ಕುಷ್ಟಗಿ: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ, ವರುಣಾ ಎರಡೂ ವಿಧಾನಸಭಾ ಕ್ಷೇತ್ರಗಳು ಸೇಪೇಸ್ಟ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೋಲಾರ ಸೇಪೇಸ್ಟ್ ಆಗಿರುವುದರಿಂದಲೇ ಅಲ್ಲಿ ಸ್ಪರ್ಧೆ ಬಯಸಿದ್ದು, ಹೈಕಮಾಂಡ್ ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದರು. ಕೋಲಾರದಲ್ಲಿ ಯಾರೋ ಒಬ್ಬರು ಸಿದ್ದರಾಮಯ್ಯ ವಿರುದ್ದ ಪೋಸ್ಟರ್ ಅಂಟಿಸಿದರೆ ಅದು ಜನರ ಅಭಿಪ್ರಾಯವಾಗದು. ಕೋಲಾರ ಕ್ಷೇತ್ರ ಕಠಿಣವಲ್ಲ, ಸುಗಮವಾಗಿರುವ ಹಿನ್ನೆಲೆಯಲ್ಲಿ ಆಕ್ಷೇತ್ರ ಸ್ಪರ್ಧಿಸಲು ಬಯಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ರಾಜ್ಯಾಧ್ಯಂತ ಅಭಿಮಾನಿಗಳಿದ್ದಾರೆ. ಅವರೀಗ ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟಪಡಿಸಿದ್ದು, ಇನ್ರ್ನೆಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈಗಾಗಲೇ ಟಿಕೇಟ್ ಹಂಚಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ಆಗಿದ್ದು ರಾಜ್ಯ ಮಟ್ಟದಲ್ಲಿ ಫೆ.2ರಂದು ಆಗಲಿದೆ, ಟಿಕೇಟ್ ಹಂಚಿಕೆ ಸಂಧರ್ಭದಲ್ಲಿ ಗೊಂದಲವಾಗುವುದು ಸಹಜವಾಗಿದೆ ಎಂದರು.
ಹಿಂದಿನ ಪ್ರಧಾನಿ ಡಾ, ಮನಮೋಹನಸಿಂಗ್ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಲಿಂಡರ್ ಬೆಲೆ 400 ಇತ್ತು, ಮೋದಿ ಸರ್ಕಾರ ಬಂದ ಮೇಲೆ ಹೆಚ್ಚು ಕಡಿಮೆ 1200 ಆಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ವಿಶೇಷವಾಗಿ ಗ್ಯಾಸ್ ಸಿಲಿಂಡರ್ ಖರೀಧಿಸಲು 2ಸಾವಿರ ರೂ. ಸಹಾಯವಾಗಲಿದೆ ಎಂದರು.
ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿ ಇಲ್ಲ ಎಲ್ಲಾ ಪಕ್ಷದಲ್ಲೂ ಇದ್ದು, ಜೆಡಿಎಸ್ ನಲ್ಲೂ ಕುಟುಂಬ ರಾಜಕಾರಣದ ಒಳಜಗಳ ಭವಾನಿ ರೇವಣ್ಣ ಮೂಲಕ ಬಹಿರಂಗಗೊಂಡಿದೆ ಎಂದರು. ಈ ಬಾರಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಅವಕಾಶಗಳಿದ್ದು, 113 ಸ್ಥಾನಗಳು ದಾಟಲಿದೆ. ಜನಾರ್ದನ ರಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಲಾಭವೂ ಇದೆ ನಷ್ಟವೂ ಇದೆ ಎಂದರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಜೊತೆಗಿದ್ದರು.
ಇದನ್ನೂ ಓದಿ: ಅದ್ದೂರಿಯಾಗಿ ಜರುಗಿದ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ರಥೋತ್ಸವ