Advertisement

ಪಾಕ್‌ ಗಡಿಯಲ್ಲಿ ಅಫ್ಘಾನ್ನರು

11:18 PM Sep 13, 2021 | Team Udayavani |

ಹೊಸದಿಲ್ಲಿ: ಆ.15ರಂದು ಅಫ್ಘಾನ್‌ ಅನ್ನು ತಾಲಿಬಾನಿಗಳು ವಶಕ್ಕೆ ಪಡೆದ ಅನಂತರದ ದಿನಗಳಲ್ಲಿ ಅನೇಕ ಅಫ್ಘಾನ್ನರು ನೆರೆಯ ದೇಶಗಳಾದ ಪಾಕಿಸ್ಥಾನ, ಇರಾನ್‌, ಉಜ್ಬೇಕಿಸ್ಥಾನ, ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ.

Advertisement

ಸೆ. 6ರಂದು ಉಪಗ್ರಹದಿಂದ ಸೆರೆಹಿಡಿಯಲಾದ ಚಿತ್ರಗಳು ಇದನ್ನು ಸಾಬೀತುಪಡಿಸಿವೆ. ಚಿತ್ರಗಳಲ್ಲಿ, ಸಾವಿರಾರು ಅಫ್ಘಾನ್ನರು, ಈ ದೇಶಗಳ ಗಡಿ ಭಾಗಗಳಲ್ಲಿ ನೆರೆದಿರುವುದು ಕಂಡುಬಂದಿದೆ. ಅಫ್ಘಾನಿಸ್ಥಾನ- ಪಾಕಿಸ್ಥಾನ ಗಡಿಯ ಚಮನ್‌ ಬಾರ್ಡರ್‌ ಕ್ರಾಸಿಂಗ್‌ನ ಸ್ಪಿನ್‌ ಬುಡ್ಕಕ್‌ ಹಾಗೂ ತೊರ್ಖಮ್‌ ಎಂಬ ಕಡೆ ಸಾವಿರಾರು ಜನರು, ಅಫ್ಘಾನಿಸ್ಥಾನದ ಗಡಿಯೊಳಗೆ ನಿಂತು ಪಾಕಿಸ್ಥಾನಕ್ಕೆ ಹೋಗಲು ಕಾಯುತ್ತಿರುವುದು ಉಪಗ್ರಹ ಚಿತ್ರಗಳಲ್ಲಿ ದಾಖಲಾಗಿದೆ. ಅಫ್ಘಾನಿಸ್ಥಾನ-ತಜಕಿಸ್ಥಾನ ಗಡಿಯ ಶೀರ್‌ ಖಾನ್‌ ಪ್ರಾಂತ್ಯದಲ್ಲಿ, ಅಫ್ಘಾನಿಸ್ಥಾನ -ಇರಾನ್‌ ಗಡಿಯ ಇಸ್ಲಾಮ್‌ ಖಾಲಾದಲ್ಲಿ ಇಂಥ ಪರಿಸ್ಥಿತಿ ಏರ್ಪಟ್ಟಿತ್ತು.

ನಾವಿದ್ದೇವೆ: “ಅಫ್ಘಾನಿಸ್ಥಾನದಲ್ಲಿ ಏರ್ಪಟ್ಟಿರುವ ಅರಾಜಕತೆಯಿಂದಾಗಿ ಅಲ್ಲಿನ ಬ್ಯಾಂಕ್‌ಗಳು, ಇತರ ಹಣಕಾಸು ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ದೇಶವು ಬಡತನಕ್ಕೆ ಜಾರಿದ್ದು,  ಅಫ್ಘಾನಿಸ್ಥಾನದ ಜನತೆ ಆರ್ಥಿಕ ತೊಂದರೆ ಗೊಳಗಾಗಿದ್ದಾರೆ. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಭಾರತವು, ಅಫ್ಘಾನ್‌ ಜನತೆಯ ನೆರವಿಗೆ ಸದಾ ಸಿದ್ಧವಿರುತ್ತದೆ’ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸೋಮವಾರ ನಡೆದ ಅಫ್ಘಾನಿಸ್ಥಾನದಲ್ಲಿ ಮಾನವೀಯ ದೃಷ್ಟಿಕೋನದ ಒಳನೋಟ ಎಂಬ ವಿಷಯದ ಬಗ್ಗೆ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಹೀಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next