬಿಜೆಪಿ ಸಚಿವರ ಆರೋಪಕ್ಕೆ ತಿರುಗೇಟು ನೀಡಿದ ಅವರು ಕಾಂಗ್ರೆಸ್ ಶಾಸಕರು ಅವರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಸರಕಾರಕ್ಕೆ ಹೇಳುವ ಅಗತ್ಯವಿಲ್ಲ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,  ಜಿಲ್ಲೆಯ ಸಚಿವರ ವಿರುದ್ಧ ‘ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’  ಎಂಬ ಅಭಿಯಾನ ಆರಂಭಿಸುವಂತೆ ಸಲಹೆ ನೀಡಿದ ಅವರು ಮಂತ್ರಿಗಳು ಎಷ್ಟು ಸಭೆ ನಡೆಸಬೇಕಾಗಿತ್ತೋ ಅಷ್ಟು ಮಾಡಿಲ್ಲ, ಜನರಿಗೆ ಸ್ಪಂದಿಸಿಲ್ಲ.  ಬಹಳಷ್ಟು ಮಂತ್ರಿಗಳು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ. ತಮ್ಮ ಕ್ಷೇತ್ರಕ್ಕೂ ಬಂದಿಲ್ಲ, ತಮ್ಮ ಜಿಲ್ಲೆಗೂ ಬಂದಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಹಳ್ಳಿಗಳಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು. ಅನೇಕ ಜಿಲ್ಲೆಗಳಲ್ಲಿ ಹಾಸಿಗೆಗಳ ಕೊರತೆ ಇದೆ. ಇಂತಹ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆಯಾಗದೆ ನಮ್ಮಲ್ಲಿರುವ ಹಾಸ್ಟೆಲ್ ಗಳನ್ನು ಬಳಕೆ ಮಾಡಿಕೊಳ್ಳಬೇಕು. ಇದರಿಂದ ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next